ರಾಯಚೂರಿನಲ್ಲಿ ಯುವ ಬ್ರಿಗೇಡ್ (Yuva brigade) ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarthy sulibele) ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳದ ಬಗ್ಗೆ ಮಾತನಾಡಿದ್ದಾರೆ. ಯುವ ಬ್ರಿಗೇಡ್ನ ಬೆಳಕು ಹೊಳಪು ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ,ರಾಜ್ಯದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಳ ಆಗಿದ್ದು, ಸದ್ಯ ರಾಜ್ಯ ಸರ್ಕಾರ ಮುಸ್ಲಿಂಮರ ಕಂಟ್ರೋಲ್ ನಲ್ಲಿದೆ. ಮುಸ್ಲಿಂಮರು ಮೊದಲಿನಿಂದಲೂ ತಮ್ಮ ಸಂಖ್ಯೆಯನ್ನ ಹೆಚ್ಚಿಸಿಕೊಳ್ಳುತ್ತಿದ್ದಾರೆ.ಕತ್ತಿಯನ್ನ ತೋರಿಸಿ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗ ಅನ್ಯ ಮತದ ಹೆಣ್ಣುಮಕ್ಕಳನ್ನ ಮದುವೆಯಾಗುವ ಮೂಲಕ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.ಬಾಂಗ್ಲಾದಿಂದ (Bangladesh) ಬಂದ ಮುಸ್ಲಿಮರನ್ನ ಒಳಗೆ ಬಿಟ್ಟುಕೊಳ್ಳುತ್ತಿದ್ದಾರೆ.ಸಂಖ್ಯೆಯ ಹೆಚ್ಚಳ ಮೂಲಕ ರಾಜ್ಯವನ್ನ ಕಂಟ್ರೋಲ್ ಗೆ ತೆಗೆದುಕೊಳ್ಳಬೇಕು ಅನ್ನೋದು ಅವರ ಉದ್ದೇಶ ಎಂದು ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ.
ಈಗ ಸಂಖ್ಯೆ ಶೇಕಡಾ 20 ರಿಂದ 22 ಇರಬಹುದು ಕರೋನಾ ಕಾಲದಲ್ಲಿ ಮಸೀದಿಗೆ ಹೋಗಿ ಪ್ರಾರ್ಥನೆ ಮಾಡೇ ಮಾಡ್ತಿವಿ ಅಂತಾರೆ. ಸಾಮಾಜಿಕವಾಗಿ ಎಲ್ಲರಿಗೆ ತೊಂದರೆಯಾಗುತ್ತೆ ಅಂದಾಗಲೂ ವಿಶಾಲ ಮನೋಭಾವದ ಮಂದಿ ಅವರಲ್ಲಾ,ಸಂಖ್ಯೆ ಹೆಚ್ಚುಮಾಡುವ ಮೂಲಕ ಮುಂದೆ ಒಂದುದಿನ ಕರ್ನಾಟಕವನ್ನ ತಮ್ಮ ಕಂಟ್ರೋಲ್ ಗೆ ತೆಗೆದುಕೊಳ್ಳಬೇಕು ಅನ್ನೊದಿದೆ.ಈ ಕಾಂಗ್ರೆಸ್ ಸರ್ಕಾರವೇ ಮುಸ್ಲಿಮರ ಕಂಟ್ರೋಲ್ ನಲ್ಲಿದೆ ಅಂದ್ರೆ ಆಶ್ಚರ್ಯ ಪಡಬೇಕಿಲ್ಲ ಎಂದು ಹೇಳಿದ್ದಾರೆ.