ತಮಿಳುನಾಡು (Tamil Nadu) ರಾಜ್ಯದ ಕಡಲೂರು ಜಿಲ್ಲೆಯ ಇತಿಹಾಸ ಪ್ರಸಿದ್ದ ಚಿದಂಬರಂ ನಟರಾಜ (Chidambaram Nataraja) ದೇವಸ್ಥಾನದಲ್ಲಿ ದಲಿತ ಮಹಿಳೆಯೊಬ್ಬರಿಗೆ ದೇವಸ್ಥಾನದ ಅರ್ಚಕರುಗಳು ಜಾತಿ ನಿಂದನೆ ಮಾಡಿರುವುದಾಗಿ ಕೇಳಿ ಬಂದಿದೆ. ಈ ಕುರಿತು ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ SC/ST ದೌರ್ಜನ್ಯ ತಡೆ ಕಾಯ್ದೆಯಡಿ (Prevention of Atrocities) ಪ್ರಕರಣ ದಾಖಲಿಸಲಾಗಿದೆ.
ದೇವಸ್ಥಾನದ ಆವರಣದೊಳಗಿರುವ ಕನಗ ಸಭಾಯಿಯನ್ನು ಮಹಿಳೆ ಪ್ರವೇಶಿಸಿದ್ದನ್ನು ಕಂಡ ಅರ್ಚಕರ ತಂಡವೊಂದು ಮಹಿಳೆಯನ್ನು ತಡೆದು ನಿಂದಿಸಿದ್ದಾರೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅರ್ಚಕರ ಗುಂಪು ಮಹಿಳೆಯ ಮೇಲೆ ಗಲಾಟೆ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಚಿದಂಬರಂ ಟೌನ್ ಪೊಲೀಸ್ ಅಧಿಕಾರಿಗಳು (Chidambaram police) ಪ್ರಕರಣವನ್ನು ದಾಖಲಿಸರುವುದರ ಬಗ್ಗೆ ಖಚಿತಪಡಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ಹೇಳಿದ್ದಾರೆ. IPC ಸೆಕ್ಷನ್ 147 (punishment for rioting), 341 (wrongful restraint) and 323 (punishment for voluntarily causing hurt) ಪಿಒಎ ಹೊರತುಪಡಿಸಿ ತಮಿಳುನಾಡು ಮಹಿಳೆಯರ ಕಿರುಕುಳ ನಿಷೇಧ ಕಾಯ್ದೆಯಡಿ ಪ್ರಕರಣವನ್ನ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಂತ್ರಸ್ತೆ ಲಕ್ಷ್ಮೀ ಜಯಶೀಲ (Lakshmi Jayasheela ), ತಾನು ದೇವಸ್ಥಾನಕ್ಕೆ 20 ವರ್ಷಗಳಿಂದ ಭೇಟಿ ನೀಡುತ್ತಿದ್ದು ಈ ಹಿಂದೆ ದೇವರ ದರ್ಶನಕ್ಕೆ ಕನಗ ಸಭಾಯಿಯನ್ನು ಪ್ರವೇಶಿಸಲು ಅವಕಾಶವಿತ್ತು ಕಳೆದ ಎರಡು ವರ್ಷಗಳಿಂದ ಸಾಂಕ್ರಾಮಿಕವಿದ್ದ ಕಾರಣ ಪುರೋಹಿತರು ಪ್ರವೇಶವನ್ನು ನಿರಾಕರಿಸಿದರು. ಕಳೆದ ನಾಲ್ಕೈದು ತಿಂಗಳಿನಿಂದ ಭಕ್ತರಿಗೆ ಕೋವಿಡ್ ಕಾರಣ ನೀಡಿ ಪ್ರವೇಶವನ್ನಿ ನಿರ್ಬಂಧಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸರ್ಕಾರ ಕೋವಿಡ್ (COVID-19) ವಿಧಿಸಿದ ಕೋವಿಡ್ ನಿರ್ಬಂದಗಳು ಜಾರಿಯಲ್ಲಿದ್ದಾಗ ಅದು ಪಾಲನೆ ಮಾಡುವುದು ನಮ್ಮ ಕರ್ತವ್ಯ ಆದರೆ, ನಿಯಮಗಳನ್ನು ಸರ್ಕಾರ ಹಿಂಪಡೆದಿರುವುದರಿಂದ ಅರ್ಚಕರು ಯಾರನ್ನು ಒಳಗೆ ಬಿಡುತ್ತಿಲ್ಲ. ಕನಗಾ ಸಭಾಯಿಯನ್ನು ಪ್ರವೇಶಿಸಿ ಶಿವನ ದರ್ಶನ ಪಡೆದರೆ ನಮ್ಮ ಬೇಡಿಕೆಗಳು ಈಡೇರುತ್ತವೆ ಎಂದು ಹೇಳಿದ್ದಾರೆ.
ಫೆಬ್ರವರಿ 13ರಂದು ಪ್ರವೇಶ ನೀಡುವಂತೆ ಅರ್ಚಕರಿಗೆ ಮನವಿ ಮಾಡಿದೆ ಆಗ ಕೋಪಗೊಂಡ ಅರ್ಚಕರ ತಂಡ ಏಕಾಏಕಿ ನನ್ನ ಮೇಲೆ ಗಲಾಟೆ ಮಾಡಲು ಬಂದರು ಮತ್ತು ನನ್ನ ಜಾತಿ ಹೆಸರಿನೊಂದಿಗೆ ನನ್ನನು ನಿಂದಿಸಲು ಶುರು ಮಾಡಿದ್ದರು ಆ ನಂತರ ಬೇರೆ ಭಕ್ತಾಧಿಗಳು ಕೇಳಿದಾಗ ನಾನು ದೇವರ ಬೆಳ್ಳಿ ಆಬರಣಗಳನ್ನು ಕದಿಯಲು ಯತ್ನಿಸಿದೆ ಎಂದು ನನ್ನ ಮೇಲೆ ಗೂಬೆ ಕೂರಿಸಲು ನೋಡಿದ್ದರು ನಾನು ಅಷ್ಟರಲ್ಲಾಗಲ್ಲೇ ಪೊಲೀಸರಿಗೆ ದೂರು ನೀಡಿದೆ. ಪೊಲೀಸರು ಬಂದಾಗ ಆ ಹೆಣ್ಣು ಮಗಳು ನಮ್ಮಗೆ ಸಹೋದರಿಯಿದ್ದಂತೆ ನಾವೇಕೆ ಅವಳನ್ನು ನಿಂದಿಸುತ್ತೇವೆ ಎಂದು ಹೇಳಿದ್ದರು ಎಂದು ಮಹಿಳೆ ಹೇಳಿದ್ದಾರೆ.
ಆದರೆ, ಅರ್ಚಕರ ಮಂಡಳಿ ಮಹಿಳೆ ವಿರುದ್ದ ಯಾವುದೇ ದೂರನ್ನು (complaint against) ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.









