• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಉದ್ದೇಶಪೂರ್ವಕ ಸುಸ್ತಿದಾರರು ಮತ್ತು ವಂಚಕರ ಸಾಲದ ಖಾತೆಗಳು ಹಾಗು ಮೋದಿ ಸರಕಾರ-ಭಾಗ 2

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
September 9, 2023
in ಅಂಕಣ, ಅಭಿಮತ
0
 ರೆಪೊ ಯಥಾಸ್ಥಿತಿ, ಬಡ್ಡಿದರದಲ್ಲಿ ಏರಿಳಿತ ಇಲ್ಲ : ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ 
Share on WhatsAppShare on FacebookShare on Telegram

~ಡಾ. ಜೆ ಎಸ್ ಪಾಟೀಲ.

ADVERTISEMENT

ಇದೆಲ್ಲವೂ ವಂಚನೆ, ರಾಜಕೀಯ ಒಳ ಒಪ್ಪಂದ ಅಥವಾ ಬ್ಯಾಂಕ್ ಸಾಲಗಳ ದುರುಪಯೋಗದಿಂದಾಗಿದ್ದು. ಕೆಲವು ನಯ ವಂಚಕರು ಮಾಡಿರುವ ನಷ್ಟವನ್ನು ಸಾಮಾನ್ಯ ಜನರ ಠೇವಣಿಗಳಿಂದ ಹೊಂದಿಸಲಾಗುತ್ತಿದೆ. ಹೀಗೆ, NPAಗಳು ಮೋದಿಯವರ ಭಾರತದಲ್ಲಿ ಒಟ್ಟು ಸಾಲದ ೧೧.೪೬% ಕ್ಕೆ ತಲುಪಿದಾಗ, ೯.೪೬% (ಅಂದರೆ, 2 ಕ್ಕಿಂತ ಹೆಚ್ಚಿನ ಶೇಕಡಾವಾರು) ರಷ್ಟು ಮೊತ್ತ ಯಾರ ಜೇಬು ಸೇರಿತು ಎನ್ನುವ ಸಂಗತಿ ಬಯಲಾಗಬೇಕಿದೆ. ಆದರೆ ಬಹುಶಃ ಇದರ ಒಂದು ಭಾಗವು ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ‘ನಿರ್ಬಂಧಗಳನ್ನು’ ಪ್ರತಿಬಿಂಬಿಸುತ್ತದೆ. ಎಲ್ಲರಗೂ ತಿಳಿದಿರುವಂತೆ, ಯಾವುದೇ ದೊಡ್ಡ ಮೊತ್ತದ ಸಾಲಗಳನ್ನು ಸಾಮಾನ್ಯವಾಗಿ ರಾಜಕೀಯ ಒತ್ತಡˌ ಶಿಫಾರಸ್ಸು ಅಥವಾ ಪ್ರಾಯೋಜಕತ್ವವಿಲ್ಲದೆ ಬಿಡುಗಡೆ ಮಾಡಲಾಗುವುದಿಲ್ಲ. ಕಳೆದ ಒಂಬತ್ತು ವರ್ಷಗಳಲ್ಲಿ, ಭರತ ನಾಟ್ಯ ಕಲಾವಿದರು ನರ್ತಿಸುವಂತೆ ಕೆಲವು ಚಾಣಾಕ್ಷ ಜನರು ಶಿರೋ-ಭೇದ ಚಲನೆ ಮಾಡುತ್ತ ಜೋರಾಗಿ ಎಡ ಮತ್ತು ಬಲಕ್ಕೆ ತಲೆದೂಗುತ್ತಿದ್ದಾರೆ ಎನ್ನುತ್ತಾರೆ ಲೇಖಕರು.

ಶೇಕಡ ೨% ರಷ್ಟು ಸಾಲಗಳ ಅಂತರರಾಷ್ಟ್ರೀಯ ಮಾನದಂಡವು ಭಾರತಕ್ಕೆ ತುಂಬಾ ಕಠಿಣವಾಗಿದೆ ಎಂದು ಕೆಲವರು ವಾದಿಸಬಹುದು. ಆದರೆ ಪ್ರಪಂಚದ ಹೆಚ್ಚಿನ ದೇಶಗಳು ಮತ್ತು ಏಷ್ಯಾದ ಇತರ ದೇಶಗಳು ಬ್ಯಾಂಕಿಂಗ್ ವ್ಯವಸ್ಥೆಗಳಲ್ಲಿ ೨% (ಅಥವಾ ಸ್ವಲ್ಪ ಹೆಚ್ಚು) ವೈಫಲ್ಯ ಅಥವಾ ಜಾರುವಿಕೆಗೆ ಎಲ್ಲಾ ಕಾರಣಗಳನ್ನು ಸರಿಹೊಂದಿಸಬಹುದಾದರೆ, ಭಾರತಕ್ಕೆ ಅದು ಏಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಲೇಖಕರ ಪ್ರಶ್ನೆಯಾಗಿದೆ. ದುರಂತವೆಂದರೆˌ ಇದಕ್ಕೆ ಉತ್ತರವನ್ನು ಹುಡುಕಲು, ಮೋದಿ ಆಡಳಿತದಲ್ಲಿ ಪರಿಚಿತ ಆಪ್ತರು ಮತ್ತು ಇತರ ಅಪರಾಧಿಗಳು, ದೇಶದ ಎಷ್ಟು ಹಣವನ್ನು ನುಂಗಿ ನೀರು ಕುಡಿದಿದ್ದಾರೆ ಎಂಬುದನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಪತ್ತೆಹಚ್ಚಲು ನಾವು ರಾತ್ರಿ ದೃಷ್ಟಿ ಕನ್ನಡಕವನ್ನು ಬಳಸಬೇಕಾಗುತ್ತದೆ. ಡಿಸೆಂಬರ್ ೩೧, ೨೦೨೨ ರಂದು ಒಟ್ಟು ಮುಂಗಡಗಳ ಎನ್‌ಪಿಎಗಳ ಶೇಕಡಾವಾರು ಪ್ರಮಾಣವು ೪.೪೧% ಕ್ಕೆ ಇಳಿದಿದೆ ಎಂದು ಸರಕಾರವು ಈಗ ಡಂಗುರ ಹೊಡೆಯುತ್ತಿದೆ ಎನ್ನುತ್ತಾರೆ ಲೇಖಕರು.

ಆದರೆ ಆರ್‌ಬಿಐ “ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಒಟ್ಟು ಎನ್‌ಪಿಎ ಅನುಪಾತಗಳು ಸೆಪ್ಟೆಂಬರ್ ೨೦೨೩ ರಲ್ಲಿ ಶೇಕಡ ೯.೪ ಕ್ಕೆ ಏರಬಹುದು” ಎಂದು ಭವಿಷ್ಯ ನುಡಿದಿದೆ. ಯುಪಿಎ ಸರಕಾರದ ಆಡಳಿತದ ಕೊನೆಯ ದಿನಗಳಲ್ಲಿ ಈ NPA ಗಳ ಶೇಕಡಾವಾರು ಮೇಲ್ಮುಖ ಚಲನೆಯು ಸಹಜವಾಗಿಯೇ ಒಂದು ಸತ್ಯವಾಗಿತ್ತು. ಆದರೆ ಇದು ಆಗ ಶೇಕಡ ೩% ಕ್ಕಿಂತ ಕಡಿಮೆಯಿತ್ತು, ಕೊನೆಯ ವರ್ಷದಲ್ಲಿ ಅದು ೪% ಕ್ಕೆ ಏರಿತ್ತು. ಕೊನೆಯಲ್ಲಿ ಕೆಲವು ಅಜಾಗರೂಕ ಸಾಲದ ಪ್ರಕರಣಗಳು ಇದಕ್ಕೆ ಕಾರಣವಾಗಿರಬಹುದು. ಆದರೆ ಮೋದಿ ಅವರಿಗೆ ಸಂಪೂರ್ಣ ಒಂಬತ್ತು ವರ್ಷಗಳು ಇದೆಲ್ಲವನ್ನು ಪರಿಶೀಲಿಸಲು, ಸ್ಥಿರಗೊಳಿಸಲು ಮತ್ತು ಕೆಟ್ಟ ಸಾಲಗಳನ್ನು ಕೊನೆಗೊಳಿಸಲು ಸಾಕಷ್ಟು ಸಮಯವಿತ್ತು. ಬದಲಾಗಿ, ಮೋದಿ ಆಡಳಿತದಲ್ಲಿ ಕೆಟ್ಟ ಸಾಲಗಳು ದುಪ್ಪಟ್ಟು ಮತ್ತು ಮೂರು ಪಟ್ಟು ಹೆಚ್ಚಾದವು. ಮೋದಿಯವರ ಪರಿಯಸ್ಥ ಉದ್ಯಮಿಗಳು ಛಾವಣಿಯ ಮೂಲಕ ಗುಂಡು ಹಾರಿಸಿ ಶೂಟ್ ಮಾಡುವ ಮಾದರಿಯಲ್ಲಿ ಬ್ಯಾಂಕ್ ಗಳ ವಂಚನೆ ಮಾಡಿದರು ಎಂದು ಲೇಖಕರು ಗಂಭೀರ ಆರೋಪ ಮಾಡಿದ್ದಾರೆ.

ಆದರೆˌ ದುರಂತದ ಸಂಗತಿ ಏನೆಂದರೆ ಬಹುತೇಕ ಮತದಾರರಿಗೆ ಬ್ಯಾಂಕ್ ಠೇವಣಿ ಮತ್ತು ಮನೆ/ಕಾರು ಸಾಲಗಳ ದರಗಳನ್ನು ಹೊರತು ಪಡಿಸಿ ಬ್ಯಾಂಕಿಂಗ್ ವ್ಯವಹಾರಗಳು ಅರ್ಥವಾಗದಿರುವುದು. ಈ NPA ಗಳಿಂದ ನಮ್ಮ ಬ್ಯಾಂಕುಗಳ ಯಾವ ಹಣ ನಿಜವಾಗಿ ಹೊಗೆಯಲ್ಲಿ ತೇಲಿ ಹೋಯಿತೊ ಅದು ಹೇಗೆ ಶಾಶ್ವತವಾಗಿ “written off” ಆಯಿತು ಎಂಬುದನ್ನು ನೋಡೋಣ. ಆರ್‌ಬಿಐ ನಿರ್ದೇಶನದಂತೆ “ತಮ್ಮ ಬ್ಯಾಲೆನ್ಸ್ ಶೀಟ್‌ಗಳನ್ನು ಸ್ವಚ್ಛಗೊಳಿಸಲು, ತೆರಿಗೆ ಪ್ರಯೋಜನಗಳನ್ನು ಪಡೆಯಲು ಮತ್ತು ಬಂಡವಾಳವನ್ನು ಅತ್ಯುತ್ತಮವಾಗಿಸಲು” ಬ್ಯಾಂಕುಗಳು ಈ ಅಂತಿಮ ರೈಟ್-ಆಫ್‌ಗಳಲ್ಲಿ ತೊಡಗಿಕೊಂಡಿವೆ ಎಂದು ಸರ್ಕಾರ ಹೇಳುತ್ತದೆ. ನಿಜ ಹೇಳಬೇಕೆಂದರೆˌ ಇದು ಕಳೆದು ಹೋದ ದಿನಗಳ ‘ಅಂಟಿಕೊಂಡಿರುವ ದಾಖಲೆ’ಗಳಂತೆ ಧ್ವನಿಸುತ್ತದೆ ಮತ್ತು ಈ ವಂಚಕ ಗಿಳಿಗಳು ತಮ್ಮ ಈ ತರಹದ ನಿರಂತರ ಅವಧಿ ಮೀರಿದ ಬುದ್ಧಿವಂತಿಕೆಯಯಿಂದ ಬ್ಯಾಂಕುಗಳಿಗಾದ ಅಭೂತಪೂರ್ವ ನಷ್ಟವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿವೆ ಎನ್ನುತ್ತಾರೆ ಲೇಖಕರು.

ಏಕೆಂದರೆ ಈ ನಷ್ಟ ಸರಕಾರ ಮಾಡಿದ್ದಲ್ಲ. ಆದರೆ ಸಾಮಾನ್ಯ ಬ್ಯಾಂಕ್ ಗ್ರಾಹಕರ ಠೇವಣಿ ಹಣವನ್ನು ದರೋಡೆಕೋರರು ಮತ್ತು ಧನದಾಹಿಗಳಿಂದ ಉಂಟಾದ ನಷ್ಟವನ್ನು ಮುಚ್ಚಿಹಾಕಲು”ಹೊಂದಾಣಿಕೆ” ಮಾಡಲಾಗುತ್ತದೆ. ಜನರ ಮೂಲಭೂತ ಸೌಕರ್ಯಗಳಾದ ಶಿಕ್ಷಣ, ಆರೋಗ್ಯ, ಸಾಮಾಜಿಕ ಅಥವಾ ಗ್ರಾಮೀಣ ಉದ್ಯೋಗ ಕ್ಷೇತ್ರಗಳಿಗೆ ಹೆಚ್ಚುವರಿಯಾಗಿ ಪ್ರತಿ ಸಾವಿರ ಕೋಟಿ ರೂಪಾಯಿಗಳನ್ನು ಕಡಿತಗೊಳಿಸುವ ಮೋದಿ ಸರಕಾರ, ಮರುಪಾವತಿ ಮಾಡದ ಸಾಲಕ್ಕಾಗಿ ೧೨.೫ ಲಕ್ಷ ಕೋಟಿ ರೂ.ಗಳನ್ನು ಅಳಿಸಿಹಾಕುತ್ತದೆ, ಅದೂ ತಮಗೆ ಪರಿಚಯವಿರುವ ಯಾವುದೇ ಒಬ್ಬ ವಂಚಕˌ ಕಿಡಿಗೇಡಿಗಳನ್ನು ಜೈಲಿಗೆ ಸಹ ಹಾಕದೆ ಎನ್ನುವದು ನಾವು ಅರ್ಥಮಾಡಿಕೊಳ್ಳಬೇಕಿದೆ. ಈ ಬೃಹತ್ ಮೊತ್ತದ “ಚೇತರಿಸಿಕೊಳ್ಳಲಾಗದ ನಷ್ಟ” ವನ್ನು ಸಾಮಾನ್ಯ ಜನರು ಕಷ್ಟದಿಂದ ಬೆವರು ಸುರಿಸಿ ಗಳಿಸಿದ ಆಪರೇಟಿಂಗ್ ಮಾರ್ಜಿನ್ ಹೊಂದಿರುವ ಬ್ಯಾಂಕ್ ಠೇವಣಿಗಳಿಂದ ಏಕೆ ಹೊಂದಿಸಲಾಗಿದೆ ಎಂದು ಪ್ರಶ್ನಿಸುವಷ್ಟು ಯಾವುದೇ ನಾಗರಿಕರಿಗೆ ಮಾಹಿತಿಯಿಲ್ಲ ಎನ್ನುತ್ತಾರೆ ಲೇಖಕರು.

ಕಾರಣ ಇದು ತುಂಬಾ ಕ್ರೂರವಾಗಿ, ಅಚ್ಚುಕಟ್ಟಾಗಿ ಮತ್ತು ಅಷ್ಟೇ ಸ್ವಚ್ಛವಾಗಿ ಮಾಡಲಾಗಿರುವ ರಾಕೆಟ್ ಎಂದು ಕೆಲವರಿಗೆ ಅರ್ಥವಾಗುತ್ತದೆ. ಒಟ್ಟಾರೆˌ ನಾವು ಕಳೆದುಕೊಂಡೆವು, ಅವರು ಗಳಿಸಿಕೊಂಡರು ಅಷ್ಟೆ ಎನ್ನುತ್ತಾರೆ ಲೇಖಕರು. ಭಾರತದ ಬ್ಯಾಂಕುಗಳಲ್ಲಿನ ಹಣ ಕಣ್ಮರೆ ಆಗುವದಿಲ್ಲ, ಅದು ಒಂದು ಜೇಬಿನಿಂದ ಇನ್ನೊಂದಕ್ಕೆ ಚಲಿಸುತ್ತದೆ ಅಷ್ಟೆ. ಡೀಫಾಲ್ಟ್ ಉದ್ಯಮಿಗಳು ಈ ರೈಟ್-ಆಫ್ಸ್ ಎಂದು ಕರೆಯಲ್ಪಡುವ ವಾಸ್ತವಿಕ ಮನ್ನಾಗಳಿಂದ ಲಾಭ ಪಡೆಯುತ್ತಾರೆ. ಅವರಿಗೆ ಇದರ ಬಿಸಿ ತಾಕುವದಿಲ್ಲ. ತಮಗೆ ‘ಸಹಾಯ’ ಮಾಡುವ ರಾಜಕೀಯ ಪಕ್ಷಕ್ಕೆ ಹಣಕಾಸು ಒದಗಿಸುವ ದೊಡ್ಡ ತಿಮಿಂಗಲಗಳು ಈ ಹಗರಣಗಳನ್ನು ನಿಖರವಾದ “ಕಾರ್ಪೊರೇಟ್ ಸಂಸ್ಥೆ” ಯ ನೆರವಿನೊಂದಿಗೆ ಸಾಕಷ್ಟು ಅಚ್ಚುಕಟ್ಟಾಗಿ ನಿಭಾಯಿಸುತ್ತವೆ. ಇವರ ಈ ಕೃತ್ಯಗಳಲ್ಲಿ ಗೊಂದಲಮಯ ನಗದು ನಿರ್ವಹಣೆ ಅಥವಾ ನಿಧಿ ವರ್ಗಾವಣೆಯ ಯಾವುದೇ ಜಾಡುಗಳನ್ನು ಬಿಡುವುದಿಲ್ಲ. ಹೀಗಾಗಿ ಈ ಆರ್ಥಿಕ ಅಪರಾಧಗಳು ಯಾವ ಸಾಕ್ಷ್ಯವನ್ನು ಉಳಿಸದೆ ನಿರ್ದೋಷಿಯಾಗಿಬಿಡುತ್ತವೆ ಎನ್ನುತ್ತಾರೆ ಲೇಖಕರು.

ಸಹಜವಾಗಿ, ಬ್ಯಾಂಕರ್‌ಗಳು, ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ಗುಪ್ತಚರ ನಿರ್ದೇಶನಾಲಯ, ಗಂಭೀರ ವಂಚನೆಗಳ ಕಚೇರಿ ಮತ್ತು ಇತರ ಕಾರ್ಪೊರೇಟ್ ಹಾಗು ಹಣಕಾಸು ಆಡಳಿತ ನಿಯಂತ್ರಕರು ನಿಜವಾಗಿಯೂ ಈ ಹಗರಣಗಳ ಕುರಿತು ಗಂಭೀರವಾಗಿದ್ದರೆ, ಇತರ ಲೋ ಪ್ರೋಫೈಲ್ ಆರೋಪಿಗಳ ಪ್ರಕರಣಗಳಂತೆ ಇವನ್ನು ಕೂಡ ಭೇದಿಸಬಹುದು ಎನ್ನುತ್ತಾರೆ ಲೇಖಕರು. ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಎನ್‌ಪಿಎ ಮತ್ತು ರೈಟ್-ಆಫ್‌ಗಳ ನಿಖರ ಸಂಖ್ಯೆ ದೃಢೀಕರಿಸುವ ಬದಲು, ನಿರ್ಮಲಾ ಸೀತಾರಾಮನ್ ಅವರು ತಮ್ಮ ಉಪ ಕಾರ್ಯದರ್ಶಿಗಳು ಬರೆದುಕೊಟ್ಟ ಭಾಷಣಗಳು ಮಾತ್ರ ಓದುತ್ತಾರೆ. ಆಗಸ್ಟ್ ೧೮, ೨೦೨೨ ರಂದು, ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (AIBEA) ಒದಗಿಸಿದ ಹೇಳಿಕೆಯನ್ನೆ ಹಣಕಾಸು ಸಚಿವಾಲಯವು ಹೆಚ್ಚು ಕಡಿಮೆ ದೃಢಪಡಿಸಿದೆ, ಕೇವಲ ೧೩ ಅನುತ್ಪಾದಕ ಆಸ್ತಿಗಳು ಒಟ್ಟು ಬ್ಯಾಂಕ್‌ನ ಮೂರನೇ ಎರಡರಷ್ಟು ಭಾಗದಷ್ಟಿದ್ದು ಅದು ೪.೪೭ ಲಕ್ಷ ಕೋಟಿ ಸಾಲದ ಮೊತ್ತ ಹೊಂದಿದೆ. ಈ ರೀತಿಯ ತನಿಖಾ ಪ್ರಶ್ನೆಯನ್ನು ವಿತ್ತ ಸಚಿವಾಲಯ ಸದಾ ತಿರುಚುತ್ತದೆ.

ಏಕೆಂದರೆ, ಇದು ಸ್ಪಷ್ಟವಾಗಿ ತಮ್ಮ ರಾಜಕೀಯ ನಾಯಕರನ್ನು ಮೆಚ್ಚಿಸುವುದಾಗಿದೆ. ದೇಶದಲ್ಲಿರುವ ಅನೇಕ ಕಾನೂನುಗಳನ್ನು ಬದಲಾಯಿಸುವ ಮೋದಿ ಆರ್ಥಿಕ ಅಪರಾಧಿಗಳಿಗೆ ಅನುಕೂಲವಾಗುವ ಪ್ರಸ್ತುತ ಹಣಕಾಸು ಕಾನೂನುಗಳನ್ನು ಮಾತ್ರ ತಿದ್ದುಪಡಿ ಮಾಡದಿರಲು ನಿರ್ಧರಿಸಿದ್ದಾರೆ ಎನ್ನುತ್ತಾರೆ ಲೇಖಕರು. ಉದಾಹರಣೆಗೆ, ವಿಡಿಯೋಕೋನ್ ೪೬,೦೦೦ ಕೋಟಿ ರೂಪಾಯಿ ಸಾಲವನ್ನು ಹೊಂದಿತ್ತು. ಈ ಪ್ರಕ್ರಿಯೆಯ ಮೂಲಕ ಕೇವಲ ೬% ಕ್ಲೈಮ್‌ಗಳಿಗೆ ಅದನ್ನು ವೇದಾಂತಕ್ಕೆ (ಮೋದಿ ಅಕೋಲಿಟ್ ಕಂಪನಿ ಎಂಬ ವಾಸನೆ ಜೋರಾಗಿದೆ) ಮಾರಾಟ ಮಾಡಲಾಯಿತು. ಎಬಿಜಿ ಶಿಪ್‌ಯಾರ್ಡ್‌ನ ರೂ ೨೨,೮೦೦ ಕೋಟಿ ಸಾಲವನ್ನು ಅದರ ಮೌಲ್ಯದ ಕೇವಲ ೫% ರಷ್ಟು ಮಾತ್ರ ದಿವಾಳಿ ಲೇಕ್ಕಕ್ಕೆ ಹಾಕಲಾಗಿದೆ. ಏಕೆಂದರೆ ಉತ್ತಮ ರಾಜಕೀಯ ಸಂಪರ್ಕ ಹೊಂದಿರುವ ಇದರ ಮಾಲೀಕರು ಹೊಸ ಸಾಲಗಳೊಂದಿಗೆ ಪುನರಾವರ್ತಿತ ನಷ್ಟವನ್ನು ಮುಚ್ಚಿಟ್ಟಿದ್ದಾರೆ ಮಾತ್ರವಲ್ಲದೆ ವೈಯಕ್ತಿಕ ಲಾಭಕ್ಕಾಗಿ ಕಂಪನಿಯ ಹಣವನ್ನು ದೊಡ್ಡ ಪ್ರಮಾಣದಲ್ಲಿ ಹೀರಿಕೊಂಡಿದ್ದಾರೆ.

ರಾಜಕೀಯ ಪ್ರಮುಖರನ್ನು ತೃಪ್ತಿಪಡಿಸಿದ ನಂತರ ಸಾರ್ವಜನಿಕರ ಹಣವನ್ನು ತಮ್ಮ ವೈಯಕ್ತಿಕ ಸಂಪತ್ತಿಗೆ ತಿರುಗಿಸುವ ವೃತ್ತಿಪರ ‘ಬ್ಯಾಂಕ್ ದರೋಡೆಕೋರರ’ ದಪ್ಪ ಚರ್ಮದ ಮೇಲೆ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಅವರ ಬೆತ್ತ ಸಂಪೂರ್ಣ ನಿಷ್ಪರಿಣಾಮಕಾರಿ ಎಂದು ಇದರಿಂದ ಸಾಬೀತಾಗಿದೆ ಎನ್ನುತ್ತಾರೆ ಲೇಖಕರು. ರಾಜ್ಯಸಭಾ ಸಂಸದ ಮತ್ತು ಮಾಜಿ ಸಂಸ್ಕೃತಿ ಕಾರ್ಯದರ್ಶಿ ಮತ್ತು ಪ್ರಸಾರ ಭಾರತಿಯ ಸಿಇಒ ಆಗಿರುವ ಜವಾಹರ್ ಸಿರ್ಕಾರ್ ಅವರು ಬರೆದಿರುವ ಈ ಅಂಕಣವು ಮೋದಿಯವರ ಉದ್ದೇಶಪೂರ್ವಕ ಕಳಪೆ ಹಣಕಾಸು ನಿರ್ವಹಣೆ ಮತ್ತು ಅವರಿಂದ ಅವರ ಆಪ್ತ ಉದ್ಯಮಿಗಳಿಗೆ ಹಾಗು ವೈಯಕ್ತಿಕವಾಗಿ ಅವರಿಗೆ ಆಗುತ್ತಿರುವ ರಾಜಕೀಯ ಲಾಭ ದೇಶದ ಅರ್ಥ ವ್ಯವಸ್ಥೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆವನ್ನು ಹೇಗೆ ದುರ್ಬಲಗೊಳಿಸುತ್ತಿದೆ ಎನ್ನುವದನ್ನು ಮಾರ್ಮಿಕವಾಗಿ ವಿವರಿಸುತ್ತದೆ. ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಛದ್ಮವೇಶದಲ್ಲಿ ಫ್ಯಾಸಿಷ್ಟ್ ಶಕ್ತಿಗಳು ಈ ದೇಶವನ್ನು ಹೇಗೆ ಅಧಃಪತನಕ್ಕೆ ನೂಕುತ್ತಿವೆ ಎನ್ನುವ ಸಂಗತಿ ಈಗಲಾದರೂ ದೇಶದ ಜನತೆ ಅರ್ಥಮಾಡಿಕೊಳ್ಳುವುದು ಒಳಿತು.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

ರಾಷ್ಟ್ರೀಯ ರೈತ ಮುಖಂಡರಿಂದ ಮುಖ್ಯಮಂತ್ರಿ ಸಿದ್ದರಾಯ್ಯ ಭೇಟಿ..!

Next Post

12 ಹಾಲಿ ಬಿಜೆಪಿ ಸಂಸದರಿಗೆ ಕೈತಪ್ಪಲಿದೆಯಾ ಟಿಕೆಟ್.!?

Related Posts

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ
ಅಂಕಣ

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

by ಪ್ರತಿಧ್ವನಿ
May 23, 2026
0

ನಾ ದಿವಾಕರ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಆಳುವ ವರ್ಗಗಳು ಜನಸಾಮಾನ್ಯರಿಗೆ ಮಿತವ್ಯಯದ ಉಪದೇಶ ಮಾಡುವುದು ಈ ಜನರ ಸಂಕಟಗಳು ಹೆಚ್ಚಾದಾಗ ಅಲ್ಲ, ಮಾರುಕಟ್ಟೆಗೆ ಬಲವಾದ ಹೊಡೆತ ಬಿದ್ದು ಬುಡ...

Read moreDetails
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 22, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

May 18, 2026
ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

May 13, 2026
Next Post
ಬಿಜೆಪಿ ಹಾಗೂ SDPI  ಚಡ್ಡಿ ದೋಸ್ತಿ ತುಂಬಾ ಹಿಂದಿನದಂತೆ, ಕಾಂಗ್ರೆಸ್‌ ಆರೋಪ..!

12 ಹಾಲಿ ಬಿಜೆಪಿ ಸಂಸದರಿಗೆ ಕೈತಪ್ಪಲಿದೆಯಾ ಟಿಕೆಟ್.!?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada