ಚಿತ್ರದುರ್ಗದಲ್ಲಿ ನೈತಿಕ ಪೊಲೀಸ್ಗಿರಿ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಮುಸ್ಲಿಂ ಯುವತಿಗೆ ಡ್ರಾಪ್ ಕೊಟ್ಟಿದ್ದ ಹಿಂದೂ ಯುವಕನಿಗೆ ದುಷ್ಕರ್ಮಿಗಳು ಥಳಿಸಿದ್ದರು. ಈರಜ್ಜನಹಟ್ಟಿಯ ಉಮೇಶ್ ಎಂಬಾತನ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾದ ಉಮೇಶ್‌ನನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪುತ್ರ, ಉಮೇಶ್ ಕಾರಜೋಳ ಹಲ್ಲೆಗೊಳಗಾದ ಯುವಕನ ಆರೋಗ್ಯ ವಿಚಾರಿಸಿದ್ರು. ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು.. ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದ್ರು…
ಆದರೆ ಚಿತ್ರದುರ್ಗದಲ್ಲಿ ಮುಸ್ಲಿಂ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ ನಡೆಸಿದ ಪ್ರಕರಣ ತಿರುವು ಸಿಕ್ಕಿದೆ. ಡ್ರಾಪ್ ನೀಡಿದ್ದ ಉಮೇಶ್ ವಿರುದ್ಧ ಯುವತಿ ಪ್ರತಿದೂರು ದಾಖಲು ಮಾಡಿದ್ದಾಳೆ. ಡ್ರಾಪ್ ನೀಡುವ ನೆಪದಲ್ಲಿ ಉಮೇಶ್ ಲೈಂಗಿಕ ಕಿರುಕುಳ ನೀಡಿದ್ದ. ಈ ವೇಳೆ ತನ್ನ ರಕ್ಷಣೆಗೆ ಅಣ್ಣ ಮತ್ತು ಸ್ನೇಹಿತರು ಬಂದಿದ್ದರು ಎಂದು ಹೇಳಿಕೆ ನೀಡಿದ್ದಾಳೆ.
ಡ್ರಾಪ್ ನೀಡಿದ್ದ ಯುವಕ ಉಮೇಶ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಹಲ್ಲೆ ಮಾಡಿದ ಆರೋಪಿಗಳ ರಕ್ಷಣೆಗೆ ಯುವತಿ ಮುಂದಾಗಿದ್ದಾಳೆ ಅನ್ನೋ ಮಾಹಿತಿ ಕೂಡ ಹರಿದಾಡ್ತಿದೆ. ಯುವತಿ ಪ್ರತಿದೂರು ಸ್ವೀಕಾರ ಮಾಡಿರುವ ಪೊಲೀಸ್ರು ತನಿಖೆ ನಡೆಸ್ತಿದ್ದಾರೆ. ಯುವಕ ಡ್ರಾಪ್ ನೀಡುವಾಗ ಲೈಂಗಿಕ ಕಿರುಕುಳ ಅನ್ನೋದು ಶುದ್ಧ ಸುಳ್ಳು. ಒಂದು ವೇಳೆ ಆ ರೀತಿಯ ಘಟನೆ ಆಗಿದ್ದರೆ ದೂರು ನೀಡಬೇಕಿತ್ತು. ಹಲ್ಲೆ ಮಾಡಿದ್ದು ಸರೀನಾ ಎಂದು ಪ್ರಶ್ನಿಸಿದ್ದಾರೆ.