ಚಿಲುಮೆಯ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಈ ಸಂಸ್ಥೆ ಮಾಡಿರೋ ದೋಖಗಳ ಪಟ್ಟಿ ದೊಡ್ಡದಿದೆ. ಅಮಾಯಕರನ್ನೇ ಟಾರ್ಗೆಟ್ ಮಾಡಿ, ಹಣ ಕಡಿಮೆ ಕೆಲಸ ಜಾಸ್ತಿ ಅನ್ನೋ ರೀತಿಯಲ್ಲಿ ನಡೆಸಿಕೊಂಡಿದೆ. ಹಾಗಾದ್ರೆ ಇವ್ರು ಟಾರ್ಗೆಟ್ ಮಾಡ್ತಿದ್ದು ಯಾರನ್ನ.? ಅವರ ಬಳಿ ಏನೆಲ್ಲಾ ಕೆಲಸ ಮಾಡಿಸ್ತಿದ್ದರು..?
ವೋಟರ್ ಪಟ್ಟಿ ಡಿಲೀಟ್ ವಿಚಾರ ಎಲ್ಲೆಡೆ ಸಂಚಲನವನ್ನು ಮೂಡಿಸಿದೆ. ಹೀಗಿರುವಾಗ ಇಷ್ಟು ದೊಡ್ಡ ಸ್ಕ್ಯಾಮ್ ಮಾಡೋಕೆ ಎಲ್ಲವೂ ಪ್ರೀಪ್ಲಾನ್ ಇರ್ಲೇ ಬೇಕು. ಅದೇ ರೀತಿ ಇಲ್ಲೂ ಕೂಡಾ ಚಿಲುಮೆ ಮಾಡ್ತಿದ್ದ ಪ್ಲಾನ್ ಅಂತಿಂಥ ಪ್ಲಾನ್ ಅಲ್ಲ. ಬದಲಿಗೆ ಏನು ಅರಿಯದ ಅಮಾಯಕರನ್ನು ಇಟ್ಟುಕೊಂಡು ಮಾಸ್ಟರ್ ಪ್ಲಾನ್ ಮಾಡಿದೆ. ಕೋವಿಡ್ ಬಳಿಕ ಕೆಲಸ ಕಳೆದುಕೊಂಡವರು ಹಾಗೂ ಹೆಚ್ಚು ಓದಲು ಆಗ್ದೆ ಇರುವವರನ್ನೇ ಈ ಚಿಲುಮೆ ಟಾರ್ಗೆಟ್ ಮಾಡ್ತಿತ್ತು. ಉದ್ಯೋಗಕ್ಕಾಗಿ ಹುಡುಕಾಟ ನಡೆಸ್ತಿದ್ದವರಿಗೆ ಗಾಳ ಹಾಕಿ ಕೆಲಸ ಮಾಡಿಸಿಕೊಳ್ಳಲಾಗ್ತಿತ್ತು. ಇದೇ ರೀತಿ ಸಮನ್ವಯದಂಥಹ ಅನೇಕ ಸಂಸ್ಥೆಗಳ ಬಳಿ ನಿರುದ್ಯೋಗಿಗಳು ಹಾಗೂ ಎಸ್‌ಎಸ್‌ಎಲ್‌ಸಿ ಫೇಲ್ ಆದವರನ್ನೇ ಕರೆಸಿಕೊಂಡು ಬೆಂಗಳೂರಿನ ಅನೇಕ ಕಡೆಗಳಲ್ಲಿ ಟ್ರೈನಿಂಗ್ ನೀಡಲಾಗ್ತಿತ್ತು.
ಹೇಗಿತ್ತು ಚಿಲುಮೆಯ ಟ್ರೈನಿಂಗ್ ಮತ್ತು ಪ್ಲಾನಿಂಗ್..?
• ಮೊದಲು ಕೆಲಸಗಾರರಿಗೆ ಡಿಸಿ ಕಚೇರಿಯ ಸೀಲ್ ಇರುವ ಐಡಿ ಕಾರ್ಡ್ ನೀಡುತ್ತಿದ್ದರು
• ಬಳಿಕ 200 ಕೆಲಸಗಾರರಂತೆ ಎಲ್ಲರಿಗೂ ತಮ್ಮ ಕೆಲಸದ ಬಗ್ಗೆ 3-4 ದಿನಗಳ ಕಾಲ ಟ್ರೈನಿಂಗ್
• ಮನೆಗಳ ಬಳಿ ಮೊಬೈಲ್ ಆ್ಯಪ್‌ನಲ್ಲಿ ಸರ್ವೇಗೆ ಕಳಿಸುತ್ತಿದ್ದರು
• ಸುಮಾರು 1 ಸಾವಿರಕ್ಕೂ ಹೆಚ್ಚು ಜನರಿಗೆ ಬ್ಯಾಚ್ ವೈಸ್ ಟ್ರೈನಿಂಗ್
• ಬಳಿಕ ಕ್ಷೇತ್ರಗಳ ಸಂಪೂರ್ಣ ಚಾರ್ಟ್ ರೆಡಿ ಮಾಡಿ ವರ್ಕರ್ಸ್‌ಗೆ ಕೊಡುತ್ತಿದ್ದರು
• ವಾರ್ಡ್‌ಗಳ ಪ್ರಕಾರ ಹೆಸರುಗಳನ್ನು ಡಿಲೀಟ್ ಮಾಡಲು ಹೇಳಲಾಗ್ತಿತ್ತು
• ದಿನಕ್ಕೆ 50 ಕ್ಕೂ ಹೆಚ್ಚು ಮನೆಗಳ ಸರ್ವೆಗೆ ಟಾರ್ಗೆಟ್
ಬೇರೆ ಬೇರೆ ಊರುಗಳಿಂದ ಕರೆಸಿಕೊಂಡಿದ್ದ ಕೆಲಸಗಾರರನ್ನು ನಗರದ ಮಹದೇವಪುರ, ಹೂಡಿ, ವೈಟ್‌ಫೀಲ್ಡ್ ಸೇರಿದಂತೆ ಅನೇಕ ಕಡೆಗಳಲ್ಲಿ ಪಿಜಿಗಳನ್ನೇ ಮಾಡಿ ಇರಿಸಲಾಗಿತ್ತು. ವೈಟ್‌ಫೀಲ್ಡ್‌ನಲ್ಲಿದ್ದ ಇಶಾ, ಶ್ರೀನಿವಾಸ ಸೇರಿದಂತೆ ಅನೇಕ ಪಿಜಿಗಳಲ್ಲು ಕೂಡಾ ಬಂದು ಕೆಲವೊಂದು ಟ್ರೈನಿಂಗ್ ನೀಡಲಾಗ್ತಿತ್ತು. ಒಟ್ಟಾರೆ ಏನು ಅರಿಯದವರೇ ಇವರ ಟಾರ್ಗೆಟ್ ಆಗಿದ್ದು, ಕೆಲಸದ ಆಸೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಚಿಲುಮೆಯ ಅಸಲಿ ಮುಖವಾಡ ತಿಳಿಯದೆ ಅನೇಕರು ಮೋಸ ಹೋಗಿದ್ದಾರೆ.