ಬೆಂಗಳೂರು: ಮೊನ್ನೆ ವಿಧಿವಶರಾದ ಮುತ್ಸದಿ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅಂತ್ಯ ಸಂಸ್ಕಾರದ ವೇಳೆ ನಡೆದ ಸರ್ಕಾರಿ ಗೌರವಗಳ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ದಾವಣಗೆರೆ ಡಿಸಿ ಮತ್ತು ಎಸ್ ಪಿಯಿಂದ ಉತ್ತರ ಪಡೆಯುವುದಾಗಿಯೂ ತಿಳಿಸಿದ್ದಾರೆ.

- ನಗರದಲ್ಲಿ ಇಂದು ಬೆಳಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಹಿರಿಯ ಮುತ್ಸದಿ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ಪಕ್ಷ ನಿಷ್ಠೆ, ಪ್ರಾಮಾಣಿಕತೆ ಬಗ್ಗೆ ಹೇಳೋಕೆ ಆಗಲ್ಲ. ಅವರ ಅಂತಿಮ ಸಂಸ್ಕಾರಕ್ಕೆ ನಮ್ಮ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಕೂಡ ಅಧಿವೇಶನ ಬಿಟ್ಟು ವಿಶೇಷ ವಿಮಾನದಲ್ಲಿ ಬಂದಿದ್ದರು. ನಾನು, ಸಿಎಂ ಸೇರಿದ್ದಂತೆ ವಿರೋಧ ಪಕ್ಷಗಳ ನಾಯಕರು ಕೂಡ ಬಂದಿದ್ದರು. ಆದರೆ ನಿನ್ನೆ ಸ್ವಲ್ಪ ವ್ಯವಸ್ಥೆ ಸರಿಯಾಗಿರಲಿಲ್ಲ. ಸರ್ಕಾರಿ ಗೌರವಗಳನ್ನ ಸರಿಯಾದ ರೀತಿಯಲ್ಲಿ ಕೊಡಬೇಕು.
- ಸರ್ಕಾರಿ ಗೌರವ ಎಷ್ಟು ಕೊಡಬೇಕು ಅಷ್ಟು ಕೊಡಬೇಕು. ನಿನ್ನೆಯ ಘಟನೆ ನನ್ನ ಮನಸ್ಸಿಗೆ ಸರಿ ಅನ್ನಿಸಿಲ್ಲ. ನನಗೆ ಅಸಮಾಧಾನ ಆಗಿದೆ. ಅಂತಿಮ ಸಂಸ್ಕಾರದ ವೇಳೆ ಜನ ಜಾಸ್ತಿ ಇದ್ದರು ಎನ್ನಬಹುದು. ಆದರೆ ವ್ಯವಸ್ಥೆ ಸರಿಯಾಗಿ ಮಾಡಬೇಕು ಅಲ್ವಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಅಂತಿಮ ಸಂಸ್ಕಾರದ ವೇಳೆ ವ್ಯವಸ್ಥೆ ಸರಿಯಾಗಿ ಇಲ್ಲದಿರೋದಕ್ಕೆ ಡಿಸಿ ಮತ್ತು ಎಸ್ ಪಿಗೆ ಮುಖ್ಯ ಕಾರ್ಯದರ್ಶಿಯಿಂದ ನೋಟಿಸ್ ನೀಡಲು ಹೇಳ್ತಿನಿ. ಅವ್ಯವಸ್ಥೆ ಬಗ್ಗೆ ಉತ್ತರ ಪಡೆಯುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.










