ಚೀನಾ ಇದುವರೆಗೆ 100 ಕೋಟಿಗೂ ಹೆಚ್ಚು ಲಸಿಕೆಯನ್ನು ನೀಡಿ ಸಾಧನೆ ಮಾಡಿದೆ. ಚೀನಾ ದೇಶ ಪ್ರಾರಂಭದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಅನ್ನು ನಿಧಾನಗತಿಯಲ್ಲಿ ಸಾಗಿದರು ಕಡಿಮೆ ಸಮಯದಲ್ಲಿ ಹೆಚ್ಚು ಡೋಸ್ಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ತನ್ನ ಹೇಳಿಕೆಯಲ್ಲಿ, ಜೂನ್ 19 ರವರೆಗೆ ಒಟ್ಟು 1,010,489,000 ಡೋಸ್‌ಗಳನ್ನು ನೀಡಲಾಗಿದೆ. ವಿಶ್ವಾದ್ಯಂತ ನೀಡಲಾದ 250 ಕೋಟಿ ಲಸಿಕೆ ಪ್ರಮಾಣದಲ್ಲಿ ಇದು ಸುಮಾರು 40 ಪ್ರತಿಶತದಷ್ಟು ಲಸಿಕೆಯನ್ನು ಚೀನಾ ದೇಶ ಒಂದೇ ನೀಡಿದೆ.
ಚೀನಾದ ಒಂದು ಮಾಧ್ಯಮ ವರದಿ ಮಾಡಿರುವ ಪ್ರಕಾರ, ಜೂನ್ 19ರ ಮೊದಲು ಮತ್ತು ಐದು ದಿನಗಳಲ್ಲಿ 100 ಮಿಲಿಯನ್ ಡೋಸ್‌ಗಳನ್ನು ನೀಡಲಾಗಿದೆ ಎಂದು ಎನ್‌ಎಚ್‌ಸಿ ಹೇಳಿದೆ ಎನ್ನಲಾಗಿದೆ.
ಚೀನಾದಲ್ಲಿ ವ್ಯಾಕ್ಸಿನೇಷನ್ ನಿಧಾನವಾಗಿ ಪ್ರಾರಂಭವಾಯಿತು
ಮಾರ್ಚ್ 27 ರವರೆಗೆ ಚೀನಾ ತನ್ನ ಪ್ರಜೆಗಳಿಗೆ ಮೊದಲ ಒಂದು ಮಿಲಿಯನ್ ಡೋಸ್ ನೀಡಲು ಮಾತ್ರ ಸಾಧ್ಯವಾಯಿತು. ಈ ಸಮಯದಲ್ಲಿ ಚೀನಾ ಯುಎಸ್ ಗಿಂತ ಎರಡು ವಾರಗಳ ಹಿಂದ್ದಿದ್ದರು. ಆದರೆ ಮೇ ತಿಂಗಳಲ್ಲಿ ವ್ಯಾಕ್ಸಿನೇಷನ್ ವೇಗವನ್ನು ಪಡೆದುಕೊಂಡಿತು ಮತ್ತು ಕಳೆದ ಒಂದು ತಿಂಗಳಲ್ಲಿ 50 ಕೋಟಿಗಿಂತ ಹೆಚ್ಚಿನ ಲಸಿಕೆ ನೀಡಿದೆ.
ಕ್ಸಿನ್ಹುವಾ ಮಾಧ್ಯಮ ಹೇಳುವ ಪ್ರಕಾರ, “ಚೀನಾ 100 ಮಿಲಿಯನ್ ಡೋಸ್ ನಿಂದ 200 ಮಿಲಿಯನ್ ಡೋಸ್ ತಯಾರಿಸಿ ನೀಡಲು 25 ದಿನಗಳು ತೆಗೆದುಕೊಂಡಿದೆ, 20 ರಿಂದ 300 ಮಿಲಿಯನ್ ಡೋಸ್ ತಲುಪಲು 16 ದಿನಗಳು ತೆಗೆದುಕೊಂಡಿದೆ ಮತ್ತು 80 ರಿಂದ 90 ಮಿಲಿಯನ್ ಡೋಸ್ ತಲುಪಲು ಕೇವಲ 6 ದಿನಗಳು ಬೇಕಾಯಿತು ಎಂದಿದೆ.”
ಚೀನಾ 18 ವರ್ಷದೊಳಗಿನ ನಾಗರಿಕರಿಗೆ ಲಸಿಕೆ ಹಾಕಲು ಪ್ರಾರಂಭಿಸಿದೆ. ಹದಿಹರೆಯದವರಿಗೆ ಸೈನೋಫಾರ್ಮ್ ಮತ್ತು ಸೈನೋವಾಕ್ ಲಸಿಕೆಗಳನ್ನು ನೀಡಲಾಗುತ್ತಿದೆ.
ಕ್ಸಿನ್ಹುವಾ ಮಾಧ್ಯಮದ ಪ್ರಕಾರ, ಈ ವರ್ಷದ ಅಂತ್ಯದ ವೇಳೆಗೆ ಕನಿಷ್ಠ 70 ಪ್ರತಿಶತದಷ್ಟು ಜನರಿಗೆ ಸಂಪೂರ್ಣ ಲಸಿಕೆ ಹಾಕುವ ಉದ್ದೇಶವನ್ನು ಚೀನಾ ಹೊಂದಿದೆ. ಚೀನಾದ ಜನಸಂಖ್ಯೆ ಸುಮಾರು 140 ಕೋಟಿ.