ಜಮ್ಮು ಕಾಶ್ಮೀರದ (Jammu Kashmir) ಕಿಶ್ತವಾರ್ ನಲ್ಲಿ ಮೇಘ ಸ್ಪೋಟ (Cloud burst) ಸಂಭವಿಸಿದ್ದು ದೊಡ್ಡ ಹಾನಿ ಅವಾಂತರಗಳು ಸೃಷ್ಟಿಯಾಗಿದೆ. ಈ ಘಟನೆಯಲ್ಲಿ ಇದುವರೆಗೂ 60 ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಇನ್ನು ನೂರಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದೆ. ಇದುವರೆಗೂ 167 ಮಂದಿಯನ್ನು ರಕ್ಷಣಾ ತಂಡಗಳು (Rescue operation) ರಕ್ಷಣೆ ಮಾಡಿದೆ.

ನಿನ್ನೆ (ಆ.14) ಮಧ್ಯಾಹ್ನ ಜಮ್ಮು ಕಾಶ್ಮೀರದ ಕಿಶ್ತವಾರ್ ನಲ್ಲಿ ಮೇಘಸ್ಪೋಟದಿಂದ ಧೀಡೀರ್ ಪ್ರವಾಹದ ಸ್ಥಿತಿ ನಿರ್ಮಾಣವಾಗಿ, ಮಚಾಯಿಲ್ ಮಾತಾ ಯಾತ್ರಾ ನಡೆಯುತ್ತಿದ್ದ ಮಾರ್ಗದಲ್ಲಿ ಮೇಘಸ್ಪೋಟ ಸಂಭವಿಸಿದೆ.ಹೀಗೆ ಮೇಘಸ್ಪೋಟ ಸಂಭವಿಸಿದಾಗ ಆ ಸ್ಥಳದಲ್ಲಿ 1,200 ಮಂದಿ ಇದ್ದರು ಎನ್ನಲಾಗಿದೆ.

ಕ್ಷಣ ಮಾತ್ರದಲ್ಲೇ ಸೃಷ್ಟಿಯಾದ ಧೀಡೀರ್ ಪ್ರವಾಹದಿಂದ ಒಟ್ಟು 16 ಮನೆಗಳು, ಸರ್ಕಾರಿ ಕಟ್ಟಡಗಳು, ತಾತ್ಕಾಲಿಕ ಟೆಂಟ್ ಗಳಿಗೆ ಹಾನಿಯುಂಟಾಗಿದೆ. ಇನ್ನು ಈ ಘಟನೆಯಲ್ಲಿ ಮೃತಪಟ್ಟ 60 ಮಂದಿಯ ಪೈಕಿ ಇದುವರೆಗೂ 46 ಶವ ಗಳನ್ನು ಹೊರಕ್ಕೆ ತೆಗೆಯಲಾಗಿದೆ. ಇದರ ಪೈಕಿ 21 ಶವಗಳ ಗುರುತು ಪತ್ತೆಯಾಗಿದ್ದು ಎನ್‌ಡಿಆರ್‌ಎಫ್, ರಾಷ್ಟ್ರೀಯ ರೈಫಲ್ಸ್ ನಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.












