ಮನುಷ್ಯನ ಪ್ರಯತ್ನ ಏನೇ ಇದ್ರೂ, ದೇವರ ಕೃಪೆಯೂ ಬೇಕೇ ಬೇಕು ಎಂಬ ಮಾತು ಮತ್ತೊಮ್ಮೆ ನಿಜವಾದಂತಿದೆ. ಎಲ್ಲವನ್ನೂ ವಿಜ್ಞಾನದ ನೆಲೆಗಟ್ಟಿನಲ್ಲಿ ನೋದುವ ನಾವು, ಮಾತು ಮಾತಿಗೂ ಕೆಲವರ ಆರಣೆಗಳನ್ನ ಮೂಡನಂಬಿಕೆ ಎಂದು ಜರಿಯುವ ಹಲವರು ಆಶ್ಚರ್ಯಕ್ಕೊಳಗಾಗುವ ಘಟನೆ ಇದು. ಪುರುಷ ಸಿದ್ದಲಿಂಗ ಮಹಾರಾಜರ ಹಾರೈಕೆಯಿಂದ ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್ ಬದುಕಿ ಬಂದ ಘಟನೆ ಅಚ್ಚರಿಗೆ ಕಾರಣವಾಗಿದೆ.. 21 ಗಂಟೆಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡಿ ಸಾತ್ವಿಕ್ ಸಾವು ಗೆಲ್ಲಲು ಸಿದ್ಧಲಿಂಗರ ಪವಾಡವೇ ಕಾರಣ ಅಂತ ನಂಬಲಾಗಿದೆ.

ಬದುಕಿ ಬಾ ಕಂದ ಎಂಬ ಕೋಟಿ ಕೋಟಿ ಕನ್ನಡಿಗರ ಪ್ರಾರ್ಥನೆ ಫಲವಾಗಿ, ಸಾವು ಬದುಕಿನ ಮಧ್ಯೆ ಹೋರಾಡಿ ಕೊನೆಗೂ ಸಾತ್ವಿಕ್ ಸಾವು ಗೆದ್ದು ಬರಲು ಕಾರಣವಾಗಿತ್ತು.. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಯೊಂದು ತಂದೊಡ್ಡಿದ ಕಂಟಕವನ್ನ ಗೆದ್ದು ಬಂದ ಸಾತ್ವಿಕ್ ದೇವರ ಪವಾಡಕ್ಕೆ ಸಾಕ್ಷಿಯಾಗಿದೆ. ಹೆತ್ತ ತಾಯಿಯ ಕೂಗು ಕೇಳಿಸಿಕೊಂಡ ಸಿದ್ದಲಿಂಗ ಮಹಾರಾಜರು ಪುಟ್ಟ ಕಂದಮ್ಮನ ಕಾಪಾಡಿ ತಾಯಿ ಮಡಿಲಿಗೆ ಮರಳಿಸಿದ್ದಾರೆ.

ಲಚ್ಯಾಣ.. ಪವಾಡ ಪುರುಷ ಸಿದ್ದಲಿಂಗ ಮಹಾರಾಜರು ನಡೆದಾಡಿದ ಪುಣ್ಯ ಭೂಮಿ..ತಮ್ಮ ಪವಾಡಗಳ ಮೂಲಕ ಭಕ್ತರ ಸಂಕಷ್ಟಗಳನ್ನು ಕಡೆಹಾಣಿಸಿದ ಸಿದ್ದಿ ಪುರುಷ.. ಕೊಳವೇ ಬಾವಿಗೆ ಬಿದ್ದು ಸಾವನ್ನೇ ಗೆದ್ದು ಬಂದಿರೋ ಸಾತ್ವಿಕ್ 21 ಗಂಟೆ ಬಳಿಕವೂ ಸೇಫ್ ಆಗಿ ಬಂದಿರೋದು ಒಂದು ಪವಾಡವೇ. 2 ವರ್ಷದ ಸಾತ್ವಿಕ್ ಕೊಳವೆ ಬಾವಿಯೊಳಗೆ ಬಿದ್ದ ಬಳಿಕ ನನ್ನ ಕಂದಮ್ಮನನ್ನ ಕಾಪಾಡು ದೇವರೇ ಅಂತ ಹೆತ್ತ ತಾಯಿ ಪೂಜಾ ಪವಾಡ ಪುರುಷ ಸಿದ್ದಲಿಂಗ ಮಹಾರಾಜರಿಗೆ ಹರಕೆ ಹೊತ್ತಿದ್ರು..ತನ್ನ ಮಗ ಜೀವಂತವಾಗಿ ಮರಳಿ ಬಂದರೆ ನಿನ್ನ ಹೆಸರನ್ನೇ ಮಗನಿಗೆ ಮರುನಾಮಕರಣ ಮಾಡ್ತೀನಿ ಅಂತ ಸಾತ್ವಿಕ್ ತಾಯಿ ಪೂಜ ಹರಕೆ ಹೊತ್ತಿದ್ರು.. ಗ್ರಾಮಸ್ಥರು ನಿನ್ನೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ರು.. ಹೆತ್ತ ಕರುಳುನಿ ಕೂಗು, ಗ್ರಾಮಸ್ಥರ ಪ್ರಾರ್ಥನೆಗೆ ಕಿವಿಗೊಟ್ಟ ಸಿದ್ಧಲಿಂಗರು ಸಾತ್ವಿಕೆಎ ಗೆ ಮರುಜನ್ಮ ನೀಡಿದ್ದಾರೆ.

ಸಾತ್ವಿಕ ಸುರಕ್ಷಿತವಾಗಿ ಆಗಿ ಕೊಳವೆ ಬಾವಿಯಿಂದ ಹೊರಗೆ ಬರುತ್ತಿದ್ದಂತೆ ಗ್ರಾಮದ ಯುವಕರು ಸಿದ್ದಲಿಂಗ ಮಹಾರಾಜರ ಮಠದಲ್ಲಿ ಕಾಯಿ ಒಡೆದು, ವಿಶೇಷ ಪೂಜೆ ಸಲ್ಲಿಸಿದ್ರು. ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಾತ್ವಿಕ್ ಜಿಲ್ಲಾಸ್ಪತ್ರೆಗೆ ಶಿಫ್ಟ್ ಆಗಿದ್ದಾನೆ. ಎಲ್ಲಾ ವೈದ್ಯಕೀಯ ವರದಿಗಳು ಸಾಮಾನ್ಯ ಆಗಿರೋದು ಕಂಡು ವೈದ್ಯರಿಗೂ ಅಚ್ಚರಿ ಆಗಿದೆ.
ಏನೇ ಹೇಳಿ, ತಾಯಿ ಹರಕೆ, ಕೋಟ್ಯಾಂತರ ಜನರ ಪ್ರಾರ್ಥನೆ, ಸಿದ್ದಲಿಂಗ ಮಹಾರಾಜರ ಪವಾಡದಿಂದ ಸಾತ್ವಿಕ್ ಬದುಕುಳಿದಿದ್ದಾನೆ.. ಇದೇ ಖುಷಿಯಲ್ಲಿ ತಾಯಿ ಹರಕೆ ತೀರಿಸಲು ನಿರ್ಧರಿಸಿದ್ದು, ಸಾತ್ವಿಕ್ ಗೆ ಸಿದ್ದಲಿಂಗನಾಗಿ ನಾಮಕರಣ ನಡೆಯಲಿದೆ.