ಚಿತ್ರದುರ್ಗ-ದಾವಣಗೆರೆ ಎಂಎಲ್‌ಸಿ ಕ್ಷೇತ್ರದಿಂದ ಎರಡು ಸಲ ಸಲೀಸಾಗಿ ಕಾಂಗ್ರೆಸ್‌ನಿಂದ ಗೆದ್ದು ಬಂದಿದ್ದು ರಘು ಆಚಾರ್.ಆಭರಣ ಉದ್ಯಮಿಯಾಗಿರುವ ರಘು ಸಾಕಷ್ಟು ದುಡ್ಡು ಹರಿಸಿ ಚುನಾವಣೆಗಳನ್ನು ಗೆದ್ದವರು. ಜನದ್ರೋಹದ ಕೆಲಸ ಮಾಡದವರು. ಈಗ ಎಂಎಲ್‌ಸಿ ಸ್ಥಾನಕ್ಕೆ ಅವರು ಆಸಕ್ತಿ ತೋರದ ಕಾರಣ, ಕಾಂಗ್ರೆಸ್ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಬಿ, ಸೋಮಶೇಖರ್ ಅವರನ್ನು ದುರ್ಗಕ್ಕೆ ಕರೆ ತಂದಿದೆ.
ಈ ಕ್ಷೇತ್ರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಲಿಂಗಾಯತರು ಜಾಸ್ತಿ ಇದ್ದಾರೆ. ಬಿಜೆಪಿಯ ನವೀನ್ ಲಿಂಗಾಯತ, ಕಾಂಗ್ರೆಸ್‌ನ ಸೋಮಶೇಖರ ಕುರುಬ ಸಮುದಾಯಕ್ಕೆ ಸೇರಿದವರು. ಸತತವಾಗಿ ಎರಡು ಸಲ ಈ ಕ್ಷೇತ್ರದಿಂದ ಸೋತ ಬಿಜೆಪಿಯ ಕೆ.ಎಸ್ ನವೀನ್ ಅವರಿಗೆ ಈ ಸಲ ಅನುಕಂಪದ ಬೆಂಬಲದ ಜೊತೆಗೆ ಬಿಜೆಪಿಯ ಹಣದ ಸಪೋರ್ಟು ಕೂಡ ಇದೆ.

ಸೋಮಶೇಖರ್ ಹೊರಗಿನವರು ಎಂಬ ಭಾವನೆ ದಟ್ಟವಾಗಿದೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಬಿಜೆಪಿಯ ನವೀನ್ ಬಳಿ ಹಣವಿರಲಿಲ್ಲ, ಈ ಸಲ ಬಿಜೆಪಿ ಅದನ್ನು ಪೂರೈಸಿದೆ. ಹೀಗಾಗಿ, ಚಿತ್ರದುರ್ಗ-ದಾವಣಗೆರೆ ಕ್ಷೇತ್ರ ಬಿಜೆಪಿ ಪಾಲಾಗುವುದು ಖಚಿತ ಎಂಬ ವಾತಾವರಣವಿದೆ.