ದೊಡ್ಡವರು ತಮ್ಮ ಕೂದಲಿನ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸ್ತಾರೋ ಅದೇ ರೀತಿ ತಮ್ಮ ಮಕ್ಕಳ ಕೂದಲಿನ ಬಗ್ಗೆ ಕೂಡ ಆರೋಗ್ಯ ವಹಿಸುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೂ ಕೂಡ ಕೂದಲು ಉದುರುವಂತ ಸಮಸ್ಯೆ ಎದುರಾಗುತ್ತಿದೆ. ಈ ಸಮಸ್ಯೆಯಿಂದ ಹೊರಬರಲು ಈ ಸಿಂಪಲ್ ಟಿಪ್ಸ್ ಅನ್ನ ಫಾಲೋ ಮಾಡಿ.

ಎಣ್ಣೆಯ ಮಸಾಜ್
ವಾರಕ್ಕೆ 2 ರಿಂದ 3 ಬಾರಿ ಮಕ್ಕಳ ಕೂದಲಿಗೆ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಒಂದು ಗಂಟೆಗಳ ಕಾಲ ಹಾಗೆ ಬಿಟ್ಟು ಸ್ನಾನ ಮಾಡಿಸುವುದರಿಂದ ಕೂದಲ ಬೆಳವಣಿಗೆ ಉತ್ತಮವಾಗಿರುತ್ತದೆ. ಎಣ್ಣೆ ಹಚ್ಚುವುದರಿಂದ ಕೂದಲು ನ್ಯಾಚುರಲ್ಲಾಗಿ ಮಾಯಿಶ್ಚರೈಸ್ ಆಗುತ್ತದೆ.

ಆಪಲ್ ಸೈಡರ್ ವಿನಿಗರ್
ಎರಡು ಟೇಬಲ್ ಸ್ಪೂನ್ ಅಷ್ಟು ಆಪಲ್ ಸೈಡರ್ ವಿನಿಗರನ್ನ ಮೂರರಿಂದ ನಾಲ್ಕು ಟೇಬಲ್ ಸ್ಪೂನ್ ಅಷ್ಟು ನೀರಿನ ಜೊತೆ ಚೆನ್ನಾಗಿ ಮಿಶ್ರಣ ಮಾಡಿ ನಂತರ ಆ ಮಿಶ್ರಣವನ್ನು ಮಕ್ಕಳ ತಲೆ ಬುರುಡೆಗೆ ಹಾಗೂ ಕೂದಲಿಗೆ ಹಚ್ಚಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ತಲೆಗೆ ಸ್ನಾನ ಮಾಡಿಸುವುದರಿಂದ ಸ್ಕಾಲ್ಪ್ ಪಿಎಚ್ ಲೆವೆಲ್ ಬ್ಯಾಲೆನ್ಸ್ ಮಾಡಲು ಸಹಾಯಕಾರಿ.
ತಲೆಗೆ ಸ್ನಾನ
ಪ್ರತಿದಿನ ತಲೆಗೆ ಸ್ನಾನ ಮಾಡ್ಸುವುದು ಕೂಡ ಉತ್ತಮವಲ್ಲ ಎರಡು ದಿನಕ್ಕೊಮ್ಮೆ ಮಕ್ಕಳ ತಲೆಗೆ ಸ್ನಾನ ಮಾಡಿಸಿ ಪ್ರತಿದಿನ ಇತರೆ ಪ್ರಾಡಕ್ಟ್ ಗಳನ್ನ ಬಳಸಿ ಸ್ನಾನ ಮಾಡಿಸುವುದರಿಂದ ಕೂದಲಲ್ಲಿ ಇರುವಂತಹ ನ್ಯಾಚುರಲ್ ಎಣ್ಣೆ ಕಡಿಮೆಯಾಗುತ್ತದೆ.

ಸೂರ್ಯನ ಬೆಳಕು
ನೇರವಾಗಿ ಸೂರ್ಯನ ಕಿರಣಗಳು ಮಕ್ಕಳ ಕೂದಲು ಹಾಗೂ ಬುರುಡೆಗೆ ಬೀಳುವುದರಿಂದ ಇರಿಟೇಶನ್ ತುರಿಕೆ ಬೆವರು ಗೆಲುವು ಜಾಸ್ತಿಯಾಗುತ್ತದೆ ಹಾಗೂ ಇದರಿಂದ ಡ್ಯಾಂಡ್ರಫ್ ಸಮಸ್ಯೆ ಕೂಡ ಶುರುವಾಗುತ್ತದೆ ಹಾಗಾಗಿ ಮಕ್ಕಳು ಹೊರ ಹೋಗುವಾಗ ಹ್ಯಾಟ್ ಅಥವಾ ಟೋಪಿಯನ್ನು ಬಳಸುವುದು ಉತ್ತಮ. ಇದು ಬಿಸಿಲಿನಿಂದ ಮಕ್ಕಳ ಕೂದಲನ್ನು ಪ್ರೋಟೆಕ್ಟ್ ಮಾಡುತ್ತದೆ.
ಶಾಂಪು
ಮಕ್ಕಳಿಗೆ ಬಳಸುವಂತಹ ಶಾಂಪೂ ಅಥವಾ ಸೋಪ್ ನಲ್ಲಿ ಕೆಮಿಕಲ್ಸ್ ಹೆಚ್ಚಿರುವುದು ಉತ್ತಮವಲ್ಲ, ಜೊತೆಗೆ ನೀವು ಬಳಸುವಂತಹ ಸೋಪ್ ಅಥವಾ ಶಾಂಪೂವನ್ನ ಬಳಸುವುದು ಕೂಡ ಉತ್ತಮವಲ್ಲ ಮಕ್ಕಳಿಗಂತನೇ ಬರುವಂತಹ ಪ್ರಾಡಕ್ಟ್ ಬಳಸುವುದರಿಂದ ಕೂದಲ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ.