• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಭಾರತದ ಗಡಿಯೊಳಗೆ ಹಳ್ಳಿಯನ್ನೇ ನಿರ್ಮಿಸಿದ ಚೀನಾ..!

by
April 3, 2021
in ವಿದೇಶ
0
ಭಾರತದ ಗಡಿಯೊಳಗೆ ಹಳ್ಳಿಯನ್ನೇ ನಿರ್ಮಿಸಿದ ಚೀನಾ..!
Share on WhatsAppShare on FacebookShare on Telegram

ಚೀನಾ ಮತ್ತು ಭಾರತದ ನಡುವಿನ ಗಡಿ ಸಂಘರ್ಷ ಇನ್ನೂ ತಣ್ಣಗಾಗಿಲ್ಲ ಎಂಬುದಕ್ಕೆ ಪುರಾವೆ ಲಭಿಸಿದೆ. ಚೀನಾ ಭಾರತದ ಗಡಿಯೊಳಗೆ ನುಸುಳಿಲ್ಲ, ಭಾರತದ ಒಂದಿಂಚು ಭೂಮಿಯನ್ನೂ ಚೀನಾಕ್ಕೆ ಬಿಟ್ಟುಕೊಡಲ್ಲ ಎಂಬ ಭಾರತದ ವಾದದ ನಡುವೆಯೇ, ಚೀನಾ ಸೇನೆಯು 101 ಮನೆಗಳಿರುವ ಒಂದು ಹಳ್ಳಿಯನ್ನು ಭಾರತದ ಗಡಿಯೊಳಗೆ ಸೃಷ್ಟಿಸಿಕೊಂಡಿದೆ. NDTVಯು ಇದನ್ನು ಪುರಾವೆಗಳ ಸಮೇತ ಬಹಿರಂಗಪಡಿಸಿದೆ.

ADVERTISEMENT

ಕಳೆದ ನವೆಂಬರ್‌ 1ರಂದು ಪಡೆದ ಉಪಗ್ರಹ ಆಧಾರಿತ ಚಿತ್ರಗಳನ್ನು ಎನ್‌ಡಿಟಿವಿಯು ತಜ್ಞರಿಗೆ ತೋರಿಸಿದಾಗ, ಚೀನಾವು ಭಾರತದ ಸರಹದ್ದಿನೊಳಗೆ ಸುಮಾರು 4.5 ಕಿಲೋಮೀಟರ್‌ನಷ್ಟು ನುಸುಳಿದೆ ಎಂಬುದು ಸ್ಪಷ್ಟವಾಗಿದೆ. ಅರುಣಾಚಲ ಪ್ರದೇಶದ ತ್ಸಾರಿ ಚು ನದಿಯ ದಡದಲ್ಲಿರುವ ವಿವಾದಿತ ಗಡಿ ಪ್ರದೇಶದಲ್ಲಿ ಈ ಹಳ್ಳಿಯನ್ನು ನಿರ್ಮಿಸಲಾಗಿದೆ.

ಕಳೆದ ವರ್ಷ ಜೂನ್‌ನಲ್ಲಿ ನಡೆದ ಚೀನಾ-ಭಾರತ ನಡುವಿನ ಗಾಲ್ವಾನ್‌ ಗಡಿ ಸಂಘರ್ಷದಲ್ಲಿ ಭಾರತದ 20 ಜನ ಸೈನಿಕರು ಹುತಾತ್ಮರಾಗಿದ್ದರು. ಹೀಗಾಗಿ, ಲಡಾಖ್‌ನ ಗಡಿ ಭಾಗದಲ್ಲಿ ಎರಡೂ ದೇಶಗಳು ಸೇನೆ ಜಮಾವಣೆಯಲ್ಲಿ ತೊಡಗಿಕೊಂಡಿದ್ದವು. ಆದರೆ, ಈ ಪ್ರದೇಶದಿಂದ ಸಾವಿರಾರು ಕಿಲೋಮೀಟರ್‌ ದೂರ ಇರುವ ಅರುಣಾಚಲ ಪ್ರದೇಶದ ಗಡಿ ಬಳಿ ಈಗ ಚೀನಾ ಹಳ್ಳಿಯನ್ನು ನಿರ್ಮಿಸಿದೆ.

ಆಗಸ್ಟ್‌ 2019ರ ಉಪಗ್ರಹ ಆಧಾರಿತ ಚಿತ್ರ ಹಾಗೂ ನವೆಂಬರ್‌ 2020ರ ಉಪಗ್ರಹ ಆಧಾರಿತ ಚಿತ್ರಗಳು ಚೀನಾ ಗಡಿಯೊಳಗೆ ನುಸುಳಿದ್ದನ್ನು ಸ್ಪಷ್ಟಪಡಿಸುತ್ತವೆ. ಕೇವಲ ಕಾಡು ಪ್ರದೇಶವಾಗಿದ್ದ ಸ್ಥಳದಲ್ಲಿ ದುತ್ತನೆ ಹಳ್ಳಿಯೊಂದು ತಲೆ ಎತ್ತಿದೆ.

ಈ ಕುರಿತಾಗಿ NDTV ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯವು, ಚೀನಾ ಈ ರೀತಿ ಕಳೆದ ವರ್ಷಗಳಿಂದ ಗಡಿ ಪ್ರದೇಶದಲ್ಲಿ ನಿರ್ಮಾಣ ಕಾರ್ಯವನ್ನು ಕೈಗೊಂಡಿದೆ. ಭಾರತವು ತನ್ನ ಮೂಲಭೂತ ಸೌಕರ್ಯ ಅಭಿವೃದ್ದಿ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸುತ್ತದೆ, ಎಂದು ಹೇಳಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ನವೆಂಬರ್‌ನಲ್ಲಿ ನಡೆದ ಸಂಸತ್‌ ಅಧಿವೇಶನದಲ್ಲಿ ಅರುಣಾಚಲ ಪ್ರದೇಶದ ಸಂಸದ ತಾಪಿರ್‌ ಗಾವ್‌ ಅವರು, ಅರುಣಾಚಲ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾ ಅತಿಕ್ರಮಣದ ಬಗ್ಗೆ ಸರ್ಕಾರವನ್ನು ಎಚ್ಚರಿಸಿದ್ದರು. ಮುಖ್ಯವಾಗಿ ಈಗ ಚೀನಾವು ಹಳ್ಳಿ ನಿರ್ಮಿಸಿರುವ ಸುಬಾನ್‌ಸಿರಿ ಜಿಲ್ಲೆಯಲ್ಲಿ ಚೀನಾದ ಚಟುವಟಿಕೆಗಳು ಹೆಚ್ಚಾಗಿ ಕಾಣುತ್ತಿವೆ ಎಂದು ಹೇಳಿದ್ದರು.

Previous Post

ಯುರೋಪಿನಲ್ಲಿ ಇಲ್ಲದ ವಾಟ್ಸಪ್ ಹೊಸ ನೀತಿ ಭಾರತದಲ್ಲಿ ಜಾರಿಗೆ ಕಾರಣವೇನು?

Next Post

ಒಡೆಯನ ತಪ್ಪು ಮುಚ್ಚಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ ರಿಪಬ್ಲಿಕ್ ಟಿವಿ

Related Posts

ವೆನೆಜುವೆಲಾದಲ್ಲಿ ಪ್ರಬಲ ಅವಳಿ ಭೂಕಂಪ: ಅವಶೇಷಗಳಡಿಯಲ್ಲಿ ಮಗು ಜನನ
Top Story

ವೆನೆಜುವೆಲಾದಲ್ಲಿ ಪ್ರಬಲ ಅವಳಿ ಭೂಕಂಪ: ಅವಶೇಷಗಳಡಿಯಲ್ಲಿ ಮಗು ಜನನ

by ಪ್ರತಿಧ್ವನಿ
June 27, 2026
0

ಬುಧವಾರ ಸಂಜೆ ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪ ಸಂಪೂರ್ಣ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ನೋಡನೋಡುತ್ತಿದ್ದಂತೆ ಬಹು ಅಂತಸ್ತಿನ ಕಟ್ಟಡಗಳು ನೆಲಸಮವಾಗಿದ್ದು, ಸಾವಿರಾರು ಜನರು ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ....

Read moreDetails
ಅನಿವಾಸಿ ಕನ್ನಡಿಗರ ಸಚಿವಾಲಯ ರಚನೆಗೆ ಜಾಗತಿಕ ಅಭಿಯಾನ ಆರಂಭ

ಅನಿವಾಸಿ ಕನ್ನಡಿಗರ ಸಚಿವಾಲಯ ರಚನೆಗೆ ಜಾಗತಿಕ ಅಭಿಯಾನ ಆರಂಭ

June 26, 2026
ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮೋದಿಗೆ ಇರಾನ್​ ಆಹ್ವಾನ

ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮೋದಿಗೆ ಇರಾನ್​ ಆಹ್ವಾನ

June 24, 2026
ತಾಯಿಯನ್ನು ಉಳಿಸಲು ಹೋದ ಮಗ ನ್ಯೂಯಾರ್ಕ್ ಪ್ರವಾಸದಲ್ಲಿ ದುರಂತ ಅಂತ್ಯ

ತಾಯಿಯನ್ನು ಉಳಿಸಲು ಹೋದ ಮಗ ನ್ಯೂಯಾರ್ಕ್ ಪ್ರವಾಸದಲ್ಲಿ ದುರಂತ ಅಂತ್ಯ

June 19, 2026
ಕ್ರೀಡಾಂಗಣದಲ್ಲಿ ಶ್ರೀಲಂಕಾ ಆಟಗಾರನ ವಿರುದ್ಧ ವೈಭವ್‌ ಸೂರ್ಯವಂಶಿ ರೊಚ್ಚಿಗೇಳಲು ಕಾರಣವೇನು..?

ಕ್ರೀಡಾಂಗಣದಲ್ಲಿ ಶ್ರೀಲಂಕಾ ಆಟಗಾರನ ವಿರುದ್ಧ ವೈಭವ್‌ ಸೂರ್ಯವಂಶಿ ರೊಚ್ಚಿಗೇಳಲು ಕಾರಣವೇನು..?

June 16, 2026
Next Post
ಒಡೆಯನ ತಪ್ಪು ಮುಚ್ಚಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ ರಿಪಬ್ಲಿಕ್ ಟಿವಿ

ಒಡೆಯನ ತಪ್ಪು ಮುಚ್ಚಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ ರಿಪಬ್ಲಿಕ್ ಟಿವಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada