• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಚಿಲುಮೆಯಿಂದ ಅಕ್ರಮವಾಗಿ ಮತದಾರರ ಮಾಹಿತಿ ಕಲೆ; ಅಸಲಿಗೆ ಇದರ ಹಿಂದಿರುವ ಉದ್ದೇಶ ಏನು ?

ಪ್ರತಿಧ್ವನಿ by ಪ್ರತಿಧ್ವನಿ
November 17, 2022
in ಕರ್ನಾಟಕ, ರಾಜಕೀಯ
0
ಚಿಲುಮೆಯಿಂದ ಅಕ್ರಮವಾಗಿ ಮತದಾರರ ಮಾಹಿತಿ ಕಲೆ; ಅಸಲಿಗೆ ಇದರ ಹಿಂದಿರುವ ಉದ್ದೇಶ ಏನು ?
Share on WhatsAppShare on FacebookShare on Telegram

ಸದ್ಯ ಸರ್ಕಾರಿಯೇತರ ಸಂಸ್ಥೆಯಾಗಿರುವ ಚಿಲುಮೆ ನಡೆಸಿದ ಅಕ್ರಮ ರಾಜ್ಯ ಕಾಂಗ್ರೆಸ್ ಕೈಗೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಗಿದೆ. ಬಿಜೆಪಿ ಸಚಿವರೊಬ್ಬರ ಸಂಬಂಧಿಯೇ ನಡೆಸಿಕೊಂಡು ಬರುವ ಈ ಚಿಲುಮೆ 2018ರ ಡಿಸೆಂಬರ್ 22 ರಂದು ಬಿಬಿಎಂಪಿಯಿಂದ ಮತದಾರರಿಗೆ ಅರಿವು ಮೂಡಿಸುವುದರ ಜೊತೆಗೆ ಮತದಾನದ ಸ್ಥಳಕ್ಕೆ ಬೇಕಾಗುವ ಸೈಡ್ ಲೈಟ್ಸ್ ಒದಗಿಸುವ ಗುತ್ತಿಗೆ ಪಡೆದುಕೊಂಡಿತ್ತು. ಅಂದು ಬಿಬಿಎಂಪಿ ಈ ಚಿಲುಮೆ ಸಂಸ್ಥೆಗೆ ಯಾವುದೇ ಟೆಂಡರ್ ಕರೆಯದೆ ಈ ಗುತ್ತಿಗೆಯನ್ನು ನೀಡಿತ್ತು. ಅಂದು 2019ರ ಲೋಕಸಭಾ ಚುನಾವಣೆ ಸಂಬಂಧ ಕೆಲಸ ಮಾಡಿದ್ದ ಚಿಲುಮೆ ಇದೀಗ ಮುಂಬರುವ ಚುನಾವಣೆಗೂ ಕೂಡ ಅದೇ ಮಾದರಿಯ ಕೆಲಸಕ್ಕೆ ಗುತ್ತಿಗೆ ಪಡೆದುಕೊಂಡಿದೆ.

ADVERTISEMENT

ಕಳೆದ ಎರಡೂವರೆ ತಿಂಗಳಿಂದ ಚಿಲುಮೆ ಮತದಾರರ ಬಳಿ ತೆರಳಿ ತಮ್ಮ ವೈಯಕ್ತಿಕ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಕಲೆ ಹಾಕಿಕೊಂಡಿದೆ. ವಾಸ್ತವದಲ್ಲಿ ಚಿಲುಮೆಗೆ ಈ ರೀತಿಯ ಮಾಹಿತಿ ಕಲೆಹಾಕುವ ಯಾವುದೇ ಅಧಿಕಾರವಿಲ್ಲದೆ ಇದ್ದರೂ ಕೂಡ ಬಿಬಿಎಂಪಿ ಚುನಾವಣೆ ಅಧಿಕಾರಿಗಳ ನಕಲಿ ಗುರುತಿನ ಚೀಟಿ ತಯಾರಿಸಿ, ಅದನ್ನೇ ಮುಂದಿಟ್ಟುಕೊಂಡು ಈ ಕುಕೃತ್ಯ ನಡೆಸಿದೆ. ಈ ಸಂಬಂಧ ಚಿಲುಮೆ ವ್ಯವಸ್ಥಾಪಕರ ಮೇಲೆ ಪಾಲಿಕೆ ದೂರು ದಾಖಲಿಸಿ ತನಿಖೆ ನಡೆಸುವಂತೆ ಕೋರಿಕೊಂಡಿದೆ.

ಅಸಲಿಗೆ ಚಿಲುಮೆ ಸಂಸ್ಥೆಗೆ ಜಾಗೃತಿ ಮೂಡಿಸೋದಕ್ಕೆ ಅಷ್ಟೇ ಅನುಮತಿ ಕೊಡಲಾಗಿದೆ. ಮತದಾರರ ಡೇಟಾ ಕಲೆಕ್ಟ್ ಮಾಡಿಮುವುದಾಗಲಿ ಅಥವಾ ಯಾವುದೇ ವೈಯಕ್ತಿಕ ಮಾಹಿತಿ ಕಲೆ ಹಾಕುವಂತಾಗಲಿ ಮಾಡುವಂತಿಲ್ಲ.‌ ಈವರೆಗೆ ಬಿಬಿಎಂಪಿ ವ್ಯಾಪ್ತಿಯ 28 ವಿಧಾನ ಸಭಾ ಕ್ಷೇತ್ರದಲ್ಲಿ 26% ಮಾತ್ರ ಓಟರ್ ಐಡಿ ಆಧಾರ್ ಲಿಂಕ್ ಆಗಿದೆ. ರಾಜ್ಯಾದ್ಯಂತ 60% ಓಟರ್ ಐಡಿ ಆಧಾರ್ ಲಿಂಕ್ ಮಾಡಲಾಗಿದೆ. ಆದರೆ ಬೆಂಗಳೂರಿನಲ್ಲಿ 26% ನಷ್ಟೇ ಆಗಿದ್ದು, ಮತದಾರ ಮಾಹಿತಿ, ಆಧಾರ್ ಲಿಂಕ್ ಮಾಹಿತಿ ಚುನಾವಣಾ ಆಯೋಗಕ್ಕೆ ಮಾತ್ರ ಸೀಮಿತವಾದದ್ದು. ಕೇಂದ್ರ ಚುನಾವಣಾ ಆಯೋಗಕ್ಕೆ ಬಿಟ್ಟರೆ ಬೇರೆ ಯಾರಿಗೂ ಕೂಡ ಈ ಮಾಹಿತಿ ಕಲೆ ಹಾಕುವ ಅಧಿಕಾರವಿಲ್ಲ.

2018ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಚೊಚ್ಚಲ ಬಾರಿಗೆ ಈ ಚಿಲುಮೆ ಎನ್ನುವ ಸಂಸ್ಥೆಗೆ ಗುತ್ತಿಗೆ ಕೊಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಹೊಣೆಯಷ್ಟೇ ಈ ಸಂಸ್ಥೆಯದ್ದು. ಆದರೀಗ ಬೆಂಗಳೂರಿನ ಮತದಾರರ ಮಾಹಿತಿ ಕಲೆ ಹಾಕಿ ಬಿಜೆಪಿ ಪಕ್ಷಕ್ಕೆ ನೀಡಿದ ಎಂಬ ಆರೋಪ ಕೇಳಿ ಬಂದಿದೆ. ಈ ಹಿಂದೆ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ವೋಟರ್ ಐಡಿ ಪ್ರಕರಣ ಸದ್ದು ಮಾಡಿತ್ತು. ಇದೇ ಮಾದರಿಯಲ್ಲಿ ಈ ಬಾರಿಯೂ ಆಡಳಿತರೂಢ ಬಿಜೆಪಿ ಎಲೆಕ್ಷನ್ ಗೋಲ್ಮಾಲ್ ಗೆ ಇಳಿದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇಂಥಾ ಮಾಹಿತಿಯನ್ನು ಬಳಸಿ ಬಿಜೆಪಿ ಮಾಡ ಹೊರಟಿದ್ದೇನು ?

ಕಳೆದ ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಸ್ವತಃ ಮೋದಿ ಸರ್ಕಾರದ ವಿರುದ್ಧವೂ ಇದೇ ರೀತಿಯ ಆರೋಪ ಕೇಳಿ ಬಂದಿತ್ತು. ಡಿಜಿಟಲೈಸ್ಡ್ ಮಾಹಿತಿಯನ್ನು ಖಾಸಗಿ ಕಂಪೆನಿಗಳಿಂದ ಖರೀದಿ ಮಾಡಿಕೊಂಡು ಅದನ್ನೇ ಮುಂದಿಟ್ಟುಕೊಂಡು ಚುನಾವಣೆ ತಂತ್ರಗಾರಿಕೆ ಭಾಜಪ ರೂಪಿಸಿದೆ ಎನ್ನುವ ಗಂಭೀರ ಆರೋಪ ಅದು. ಖಾಸಗಿ ಕಂಪೆನಿಗಳು ನೀಡುವ ಇಂಥಾ ದತ್ತಾಂಶಗಳು ನಿರ್ದಿಷ್ಟ ವ್ಯಕ್ತಿಯ ಎಲ್ಲಾ ಮಾಹಿತಿಯನ್ನು ಒಳಗೊಂಡಿರಲಿದ್ದು, ಆತ ದಿನದ 24 ಗಂಟೆಗಳ ಕಾಲ ಯಾವ ರೀತಿಯ ಕೆಲಸ ಕಾರ್ಯಗಳಲ್ಲಿ ಮೊಬೈಲ್ ಬಳಸಿಕೊಂಡು ಮಾಡುತ್ತಿರುತ್ತಾನೆ ಎನ್ನುವ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಸದ್ಯ ಎಲ್ಲಾ ಸರ್ಕಾರಿ ಕೆಲಸಗಳಿಗೂ ಆಧಾರ್ ನಂಬರ್ ಅಥವಾ ಆಧಾರ್ ಲಿಂಕ್ ಮಾಡಿಸುವ ಕಡ್ಡಾಯ ನಿಯಮವಿದ್ದು, ಈ ಮೂಲಕ ಚುನಾವಣೆ ಮತ ವಿಭಜನೆಗೆ ಇದು ಸಹಕಾರಿಯಾಗಲಿದೆ.

ಈಗ ಚಿಲುಮೆ ನಡೆಸಿದ ಈ ಅನಧಿಕೃತ ಸರ್ವೇ ಕೂಡ ಇದೇ ಮಾದರಿಯಲ್ಲೇ ಇದೆ ಮೇಲ್ನೋಟಕ್ಕೆ. ಸಂಪೂರ್ಣವಾಗಿ ಅಲ್ಲದಿದ್ದರೂ ಈವರೆಗೆ ಚಿಲುಮೆ ಕ್ರೂಢೀಕರಿಸಿರುವ ದತ್ತಾಂಶಗಳನ್ನು ಬಳಸಿಕೊಂಡು ಬೆಂಗಳೂರು ನಗರದ ಮತ ವಿಭಜನೆ ಮಾಡುವ ಎಲ್ಲಾ ಅವಕಾಶಗಳೂ ಕೂಡ ಬಿಜೆಗಿದೆ. ಒಂದು ವೇಳೆ ಹೀಗೇ ಆದರೆ ಮುಂಬವರುವ ಬಿಬಿಎಂಪಿ ಚುನಾವಣೆಯಲ್ಲಿ ಇದರ ಪರಿಣಾಮ ಎದ್ದು ಕಾಣಲಿದೆ. ಈಗಾಗಲೇ ಡಿಲಿಮಿಟೇಷನ್ ಹೆಸರಿನಲ್ಲಿ 198ರಿಂದ 243 ವಾರ್ಡ್ ಗಳಾಗಿ ಬೆಂಗಳೂರು ನಗರ ವ್ಯಾಪ್ತಿ ದೊಡ್ಡಾಗಿದೆ. ಪ್ರತಿ ವಾರ್ಡ್ ನಲ್ಲೂ 35 ಸಾವಿರ ಸರಾಸರಿ ಮತದಾರರ ಲೆಕ್ಕಾಚಾರದ ಮೇಲೆ ವಾರ್ಡ್ ಡಿ ಲಿಮಿಟ್ ಮಾಡಲಾಗಿದೆ ಎನ್ನುವುದು ಬಿಬಿಎಂಪಿಯೇ ಬಹಿರಂಗವಾಗಿ ನೀಡಿರುವ ಮಾಹಿತಿ. ಈಗ ಚಿಲುಮೆ ಕಲೆ ಹಾಕಿಕೊಂಡಿರುವ ಈ ದತ್ತಾಂಶದ ಆಧಾರದ ಮೇರೆಗೆ ಕೂಡ, ಗುಣಿಸಿ ನೋಡಿದರೆ ಬಿಜೆಪಿಗೆ ಸುಲಭವಾಗಿ ಮುಂದಿನ ಚುನಾವಣೆ ಏನೇನೆಲ್ಲಾ ತಯಾರಿ ಮಾಡಿಕೊಳ್ಳಬೇಕು ಮತ್ತು ಎಲ್ಲೆಲ್ಲಾ ತಮ್ಮ ಮತಗಟ್ಟೆಗಳಿವೆ ಅಲ್ಲೆಲ್ಲಾ ತಮ್ಮ ಮತಗಳನ್ನು ಕೇಂದ್ರೀಕರಿಸಿ, ಉಳಿದಂತಿರುವ ಇತರೆ ಪಕ್ಷಗಳ ಮತಗಳನ್ನು ಒಡೆದು, ಚುನಾವಣೆಯಲ್ಲಿ ಮುನ್ನಡೆಯನ್ನು ಸುಲಭವಾಗಿ ಸಾಧಿಸಬಹುದಾಗಿದೆ.

ಒಟ್ಟಾರೆ ರಾಜ್ಯದ ಆಡಳಿತ ವೈಫಲ್ಯ, ಕೇಂದ್ರದ ಈಡೇರದ ಭರವಸೆಗಳನ್ನು ಮೆಟ್ಟಿನಿಲ್ಲಲ್ಲು ಬಿಜೆಪಿ ಅಡ್ಡದಾರಿ ಹಿಡಿದಿದೆ ಎನ್ನುವುದು ಈಗ ಗೌಪ್ಯವಾಗಿ ಉಳಿದಿರುವ ಸಂಗತಿಯೇನು ಅಲ್ಲ‌. ಈಗ ಚಿಲುಮೆ ಎನ್ನುವ NGO ನಡೆಸಿರುವ ಈ ಅಕ್ರಮದ ಮೂಲದಲ್ಲಿ ಕಾಣದ ಕಮಲದ ಕೈಗಳೇ ಹೊರತು ಇನ್ನೇನು ಅಲ್ಲ. ಆದರೀಗ ಇರುವ ಏಕೈ ಪ್ರಶ್ನೆ ಅಂದ್ರೆ ಇದುವರೆಗೂ ಚಿಲುಮೆ ಕಲೆ ಹಾಕಿಕೊಂಡಿರುವ ಮತದಾರರ ಮಾಹಿತಿ ರಿಕವರಿ ಆಗಿದೆಯೇ..? ಅಥವಾ ಇದು ಕೇವಲ ಎರಡು ದಿನಗಳ ಆರೋಪ ಪ್ರತ್ಯಾರೋಗಳ ಹೈಡ್ರಾಮ ಮಾತ್ರವೇ..? ಎನ್ನುವುದಷ್ಟೇ‌.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ನಮ್ಮನ್ನು ನಾವೇ ಆಳಿಕೊಳ್ಳುವುದು ಪ್ರಜಾಪ್ರಭುತ್ವ : ಮಾಜಿ ಸಿಎಂ ಸಿದ್ದರಾಮಯ್ಯ

Next Post

ಪ್ರತಿಧ್ವನಿ ಇಂಪ್ಯಾಕ್ಟ್; ಚಿಲುಮೆ ಸಂಸ್ಥೆ ವಿರುದ್ಧ FIR ದಾಖಲು

Related Posts

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
0

ಜೂನಿಯರ್‌ ಚಿತ್ರದ ಡ್ಯಾನ್ಸಿಂಗ್‌ ನಂಬರ್..ಡಿಎಸ್‌ಪಿ ಮ್ಯೂಸಿಕ್‌ಗೆ ಕುಣಿದು ಕುಪ್ಪಳಿಸಿದ ಕಿರೀಟಿ-ಶ್ರೀಲೀಲಾ ಕಿರೀಟಿ ಚಿತ್ರರಂಗದಲ್ಲಿ ಛಾಪೂ ಮೂಡಿಸಲು ಸಜ್ಜಾಗಿದ್ದು, ಚೊಚ್ಚಲ ಚಿತ್ರ ಜೂನಿಯರ್‌ ಟೀಸರ್‌ ಈಗಾಗಲೇ ಭಾರೀ ಸದ್ದು...

Read moreDetails

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

July 5, 2025

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
Next Post
PRATIDHVANI AND TNM ಪ್ರತಿಧ್ವನಿ ಶೋಧ | ಸರ್ಕಾರದ ಬೆಂಬಲದೊಂದಿಗೆ ಮತದಾರರ ಮಾಹಿತಿಯನ್ನು ಕಳ್ಳತನ ಮಾಡಿದ ಬೆಂಗಳೂರಿನ NGO

ಪ್ರತಿಧ್ವನಿ ಇಂಪ್ಯಾಕ್ಟ್; ಚಿಲುಮೆ ಸಂಸ್ಥೆ ವಿರುದ್ಧ FIR ದಾಖಲು

Please login to join discussion

Recent News

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
Top Story

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

by ಪ್ರತಿಧ್ವನಿ
July 5, 2025
Top Story

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

by ಪ್ರತಿಧ್ವನಿ
July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

July 5, 2025

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada