• Home
  • About Us
  • ಕರ್ನಾಟಕ
Friday, August 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಪ್ರಗತಿಪರತೆಯ ಲಕ್ಷಣವೂ ಪ್ರಗತಿಪರರ ಆದ್ಯತೆಗಳೂ

ನಾ ದಿವಾಕರ by ನಾ ದಿವಾಕರ
July 26, 2023
in ಅಂಕಣ, ಅಭಿಮತ
0
ಬಾಡಿಗೆದಾರರಿಗೂ ಗೃಹ ಜ್ಯೋತಿ ಅನ್ವಯಿಸಲು ಅಧಿಕಾರಿಗಳಿಗೆ ಸೂಚನೆ : ಮುಖ್ಯಮಂತ್ರಿ ಸಿದ್ದರಾಮಯ್ಯ
Share on WhatsAppShare on FacebookShare on Telegram

ಪ್ರಗತಿಪರತೆಯನ್ನು ಪರ-ವಿರೋಧಿ ನೆಲೆಯಲ್ಲಿ ನಿಷ್ಕರ್ಷಿಸುವುದರಿಂದ ಸ್ವ ಹಿತಾಸಕ್ತಿಗಳು ಹೆಚ್ಚಾಗುತ್ತವೆ

ADVERTISEMENT

ಕರ್ನಾಟಕದ ಮತದಾರರು ರಾಜ್ಯದ ಎಲ್ಲ ಪ್ರಗತಿಶೀಲ ಮನಸುಗಳಿಗೆ ಒಂದು ತೆರೆದ ವಾತಾವರಣವನ್ನು ಸೃಷ್ಟಿಸುವಂತಹ ನಿರ್ಣಾಯಕ ತೀರ್ಪು ನೀಡುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಮ್ಮೆ ಆಡಳಿತ ನಡೆಸುವ ಅವಕಾಶವನ್ನು ನೀಡಿದ್ದಾರೆ. ಭೌತಿಕವಾಗಿ ಹಲವು ರೀತಿಯಲ್ಲಿ ನಿಯಂತ್ರಿಸಲ್ಪಟ್ಟು ಬೌದ್ಧಿಕವಾಗಿ ಉಸಿರುಗಟ್ಟಿದ ವಾತಾವರಣದಲ್ಲಿದ್ದ ರಾಜ್ಯದ ಸಾರ್ವಜನಿಕ ವಲಯ ಮತ್ತೊಮ್ಮೆ ವಾಕ್‌ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವಾಯತ್ತತೆಗೆ ಮುಕ್ತವಾಗಿದೆ. ಹೊಸ ಕಾಂಗ್ರೆಸ್‌ ಸರ್ಕಾರ ತನ್ನ ಹಿಂದಿನ ಅವತಾರದಲ್ಲಿ ಮಾಡಿದ ತಪ್ಪುಗಳನ್ನೇ ಮತ್ತೆ ಮಾಡದೆ ಸಮಾಜಮುಖಿ ಆಡಳಿತವನ್ನು ನೀಡುತ್ತದೆ ಎಂಬ ಭರವಸೆಯೊಂದಿಗೆ ರಾಜ್ಯದ ಶೋಷಿತ ಸಮುದಾಯಗಳು, ದಲಿತ ಸಂಘಟನೆಗಳು, ರೈತಾಪಿ ಸಮುದಾಯ, ಮಹಿಳಾ ಸಂಘಟನೆಗಳು ಹಾಗೂ ಹಿಂದುಳಿದ ವರ್ಗಗಳು ರಾಜಕೀಯ ಮನ್ವಂತರಕ್ಕೆ ಪೂರಕವಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿವೆ.

ಕೋಮುವಾದ, ಜಾತಿ ದ್ವೇಷ, ಮತದ್ವೇ಼ಷ, ಮತಾಂಧತೆ ಹಾಗೂ ಕೆಲವೇ ಗುಂಪುಗಳ ಅನೈತಿಕ ಪೊಲೀಸ್‌ಗಿರಿಯಿಂದ ಬೇಸತ್ತಿದ್ದ ಜನತೆ ಕರ್ನಾಟಕದ ಸಮನ್ವಯ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಸಹಬಾಳ್ವೆಯ ವಾತಾವರಣವನ್ನು ಕಾಪಾಡಿಕೊಳ್ಳುವ ಒಂದು ಗುರಿಯೊಂದಿಗೆ ಹೊಸ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಜನತೆಯ ಈ ವಿಶ್ವಾಸವನ್ನು ಉಳಿಸಿಕೊಳ್ಳುವ ನೈತಿಕ ಜವಾಬ್ದಾರಿ ಕಾಂಗ್ರೆಸ್‌ ಸರ್ಕಾರದ ಮೇಲಿದೆ. ರಾಜಕೀಯ ಅರ್ಥದಲ್ಲಿ ವ್ಯಾಖ್ಯಾನಿಸಲಾಗುವ ಸೆಕ್ಯುಲರಿಸಂ ಅಥವಾ ಜಾತ್ಯತೀತತೆಯು ಇತ್ತೀಚೆಗೆ ಅರ್ಥಹೀನವಾಗುತ್ತಿರುವ ಸಂದರ್ಭದಲ್ಲಿ ರಾಜ್ಯದ ಜನತೆ ಬಯಸುವ ಸೌಹಾರ್ದಯುತ ವಾತಾವರಣ ಮತ್ತು ಕೂಡಿ ಬಾಳುವ ಸಾಂಸ್ಕೃತಿಕ ಪರಿಸರವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಸಿದ್ಧರಾಮಯ್ಯ ಸರ್ಕಾರ ತನ್ನ ಆಡಳಿತ ನೀತಿಗಳನ್ನು ಜಾರಿಗೊಳಿಸಬೇಕಿದೆ. ಸರ್ಕಾರ ತನ್ನ ಆಳ್ವಿಕೆಯ ಆದ್ಯತೆಗಳನ್ನು ಕೇವಲ ಗ್ಯಾರಂಟಿಗಳಲ್ಲೇ ಕಂಡುಕೊಳ್ಳದೆ ತನ್ನ ಸಾಮಾಜಿಕ-ಸಾಂಸ್ಕೃತಿಕ ಜವಾಬ್ದಾರಿಯನ್ನೂ ಅರಿತು, ರಾಜ್ಯದ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರನ್ನೂ ಒಳಗೊಳ್ಳುವ ಆಡಳಿತವನ್ನು ಖಚಿತಪಡಿಸಬೇಕಿದೆ.

ಒಳಗೊಳ್ಳುವಿಕೆಯ ಹಾದಿಗಳ ನಡುವೆ

ಈ ನಡುವೆ ನೆಮ್ಮದಿಯ ಬದುಕು ಬಯಸುವ ರಾಜ್ಯದ ಜನಸಾಮಾನ್ಯರ ನಡುವೆ ಸೋದರತ್ವವನ್ನು ಬೆಳೆಸುವುದಷ್ಟೇ ಅಲ್ಲದೆ ಈಗಾಗಲೇ ಮುಗಿಲೆತ್ತರಕ್ಕೆ ಎದ್ದುನಿಂತಿರುವ ಪ್ರತ್ಯೇಕತೆಯ ಗೋಡೆಗಳನ್ನು ಕೆಡವಿ “ ಎಲ್ಲರನ್ನೂ ಒಳಗೊಳ್ಳುವ ” ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ನಾಗರಿಕ ಸಮಾಜದ ಮೇಲೆ ಇರುವುದನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ. ಈ ನಾಗರಿಕ ಸಮಾಜದ ವಿವಿಧ ಗುಂಪುಗಳೇ ರಾಜ್ಯದಲ್ಲಿನ ರಾಜಕೀಯ ಬದಲಾವಣೆಯ ಹಿಂದಿನ ಪ್ರಧಾನ ಶಕ್ತಿಗಳಾಗಿ ಕಾರ್ಯನಿರ್ವಹಿಸಿರುವುದನ್ನು  2023ರ ಚುನಾವಣೆಗಳು ನಿರೂಪಿಸಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ಹಾಲಿ ಸರ್ಕಾರ ಕೈಗೊಳ್ಳಬಹುದಾದ, ಜಾರಿಗೊಳಿಸುವ ಯಾವುದೇ ಜನವಿರೋಧಿ ಆಡಳಿತ ನೀತಿಗಳ ವಿರುದ್ಧ, ಅಪ್ರಜಾಸತ್ತಾತ್ಮಕ ಧೋರಣೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವ ವ್ಯವಧಾನ, ದಾರ್ಷ್ಟ್ಯ ಮತ್ತು ನೈತಿಕ ಹೊಣೆಗಾರಿಕೆ ಪ್ರಗತಿಪರ ಮನಸುಗಳ ಆದ್ಯತೆಯಾಗಬೇಕಿದೆ..

ಪ್ರಗತಿಪರತೆಯನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ ಎರಡು ಪ್ರಧಾನ ಧೋರಣೆಗಳನ್ನು ಅನುಸರಿಸಬೇಕಾಗುತ್ತದೆ.

 ಮೊದಲನೆಯದು ಯಾವುದೇ ಒಂದು ಆಡಳಿತ ವ್ಯವಸ್ಥೆಯ ಅಥವ ರಾಜಕೀಯ ವಾತಾವರಣದ “ಪರ-ವಿರೋಧ”ದ ನೆಲೆಯಲ್ಲಿ ಪ್ರಗತಿಪರತೆಯನ್ನು ನಿಷ್ಕರ್ಷಿಸುವುದರಿಂದ ಸಮಾಜದ ಸರ್ವತೋಮುಖ ಪ್ರಗತಿ ಬಯಸುವ, ಎಲ್ಲರನ್ನೂ ಒಳಗೊಳ್ಳುವ ಸಮ ಸಮಾಜ ನಿರ್ಮಾಣದ ಕನಸು ಹೊತ್ತ ಬೌದ್ಧಿಕ ವರ್ಗವು ಸಂಕುಚಿತ ಸಿಕ್ಕುಗಳಲ್ಲಿ ಸಿಲುಕಿಬಿಡುವ ಅಪಾಯ ಇರುತ್ತದೆ. ಜಾತಿ-ವರ್ಗ ಅಥವಾ ಲಿಂಗತ್ವವನ್ನಾಧರಿಸಿದ ಸಾಂಘಿಕ ಚೌಕಟ್ಟುಗಳು ಸಾಮಾನ್ಯವಾಗಿ ಸಮಷ್ಟಿ ಪ್ರಜ್ಞೆಯೊಂದಿಗೇ ರೂಪುಗೊಳ್ಳುವುದರಿಂದ ಇಲ್ಲಿ ವ್ಯಕ್ತವಾಗುವ ಪ್ರಗತಿಪರ ಧೋರಣೆ ವೈಚಾರಿಕತೆ, ವೈಜ್ಞಾನಿಕ ಪ್ರಜ್ಞೆ ಹಾಗೂ ಸಮಾನತೆಯ ಆಶಯಗಳೊಂದಿಗೆ ಕೂಡಿರಬೇಕಾಗುತ್ತದೆ. ಅಧಿಕಾರ ರಾಜಕಾರಣದಲ್ಲಿ ಈ ಆಶಯಗಳಿಗೆ ವಿರುದ್ಧವಾದ ಬೆಳವಣಿಗೆಗಳನ್ನು ಕಂಡಾಗಲೆಲ್ಲಾ ಈ ಸಾಂಘಿಕ ಶಕ್ತಿಗಳು ತಮ್ಮ ಪ್ರತಿರೋಧದ ಧ್ವನಿಯನ್ನು ದಾಖಲಿಸಬೇಕಾಗುತ್ತದೆ. ಇಲ್ಲಿ ಸಂಘಟಿತವಾಗುವ ಪ್ರಗತಿಶೀಲ ಮನಸುಗಳು ಯಾವುದೇ ರೀತಿಯ ಸಾಮಾಜಿಕ-ಸಾಂಸ್ಕೃತಿಕ ಅನ್ಯಾಯ ಅಥವಾ ದೌರ್ಜನ್ಯದ ವಿರುದ್ಧ ಸಿಡಿದೇಳುವ ಧೋರಣೆಯನ್ನು ರೂಢಿಸಿಕೊಂಡಿರುತ್ತವೆ. 

ಹಾಗಾಗಿ ಇಲ್ಲಿ ವ್ಯಕ್ತವಾಗುವ “ಪರ-ವಿರೋಧಿ” ನೆಲೆಗಳು ಮೂಲತಃ ರಾಜಕೀಯ ಅಧಿಕಾರ ಕೇಂದ್ರಗಳಿಂದ ಪ್ರಭಾವಿತವಾಗದಂತೆ ಎಚ್ಚರವಹಿಸುವುದು ನಮ್ಮ ಆದ್ಯತೆಯಾಗಬೇಕಾಗುತ್ತದೆ. ರಾಜಕೀಯವಾಗಿ ನಿರ್ವಚಿಸಲ್ಪಡುವ ಹಾಗೂ ಈ ಸಾಂಘಿಕ ಚೌಕಟ್ಟುಗಳಲ್ಲಿ ನಿಷ್ಕರ್ಷೆಗೊಳಗಾಗುವ ಸೆಕ್ಯುಲರಿಸಂ ಅಥವಾ ಜಾತ್ಯತೀತತೆಯ ವ್ಯಾಖ್ಯಾನಗಳು ಸಹಜವಾಗಿಯೇ ಭಿನ್ನವಾಗಿರುತ್ತವೆ. “ಎಲ್ಲರ ಒಳಗೊಳ್ಳುವಿಕೆ ” ಎನ್ನುವ ಒಂದು ಉದಾತ್ತ ಪ್ರಗತಿಶೀಲ ಧೋರಣೆ ಇಲ್ಲಿ ಮುಖ್ಯವಾಗುತ್ತದೆ. ಭಿನ್ನ ಸಿದ್ಧಾಂತಗಳನ್ನು ಅಥವಾ ಸೈದ್ಧಾಂತಿಕ ನೆಲೆಗಳೊಡನೆ ಮುಖಾಮುಖಿಯಾಗುವ ಸಂದರ್ಭದಲ್ಲಿ ಪ್ರಗತಿಪರ ಶಕ್ತಿಗಳ ನಡುವೆಯೂ ಕಂಡುಬರುವ ತಾತ್ವಿಕ ಸಂಘರ್ಷಗಳು ಸಾಂಘಿಕ ಐಕ್ಯತೆ ಮತ್ತು ಐಕಮತ್ಯಕ್ಕೆ ಭಂಗ ಉಂಟುಮಾಡದಂತೆ ಎಚ್ಚರ ವಹಿಸಬೇಕಾಗುತ್ತದೆ. ಹಾಗೆಯೇ ಒಳಗೊಳ್ಳುವಿಕೆಯ ಪ್ರಜ್ಞೆಯ ನೆಲೆಯಲ್ಲೇ ಭಿನ್ನ ಸಿದ್ಧಾಂತಗಳನ್ನು ಒಳಗೊಳ್ಳುವ, ಅನುಸಂಧಾನ ನಡೆಸುವ, ಪರಾಮರ್ಶಿಸುವ ಔನ್ನತ್ಯವನ್ನೂ ಸಹ ರೂಢಿಸಿಕೊಳ್ಳಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಅನ್ಯ ಸಿದ್ಧಾಂತಗಳ ನಿರಾಕರಣೆಯ ಮನಸ್ಥಿತಿ ಕೆಲವೊಮ್ಮೆ ಪ್ರಗತಿಶೀಲರಲ್ಲೂ ಸಹ ಬಹಿಷ್ಕರಿಸುವ ಧೋರಣೆಗೆ ಕಾರಣವಾಗುತ್ತದೆ.

ಭಿನ್ನ ತಾತ್ವಿಕ ನೆಲೆಗಳನ್ನು ಒಪ್ಪದಿರುವುದಕ್ಕೂ, ನಿರಾಕರಿಸುವುದಕ್ಕೂ, ಬಹಿಷ್ಕರಿಸುವುದಕ್ಕೂ ನಡುವೆ ಇರುವ ಸೂಕ್ಷ್ಮ ಎಳೆಯನ್ನು ಗುರುತಿಸುವುದು ಇಲ್ಲಿ  ಮುಖ್ಯವಾಗುತ್ತದೆ. ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಖ್ಯಾತ ಉದ್ಯಮಿ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್ಟ ಅವರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಬಗ್ಗೆ ನಡೆದ ಸಂವಾದಗಳು ಹಾಗೂ ಚಕ್ರವರ್ತಿ ಸೂಲಿಬೆಲೆ ಅವರನ್ನು ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸುವುದಕ್ಕೆ ವ್ಯಕ್ತವಾದ ವಿರೋಧ ಈ ಎರಡೂ ಪ್ರಸಂಗಗಳು ನಮ್ಮ ನಡುವಿನ ಸೂಕ್ಷ್ಮತೆಯನ್ನು ಹೊರಗೆಡಹುತ್ತವೆ. ಸೂಲಿಬೆಲೆ ಅವರ ಸೈದ್ಧಾಂತಿಕ ನೆಲೆಯನ್ನು ಒಪ್ಪದಿರುವ ಕಾರಣಕ್ಕೇ ಸಾರ್ವಜನಿಕ ಸಮಾರಂಭವೊಂದರಲ್ಲಿ ಅವರ ಭಾಗವಹಿಸುವಿಕೆಯನ್ನೇ ಬಹಿಷ್ಕರಿಸುವಂತೆ ಒತ್ತಾಯಿಸುವುದು ಪ್ರಗತಿಪರತೆ ಎನಿಸಿಕೊಳ್ಳುವುದಿಲ್ಲ. ನಿರಂಕುಶತ್ವ ಎನಿಸಿಕೊಳ್ಳುತ್ತದೆ. ಎಲ್ಲ ರೀತಿಯ ಆಲೋಚನೆಗಳಿಗೂ ಮುಕ್ತ ಅವಕಾಶ ನೀಡುವ ಪ್ರಜಾಸತ್ತಾತ್ಮಕ ಧೋರಣೆಗೆ ಇದು ತದ್ವಿರುದ್ಧವಾಗಿ ಕಾಣುತ್ತದೆ. ಬಲಪಂಥೀಯ ರಾಜಕಾರಣದ ಈ ಧೋರಣೆಯ ಪರಿಣಾಮವೇ ಇಂದು ದೇಶಾದ್ಯಂತ ಹಾಸ್ಯ ಕಲಾವಿದರೂ, ಸಾಹಿತಿಗಳೂ ಬಹಿಷ್ಕೃತರಾಗುತ್ತಿದ್ದಾರೆ. ವೈಚಾರಿಕತೆ ಮತ್ತು ವೈಜ್ಞಾನಿಕ ನೆಲೆಯ ಪ್ರಗತಿಪರತೆ ಈ ಧೋರಣೆಗೆ ಬಲಿಯಾಗುವುದರ ವಿರುದ್ಧ ನಾವು ಎಚ್ಚರವಹಿಸಬೇಕಿದೆ.

ಮುಂದುವರೆಯುತ್ತದೆ,,,,,

Tags: CM SiddaramaiahCongress GovernmentCongress GuaranteeDKShivakumar
Previous Post

ಶಾಸಕ ಬಿ.ಆರ್ ಪಾಟೀಲ್ ಅವರ ಹೆಸರಲ್ಲಿ ಹರಿದಾಡುತ್ತಿರುವ ನಕಲಿ ಪತ್ರದ ಕುರಿತು ಶಾಸಕರ ಸ್ಪಷ್ಟನೆ

Next Post

ಪ್ರಗತಿಪರತೆಯ ಲಕ್ಷಣವೂ ಪ್ರಗತಿಪರರ ಆದ್ಯತೆಗಳೂ – ಭಾಗ 2

Related Posts

Top Story

ಹೊಸ ಚಿತ್ರ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮುಂದಾದ ನಮ್ ಋಷಿ ..

by ಪ್ರತಿಧ್ವನಿ
August 20, 2025
0

ಹಾಡಿನೊಂದಿಗೆ ಬಂದ "ಫ್ರಾಡ್ ಋಷಿ" ಈವರೆಗೂ ಮೂವತ್ತು ಕೋಟಿ ಜನರು ವೀಕ್ಷಣೆ ಮಾಡಿ,‌ ಇಂದಿಗೂ ಟ್ರೆಂಡಿಂಗ್ ನಲ್ಲಿರುವ "ಒಳಿತು ಮಾಡು ಮನುಸ. ನೀ ಇರೋದು ಮೂರು ದಿವಸ"...

Read moreDetails

K V Prabhakar: ವೃತ್ತಿಪರತೆ-ಕರ್ತವ್ಯ ನಿಷ್ಠೆ ನನ್ನನ್ನು ಕೈ ಹಿಡಿದು ನಡೆಸಿವೆ: ಕೆ.ವಿ.ಪ್ರಭಾಕರ್

August 20, 2025

DK Shivakumar: ಕಾಂಗ್ರೆಸ್ ಯೋಜನೆಗಳಿಂದ ಬಡವರ ಜೇಬಿಗೆ 1 ಲಕ್ಷ ಕೋಟಿ ಹಾಕುತ್ತಿದ್ದೇವೆ..!!

August 20, 2025

CM Siddaramaiah: ಸರಳ, ಸಜ್ಜನಿಕೆಯ ಪ್ರಾಮಾಣಿಕ ಹೋರಾಟಗಾರ ಮೈಕೆಲ್ ಫರ್ನಾಂಡಿಸ್: ಸಿ.ಎಂ.ಸಿದ್ದರಾಮಯ್ಯ

August 19, 2025

DK Shivakumar: ಕಳಸಾ ಬಂಡೂರಿ ಯೋಜನೆ ಮೂಲಕ ನಮ್ಮ ಪಾಲಿನ ನೀರು ಬಳಸಲು ರಾಜ್ಯಕ್ಕೆ ಸಂಪೂರ್ಣ ಹಕ್ಕಿದೆ..!!

August 19, 2025
Next Post
ಪ್ರಗತಿಪರತೆಯ ಲಕ್ಷಣವೂ ಪ್ರಗತಿಪರರ ಆದ್ಯತೆಗಳೂ – ಭಾಗ 2

ಪ್ರಗತಿಪರತೆಯ ಲಕ್ಷಣವೂ ಪ್ರಗತಿಪರರ ಆದ್ಯತೆಗಳೂ - ಭಾಗ 2

Please login to join discussion

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
Top Story

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

by ಪ್ರತಿಧ್ವನಿ
August 21, 2025
Top Story

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

by ಪ್ರತಿಧ್ವನಿ
August 21, 2025
Top Story

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

by ಪ್ರತಿಧ್ವನಿ
August 21, 2025
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ
Top Story

ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

by ಪ್ರತಿಧ್ವನಿ
August 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

August 21, 2025

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

August 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada