![](https://pratidhvani.com/wp-content/uploads/2024/06/FB_IMG_1717758658453-819x1024.jpg)
ಸ್ಯಾಂಡಲ್ ವುಡ್ ನ ಮತ್ತೊಂದು ಜೊಡಿ ಕಡೆಯಿಂದ ಕಹಿಸುದ್ದಿಯೊಂದು ಹೊರಬಂದಿದೆ. ಬಿಗ್ಬಾಸ್ ಖ್ಯಾತಿಯ ಚಂದನ್ ಶೆಟ್ಟಿ – ಹಾಗೂ ನಟಿ ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು ಮೂಡಿ ಡಿವೋರ್ಸ್ ಪಡೆದುಕೊಂಡಿದ್ದಾರೆ. ಈ ಜೋಡಿ ಡಿವೋರ್ಸ್ ಸುದ್ದಿ ಕೇಳಿ ಎಲ್ಲರಿಗೂ ಶಾಕ್ ಆಗಿದೆ. ಇಬ್ಬರು ಪರಸ್ಪರ ಒಪ್ಪಂದದ ಮೇರೆಗೆ ಡಿವೋರ್ಸ್ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇಬ್ಬರು ಬಿಗ್ಬಾಸ್ ಸ್ನೇಹಿತರು. ಬಿಗ್ಬಾಸ್ನಿಂದ ಶುರುವಾದ ಪ್ರೀತಿ ಮದುವೆ ಹಂತಕ್ಕೆ ಬಂದು 4 ವರ್ಷಗಳ ಸಂಸಾರವು ಮಾಡಿದ್ರು. ಚಂದನ್ ಶೆಟ್ಟಿ 2019ರಲ್ಲಿ ನಡೆದ ಯುವ ದಸರ ಕಾರ್ಯಕ್ರಮದಲ್ಲಿ ರೊಮ್ಯಾಂಟಿಕ್ ಸಾಂಗ್ ಹಾಡಿದ ಬಳಿಕ ನಿವೇದಿತಾಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಒಳಗಾಗಿತ್ತು.
![](https://pratidhvani.com/wp-content/uploads/2024/06/WhatsApp-Image-2024-06-07-at-4.10.21-PM-1-1-856x1024.jpeg)
ಇದಾದ ಬಳಿಕ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆ್ಯಕ್ಟೀವ್ ಆಗಿದ್ರು. ಚಂದನ್, ನಿವೇದಿತಾ ಇಬ್ಬರು ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ರೆ ಸೋಷಿಯಲ್ ಮೀಡಿಯಾದಲ್ಲಿ ಸಾವಿರಾರು ಲೈಕ್ಸ್ ಲಕ್ಷಗಟ್ಟಲೇ ವೀವ್ಸ್ ಬರೋದು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ರಾಜಾ ರಾಣಿ ಸೀಸನ್ ಒಂದರಲ್ಲೂ ಕಾಣಿಸಿಕೊಂಡಿದ್ರು. ಅಲ್ಲೇ ಪ್ರಪೋಸ್ ಕಾಂಟ್ರವರ್ಸಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ರು.4 ವರ್ಷಗಳ ಹಿಂದೆ 2020ರಲ್ಲಿ ಫೆಬ್ರವರಿ 26ನೇ ತಾರೀಕಿನಂದು ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಆಗಿದ್ರು. ಮದುವೆಗೆ ಪುನೀತ್ ರಾಜ್ಕುಮಾರ್ ದಂಪತಿ, ಧ್ರುವ ಸರ್ಜಾ ದಂಪತಿ, ರಘು ಶಾಸ್ತ್ರಿ, ನಟ ಶ್ರೇಯಸ್ ಮಂಜು, ಶೈನ್ ಶೆಟ್ಟಿ, ನಟಿ ಅದ್ವಿತಿ ಶೆಟ್ಟಿ, ನಿರೂಪಕ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮುಂತಾದವರು ಬಂದು ಜೋಡಿಗೆ ಶುಭ ಹಾರೈಸಿದ್ರು. ಈ ಜೋಡಿ ಹಲವು ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿ ಜನಮನ್ನಣೆ ಕೂಡ ಗಳಿಸಿತ್ತು. ಕಳೆದ 4 ವರ್ಷಗಳಿಂದ ಒಟ್ಟಾಗಿ ಸಂಸಾರ ಮಾಡಿದ್ದ ಈ ಜೋಡಿ ಈಗ ದಿಢೀರ್ ಡೈವೋರ್ಸ್ ಪಡೆದುಕೊಂಡಿರೋದು ಸಾಕಷ್ಟು ಸಸ್ಪೆನ್ಸ್ ಮೂಡಿಸಿದೆ. ಚಾಕಲೇಟ್ ಗರ್ಲ್ ಬಾಳಲ್ಲಿ ಈಗ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.