ಚೆನ್ನೈ: 15ಕ್ಕೂ ಹೆಚ್ಚು ಅಧಿಕಾರಿಗಳ ತಂಡದೊಂದಿಗೆ ನಾನು ಚೆನ್ನೈಗೆ ಬಂದಿದ್ದು ಘನತ್ಯಾಜ್ಯ ನಿರ್ವಹಣೆ ಮತ್ತು ಸಿಎನ್‌ಜಿ ಹೇಗೆ ಉತ್ಪಾದನೆಯಾಗುತ್ತಿದೆ ಎಂಬುದನ್ನು ವೀಕ್ಷಿಸಲು ಬಂದಿದ್ದೇನೆ.ಈ ಮಾದರಿ ಬೆಂಗಳೂರಿಗೂ ಉಪಯೋಗವಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾನು ಚೆನ್ನೈ ಸರ್ಕಾರ ಮತ್ತು ಇಡೀ ತಂಡವನ್ನು ಅಭಿನಂದಿಸಲು ಬಯಸುತ್ತೇನೆ.ಘನತ್ಯಾಜ್ಯ ನಿರ್ವಹಣೆ ನಮಗೆಲ್ಲರಿಗೂ ಉತ್ತಮವಾದ ಕಲಿಕೆಯಾಗಿದೆ. ಇದೇ ರೀತಿಯ ವ್ಯವಸ್ಥೆಯಿಂದ ನಮ್ಮ ಬೆಂಗಳೂರಿಗೆ ಉಪಯೋಗವಾಗುತ್ತದೆ ಎಂಬ ದೃಷ್ಟಿಯಿಂದ ಈ ಮಾದರಿಯನ್ನು ಅಧ್ಯಯನ ಮಾಡಲು ನಾವು ಚೆನ್ನೈಗೆ ಬಂದಿದ್ದೇವೆ ಎಂದು ಡಿಕೆಶಿ ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಡೆಯೂ ಕಸದ ರಾಶಿ. ಕಸದ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಕಸ ನಿಯಂತ್ರಣ ಬಗ್ಗೆ ಆತಂಕಗೊಂಡಿರುವ ಬಿಬಿಎಂಪಿ, ತ್ಯಾಜ್ಯ ನಿರ್ವಹಣೆ ಮಾಡುವಂತೆ ನಾಗರಿಕರಿಗೆ ಹೇಳುತ್ತಿದೆ.
ನಾಗರಿಕರು ತಮ್ಮ ತ್ಯಾಜ್ಯವನ್ನು ಪ್ರತ್ಯೇಕಿಸಿ ಮತ್ತು ಸಂಸ್ಕರಿಸಬೇಕು, ಕೇವಲ ದೊಡ್ಡ ಅಪಾರ್ಟ್‌ಮೆಂಟ್‌ಗಳು ಅಥವಾ ವಸತಿ ಸಮುಚ್ಚಯಗಳಲ್ಲಿ ಮಾತ್ರವಲ್ಲ, ಮನೆಗಳಲ್ಲಿಯೂ ಮಾಡಬೇಕು.ಎಲ್ಲವನ್ನೂ ನಾವೇ ಮಾಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಹೇಳಿದೆ.