ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಚೇತೇಶ್ವರ್ ಪೂಜಾರ ಕೌಂಟಿ ಕ್ರಿಕೆಟ್ ನಲ್ಲಿ ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಎರಡನೇ ದ್ವಿಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
ರನ್ ಬರ ಎದುರಿಸುತ್ತಿದ್ದ ಪೂಜಾರ ಕೌಂಟಿ ಕ್ರಿಕೆಟ್ ಆಡಲು ನಿರ್ಧರಿಸಿದರು. ಕೌಂಟಿ ಡಿವಿಜನ್ ಚಾಂಪಿಯನ್ ಶಿಪ್ ನಲ್ಲಿ ಸಸೆಕ್ಸೆ ತಂಡದ ಪರ ಆಡುತ್ತಿರುವ ಪೂಜಾರ 2ನೇ ದ್ವಿಶತಕ ಗಳಿಸಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಪೂಜಾರ 334 ಎಸೆತಗಳಲ್ಲಿ 24 ಬೌಂಡರಿ ಸೇರಿದ 203 ರನ್ ಸಿಡಿಸಿದರು. ನಿನ್ನೆ 107 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಆದರೆ ಎರಡನೇ ದಿನ ದ್ವಿಶತಕ ಪೂರೈಸಿದರು.
ಪೂಜಾರ ದ್ವಿಶತಕದ ನೆರವಿನಿಂದ ಸಸೆಕ್ಸ್ 538 ರನ್ ಗಳಿಸಿದ್ದು, ಒಟ್ಟಾರೆ 335 ರನ್ ಗಳ ಮುನ್ನಡೆ ಪಡೆದಿದೆ.