ಇಂದು ಚುಕ್ಕಿ ನಂಜುಂಡಸ್ವಾಮಿ ಮತ್ತು ರಾಕೇಶ್ ಟಿಕಾಯತ್ ನೇತೃತ್ವದ ರಾಷ್ಟ್ರೀಯ ರೈತ ಮುಖಂಡರು, ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಇಂದು ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ

ಈ ವೇಳೆ ಹಲವು ರೈತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದ್ದು. ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ಮಾರಕ ಪರಿಣಾಮಗಳನ್ನು ಚರ್ಚಿಸಿ ರಾಜ್ಯದಲ್ಲಿ ಅವುಗಳಿಗೆಲ್ಲಾ ಕಡಿವಾಣ ಹಾಕುವಂತೆ ವಿನಂತಿಸಿದ್ದಾರೆ ಎನ್ನಲಾಗಿದೆ.

ಇದರ ಜೊತೆಗೆ ಪ್ರಸಸ್ತು ಕರ್ನಾಟಕ ರೈತರು ಅನುಭವಿಸುತ್ತಿರುವ ಜ್ಷಲಂತ ಸಮಸ್ಯೆಗಳ ಕುರಿತು ಸರಿಯಾದ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು, ಹಾಗೂ ರೈತ ಪರವಾದ ಆಡಳಿತವನ್ನ ನೀಡುವಂತೆ ರೈತ ಮುಖಂಡರು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ