ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ, ನಾನು ಹೇಳುತ್ತಿರುವುದು ಸುಳ್ಳಾಗಿದ್ದರೆ, ಕುರುಡುಮಲೆ ಗಣೇಶನ ಮುಂದೆ ನಿಂತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ. ಇಂದು ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಅವರು,

” ನಾನು ಕುರುಡುಮಲೆ ಗಣೇಶನ ಮುಂದೆ ನಿಂತು ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕುತ್ತಿದ್ದೇನೆ, ವರ್ಗಾವಣೆ ದಂಧೆಯ ತನಿಖೆಗೆ ಹಾಲಿ ಅಥವಾ ನೀವೃತ ನ್ಯಾಯಾಧಿಶರನ್ನು ನೇಮಿಸಿ ವರ್ಗಾವಣೆ ದಂಧೆಯಲ್ಲಿ ಈ ಹಿಂದಿನ ಸರ್ಕಾರದ ಅವಧಿಗಿಂತ ಎರಡು ಪಟ್ಟು ಹೆಚ್ಚು ದಂಧೆಯಾಗಿಲ್ಲ ಅಂದ್ರೆ ಕುರುಡುಮಲೆ ಗಣೇಶ ನನಗೆ ಏನು ಬೇಕಾದರು ಶಾಪ ಕೊಡಲಿ” ಎಂದಿದ್ದಾರೆ.
” ಪ್ರಮುಖವಾಗಿ ಸಿದ್ದರಾಮಯ್ಯ ಅವರು ಕೇಂದ್ರಿಕೃತ ವರ್ಗಾವಣೆ ನೀತಿಯನ್ನು ತಂದಿದ್ದಾರೆ. ಎಲ್ಲಾವೂ ನಿಮಗೆ ಸೇರಬೇಕು ಎಂಬುವುದು ಇದರ ಹಿಂದಿನ ಉದ್ದೇಶ, ವರ್ಗಾವಣೆ ಆಗಲೇ ಬೇಕು ಅಂದ್ರೆ ಸಿಎಂ ಹಾಗು ಅವರ ಮಗನಿಗೆ ದುಡ್ಡು ಕೊಡಲೇ ಬೇಕುʼʼ ಎಂದು ಆರೋಪಿಸಿದ್ದಾರೆ.