ಸಧ್ಯಕ್ಕೆ ಲಾಕ್ ಡೌನ್ ಅಥವಾ ಯಾವುದೇ ಹೊಸ ನಿಯಮಗಳ ಜಾರಿ ಬೇಡ, ಅಗತ್ಯ ಬಿದ್ದರೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸೋಣ ಎಂದು ಸಭೆಯ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕರೋನಾ ಮೂರನೇ ಅಲೆ ನಿರ್ವಹಣೆ ನಿಟ್ಟಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಕೋವಿಡ್ ಉಸ್ತುವಾರಿ ಸಚಿವರು , ತಜ್ಞರು ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆದಿದ್ದು, ಸಭೆಯಲ್ಲಿ ಕರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಹತ್ವದ ನಿರ್ಧಾತ ತೆಗೆದುಕೊಂಡಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯರು ಹೇಳಿರುವ ಪ್ರಕಾರ, ಎರಡನೇ ಅಲೆ ಅಂತಿಮ ಅಂತದಲ್ಲಿದ್ದು ಮೂರನೇ ಅಲೆ ಪ್ರಾರಂಭವಾಗಿಲ್ಲ, ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಆತಂಕವಿರುವುದರಿಂದ ಮಕ್ಕಳ ಬಗ್ಗೆ ನಿಗಾ ವಹಿಸಬೇಕು. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಗಳಿಗೆ ಜನ ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದಿದ್ದಾರೆ.
9 ರಿಂದ 12ನೇ ತರಗತಿ ಶಾಲೆ-ಕಾಲೇಜುಗಳು ಸೆಪ್ಟೆಂಬರ್ 23ರಿಂದ ಆರಂಭವಾಗುತ್ತದೆ ಅದರ ಪರೀಪೂರ್ಣ ವರದಿ ಶೀಘ್ರದಲ್ಲಿ ಬರಲಿದೆ ಎಂದಿದ್ದಾರೆ. ಪಾಸಿಟಿವಿಟಿ ರೇಟ್ ಜಾಸ್ತಿ ಇರುವ ಜಿಲ್ಲೆಯಲ್ಲಿ ಶಾಲೆಯನ್ನು ತೆಯುವುದು ಬೇಡ. 2% ಕಡಿಮೆ ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳಲ್ಲಿ ಶಾಲೆಯನ್ನು ತೆರೆಯಬಹುದು ಎಂದು ತಜ್ಞರು ಸಲಹೆ ನೀಡಿದ್ಧಾರೆ. ಶಾಲಾ ಆರಂಭಕ್ಕು ಮುಂಚೆ ಕಡ್ಡಾಯವಾಗಿ ಶಿಕ್ಷಕರಿಗೆ, ಶಾಲಾ ಸಿಬ್ಬಂದಿಗೆ ಲಸಿಕೆ ಹಾಕಬೇಕು. ಶಾಲಾ ಆರಂಭವಾದ ನಂತರ ಆ ಪ್ರದೇಶದಲ್ಲಿ ಕರೋನ ಹೆಚ್ಚಳವಾದರೆ ಒಂದು ವಾರಗಳಕಾಲ ಮುಚ್ಚಬೇಕು ನಂತದ ಶಾಲೆಯನ್ನು ಸುದ್ದಿಕರಿಸಬೇಕು ಎಂದು ಹೇಳಿದ್ದಾರೆ.
ರಾಯಚೂರು ಗುಲ್ಬರ್ಗ, ಬಳ್ಳಾರು, ಬೀದರ್ ಕೊಪ್ಪಳ, ಹಾವೇರಿ, ಬಿಜಾಪುರ, ತುಮಕೂರು, ಚಿಕ್ಕಮಗಳೂರು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಟೆಸ್ಟ್ ಹೆಚ್ಚಿಸುವಂತೆ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು , ಮೈಸೂರು ಶಿವಮೊಗ್ಗ, ಗುಲ್ಬರ್ಗ ಮತ್ತು ಬೆಳಗಾಂ ಹುಬ್ಬಳ್ಳಿ 6 ಕಡೆ ಜಿನೋವ್ ಟೆಸ್ಟ್ ಲ್ಯಾಬ್ ಸ್ಥಾಪನೆ ಮಾಟಲಿದ್ದು ಸೋಮವಾರ ಇದಕ್ಕೆ ಅನುಮೋದನೆ ಮಾಡಲಾಗುತ್ತದೆ. ಮೂರುವಾರಗಳಲ್ಲಿ ಈ ಲ್ಯಾಬ್ ಸಿದ್ದವಾಗಲಿದ್ದು ಇದು ವೇರಿಯಂಟ್ ವೈರೆಸ್ ಪತ್ತೆ ಹಚ್ಚಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಮತ್ತು ಕೇರಳ ಎರಡಿ ರಾಜ್ಯಗಳ ಬಾರ್ಡರ್ ನಿಂದ ಹತ್ತು ಕಿಲೋಮೀಟರ್ ಒಳಗೆ ಎಲ್ಲಾ ಹಳ್ಳಿಗಳನ್ನು ಕರೋನ ಟೆಸ್ಟ್ ಒಳಪಡಿಸಬೇಕು ಎಂದು ಹೇಳಿದ್ದಾರೆ.
ಮೈಸೂರು, ದಕ್ಷಣ ಕನ್ನಡ, ಬೆಂಗಳೂರು, ಹಾಸನ ಇನ್ನೂ ನಾಲ್ಕು ಜಿಲ್ಲೆಗಳಲ್ಲಿ ಲಸಿಕೆ ಹಾಕುವುದನ್ನು ಹೆಚ್ಚಿಸಬೇಕಿದೆ. ಸದ್ಯಕ್ಕೆ ರಾಜ್ಯದಲ್ಲಿ 4 ಕೋಟಿ ಲಸಿಕೆ ಮಾಡಿದ್ದೇವೇ. 14 ಲಕ್ಷದಷ್ಟು ವ್ಯಾಕ್ಸಿನ್ ನಮ್ಮ ಬಳಿ ಇದೆ. ಈ ತಿಂಗಳ ಕೊನೆಯಲ್ಲಿ 30 ಲಕ್ಷ ಲಸಿಕೆ ಬರಲಿದೆ. ಇನ್ನೂ ಹೆಚ್ಚು ಲಸಿಕೆಯನ್ನು ಕೇಂದ್ರ ಆರೋಗ್ಯ ಸಚಿವರಲ್ಲಿ ಕೇಳಲಿದ್ದೇವೆ ಒಂದು ಕೋಟಿ ಲಸಿಕೆ ಬರುವ ನಿರೀಕ್ಷೆ ಇದೆ ಎಂದಿದ್ದಾರೆ.

ಸದ್ಯಕ್ಕೆ ಬೆಂಗಳೂರಲ್ಲಿ 0.72 ಪಾಸಿಟಿವ್ ರೇಟ್ ಇದ್ದು. ಪಾಸಿಟಿವ್ ರೇಟ್ ಎರಡು ಪರ್ಸೆಂಟ್ ಬಂದರೆ ಏನು
ಕ್ರಮ ಕೈಗೊಳ್ಳಬೇಕು ಎಂಬುದನ್ನು ನಾವು ಬಿಬಿಎಂಪಿಗೆ ನೀಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಗಡಿಯಲ್ಲಿ ಒಳಗೆ ಬರುವ ಎಲ್ಲರಿಗೂ ಆರ್ಟಿಪಿಸಿಆರ್ ಕಡ್ಡಾಯ ಮಾಡಿರುವುದನ್ನು ಕೇರಳ, ಹೈಕೋರ್ಟ್ ನಲ್ಲಿ ಪ್ರಶ್ನಿಸಿದೆ ಅದನ್ನು ಲೀಗಲಿ ನಾವು ಪೇಸ್ ಮಾಡುತ್ತೇವೆ. ನಮ್ಮ ಜೀವ ಜೀವನದ ಪ್ರಶ್ನೆ ಹಾಗಾಗಿ ಇದನ್ನು ನಾವು ಮಾಡಲೇಬೇಕು ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಸಧ್ಯಕ್ಕೆ ಲಾಕ್ ಡೌನ್ ನಂತಹ ಕಠಿಣ ಕ್ರಮ ಜಾರಿ ಬೇಡ, ಅಗತ್ಯ ಬಿದ್ದರೆ ವೀಕೆಂಡ್ ಕರ್ಫ್ಯೂ ಜಾರಿಗೆ ತರಬಹುದು. ಮುಂದಿನ ಎರಡು ವಾರ ಈಗಿರುವ ನಿಯಮಗಳನ್ನೇ ಮುಂದುವರೆಸಿಕೊಂಡು ಹೋಗಬೇಕು. ಹಬ್ಬಗಳಲ್ಲಿ ಜನರು ಒಂದೆಡೆ ಸೇರದಂತೆ ಎಚ್ಚರಿಕೆ ವಹಿಸಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಲ್ಲದೇ ಹೊರ ರಾಜ್ಯಗಳಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿ, ಗ್ರಾಮೀಣ ಭಾಗಗಳಲ್ಲಿ ಹಾಗೂ ಗಡಿ ಜಿಲ್ಲೆಗಳಲ್ಲಿ ಟೆಸ್ಟಿಂಗ್ ಹಾಗೂ ವ್ಯಾಕ್ಸಿನೇಷನ್ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ.



