
ಬಿಜೆಪಿ ನಾಯಕ, ಎಂಎಲ್‌ಸಿ ಸಿ.ಪಿ.ಯೋಗೇಶ್ವರ ಚನ್ನಪಟ್ಟಣದ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ.ಆದರೆ ಟಿಕೆಟ್ ಸಿಗುವ ಭರವಸೆ ಹೈಕಮಾಂಡ್ ನಾಯಕರಿಂದ ಸಿಕ್ಕಿಲ್ಲ.ಮತ್ತೊಂದು ಕಡೆ ಮೈತ್ರಿ ಅಭ್ಯರ್ಥಿ ಅಂತಿಮಗೊಳಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಂತಿಮ ಒಪ್ಪಿಗೆ ಬೇಕಿದೆ. ಟಿಕೆಟ್ ಸಿ. ಪಿ.ಯೋಗೇಶ್ವರ ಕೈ ತಪ್ಪಿದರೆ ಮುಂದೇನು? ಎಂಬುದು ಬೇರೆ ಲೆಕ್ಕಾಚಾರ.