ದೇವರಾಜ ಅರಸು ಅವರ ನಂತರ ನಾರಿಹಳ್ಳ ಜಲಾಶಯಕ್ಕೆ ಆಗಮಿಸಿದ ಎರಡನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎನ್ನುವ ಸಂತಸವನ್ನು ಬಾಗಿನ ಅರ್ಪಣೆ ಪೂಜಾ ಕಾರ್ಯದಲ್ಲಿದ್ದ ಪುರೋಹಿತರು ಹಂಚಿಕೊಂಡರು.
ಸಂಡೂರು ತಾಲೂಕಿನ ನಾರಿಹಳ್ಳ ಕಿರು ಡ್ಯಾಂ 0.810 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು 615 ಕಿ.ಮೀ. ವಿಸ್ತೀರ್ಣ ಇದೆ.
ಈ ಜಲಾಶಯ ಸಂಡೂರಿನ 20 ಗ್ರಾಮಗಳಿಗೆ ಕುಡಿಯುವ ನೀರಿಗೆ ಆಧಾರ ಆಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar), ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಖಾನ್ (Jameer Ahamed Khan), ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ (Labour Minister Santhosh Lad), ಶಾಸಕರಾದ ಶ್ರೀನಿವಾಸ್(MLA Shrinivas), ಕಂಪ್ಲಿ ಗಣೇಶ್(Kampli Ganesh), ಲತಾ ಮಲ್ಲಿಕಾರ್ಜುನ್(Latha Mallikarjun), ಸಂಸದ ಈ.ತುಕಾರಾಂ(E Tukaram) ಸೇರಿ ಹಲವರು ಉಪಸ್ಥಿತರಿದ್ದರು.