ವಿಧಾನಸಭಾ ಚುನಾವಣೆಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಕುಟುಂಬ ಸಮೇತ ದಕ್ಷಿಣ ಕನ್ನಡದ ವಿವಿಧ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ ಅವರು, ಶ್ರೀ ಮಂಜುನಾಥನ ದರ್ಶನ ಪಡೆದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನಾನು ಟಿಕೆಟ್ ಸಿಗದೇ ಅಸಮಾಧಾನಗೊಂಡಿರುವವರ ಬಗ್ಗೆ ಮಾತನಾಡ್ತಿದ್ದೇನೆ. ಪಕ್ಷ ಅವರೆಲ್ಲರನ್ನ ಗೌರವಿಸಿ ಶಾಸಕರನ್ನಾಗಿ ಮಾಡಿದೆ. ಲಕ್ಷ್ಮಣ ಸವದಿ ನನ್ನ ಮತ್ತು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಆದ್ರೆ ಅವರು ಕೋಪದಿಂದ ಕೆಲ ಮಾತುಗಳನ್ನಾಡಿದ್ದಾರೆ ಅಷ್ಟೇ. ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರನ್ನ ಬಿಜೆಪಿ ಟಾರ್ಗೆಟ್ ಮಾಡಿಲ್ಲ ಅಂತ ಸಿಎಂ ಬೊಮ್ಮಾಯಿ ಹೇಳಿದರು.

ಎದುರಾಳಿ ಯಾರು ಅನ್ನೋದು ಸಹ ನನಗೆ ಮುಖ್ಯ . ಎದುರಾಳಿ ಯಾರೇ ಆಗಲಿ, ಚುನಾವಣೆಯಲ್ಲಿ ಹೇಗೆ ಹೋರಾಡಬೇಕು ಅನ್ನೋದು ನನಗೆ ಗೊತ್ತು. ಕೆ.ಎಸ್.ಈಶ್ವರಪ್ಪ ರಾಜಕೀಯದಿಂದ ನಿವೃತ್ತಿ ಹೊಂದಿಲ್ಲ. ರಾಜಕೀಯದಲ್ಲೇ ಇರುತ್ತಾರೆ. ಈಗಾಗಲೇ ಅವರ ಜೊತೆ ಹಿರಿಯರು ಮಾತ್ನಾಡಿದ್ದಾರೆ. ಎರಡನೇ ಪಟ್ಟಿ ಶೀಘ್ರದಲ್ಲೇ ನಾಳೆ ಅಥವಾ ಮರುದಿನ ಬರಲಿದೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.








