ಸಿಎಂ ಸಿದ್ದರಾಮಯ್ಯ ದುಬಾರಿ ವೆಚ್ಚದ ಹೊಟೇಲ್ ಹೊಂದಿದ್ದಾರೆ ಎಂಬ ಹೆಚ್.ವಿಶ್ವನಾಥ್ ಆರೋಪಕ್ಕೆ ಭೈರತಿ ಸುರೇಶ್ ತಿರುಗೇಟು ನೀಡಿದ್ದಾರೆ. ಹೊಟೇಲ್, ಮಾಲ್, ಪೆಟ್ರೋಲ್ ಬಂಕ್ ಇರುವ ಜಾಗ ನಮ್ಮದು. ನನ್ನ ತಾತ ಖರೀದಿಸಿರುವ ಜಾಗ ಅದು ಎಂದು ದಾಖಲೆ ಬಿಡುಗಡೆ ಮಾಡಿದ್ದಾರೆ.
ಹೆಚ್. ವಿಶ್ವನಾಥ್‌ಗೆ ಬುದ್ದಿ ಭ್ರಮಣೆ ಆಗಿದೆ. ವಿಶ್ವನಾಥ್ ನಿಮ್ಹಾನ್ಸ್ ಸೇರುವುದೊಂದು ಬಾಕಿ ಇದೆ. ನಿವೇಶನ ಕೇಳಲು ಬಂದಿದ್ದ, ಕೊಡಲಿಲ್ಲ ಅಂತ ಈ ರೀತಿ ಆರೋಪ ಮಾಡಿದ್ದಾರೆ. ದಿನಬೆಳಗಾದ್ರೆ ಸಿದ್ದರಾಮಯ್ಯ, ಯತೀಂದ್ರ, ಪಾರ್ವತಮ್ಮನವರ ಬಗ್ಗೆಯೇ ಮಾತು. ನನ್ನ ತಾತನ ಆಸ್ತಿಗೂ ಸಿದ್ದರಾಮಯ್ಯಗೂ ಏನ್ ಸಂಬಂಧ ಎಂದು ಕೇಳಿದ್ದಾರೆ.
ವಿಶ್ವನಾಥ್ ಮಾತು ಮಿತಿ ಮೀರಿದೆ, ನಾವು ಎಷ್ಟು ಅಂತ ಸಹಿಸಿಕೊಳ್ಳಬೇಕು. ಮಾನನಷ್ಟ ಮೊಕದ್ದಮೆ ಹಾಕಿದ್ದೇವೆ ,ಕೋರ್ಟ್ ಕೂಡ ಛೀಮಾರಿ ಹಾಕಿದೆ. ಆದರೂ ಹುಚ್ಚನಂತೆ ಮಾತನಾಡುತ್ತಾನೆ. ಇನ್ನೊಂದು ಕ್ರಿಮಿನಲ್ ಕೇಸ್ ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.
ವಿಶ್ವನಾಥ್ ಹಾಗು ಅವನ ಮಗ ಇಬ್ಬರು ಬಂದಿದ್ರು. ಎಕರೆಗಟ್ಟಲೇ ಸಿಎ ಸೈಟು ಕೇಳಿದ್ರು. ನಾನು ಕೊಡೋಕಾಗಲ್ಲ ಅಂದೆ, ಅದಕ್ಕಾಗಿ ಈ ರೀತಿ ಆರೋಪ ಮಾಡಿದ್ದಾನೆ. ಸಿದ್ದರಾಮಯ್ಯ ವಿಶ್ವನಾಥ್‌ಗೂ ಹೋಲಿಕೆ ಮಾಡೋಕಾಗುತ್ತಾ..? ವಿಶ್ವನಾಥ್ ಈಸ್ ರೋಲ್‌ಕಾಲ್ ಫೆಲೊ, ಈ ಇಸ್ ಎ ಬ್ಲಾಕ್ ಮೇಲರ್ ಎಂದಿದ್ದಾರೆ.
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆ ತಂದಿದ್ದು ಕಾಂಗ್ರೆಸ್ ಪಕ್ಷ, ಸೋನಿಯಾ ಗಾಂಧಿ. ಕಾಂಗ್ರೆಸ್ ಪಾರ್ಟಿ ವಿಶ್ವನಾಥ್ ಅವರ ಅಪ್ಪನ ಮನೆ ಆಸ್ತಿಯಲ್ಲ. ಹೆಚ್ ವಿಶ್ವನಾಥ್ ಆಧಾರ ರಹಿತ ಆರೋಪ ಮಾಡ್ತಿದ್ದಾರೆ. ಗೊಬೆಲ್ಸ್ ವಂಶಸ್ಥರು ಅವರು. ಹೆಚ್ ವಿಶ್ವನಾಥ್ ಥರ್ಡ್ ಗ್ರೇಡ್ ವ್ಯಕ್ತಿ. ನನ್ನ ಪೂರ್ವಜರಿಂದ ಬಂದ ಪ್ರಾಪರ್ಟಿಗೂ ಸಿದ್ದರಾಮಯ್ಯ ಕುಟುಂಬಕ್ಕೂ ಏನು ಸಂಬಂಧ..? ಎಚ್ ವಿಶ್ವನಾಥ್‌ಗೆ ಮತಿಭ್ರಮಣೆ ಆಗಿದೆ ಎಂದಿದ್ದಾರೆ.
ನನ್ನ ತಾತ ಖರೀದಿ ಮಾಡಿದ ಜಮೀನು ಹೆಣ್ಣೂರ್ ಬಳಿಯಿದೆ. ಅಲ್ಲಿ ಎರಡು ಹೋಟೆಲ್‌ಗಳಿವೆ. ಇದಕ್ಕೂ ಸಿದ್ದರಾಮಯ್ಯಗೂ ಅವರ ಸೊಸೆಗೂ ಏನು ಸಂಬಂಧ..? ವಿಶ್ವನಾಥ್ ಬಗ್ಗೆ ನಾವು ಮಾತನಾಡಬೇಕಾಗಿರುವುದು ದೌರ್ಭಾಗ್ಯ. ಯಾರು ಸಹಾಯ ಮಾಡ್ತಾರೋ ಅವರನ್ನೇ ಕಚ್ಚುವ ಸ್ವಭಾವ ವಿಶ್ವನಾಥ್‌ಗಿದೆ. ಸಿದ್ದರಾಮಯ್ಯ ಮೇಲಿನ ಹೊಟ್ಟೆ ಉರಿಯಿಂದ ಬೇಸ್ ಲೆಸ್ ಅಲಿಗೇಷನ್ ಮಾಡ್ತಾರೆ ಎಂದಿದ್ದಾರೆ.
ವಿರೋಧ ಪಕ್ಷಗಳಿಗೆ ಸಿದ್ದರಾಮಯ್ಯನವ್ರೇ ಟಾರ್ಗೆಟ್. ಇದೇ ರೀತಿ ಆದ್ರೆ ಕಬ್ಬನ್ ಪಾರ್ಕ್, ವಿಧಾನಸೌಧ ಸಿದ್ದರಾಮಯ್ಯನವ್ರೆದ್ದೆ ಅಂತಾರೆ. ಹೆಣ್ಣೂರು ಜಾಗ ನಮ್ಮ ತಾತನದ್ದು, ಬಂಡವಾಳವೂ ನನ್ನದೆ. ಹೊಟೇಲ್‌ಗೆ ನಾನೇ ಇನ್ವೆಸ್ಟ್ ಮಾಡಿದ್ದೇನೆ. ವಿಶ್ವನಾಥ್ ಸಿಎಂ ಮನೆಗೆ ಬಂದು ಸಿದ್ದರಾಮಯ್ಯ, ಅವರ ಸೊಸೆ, ನನಗೆ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.