ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ. ರಾಯ್(CJ Roy) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿಂತೆ ಸಾವಿರಾರು ಅನುಮಾನಗಳು ಹುಟ್ಟಿಕೊಂಡಿದೆ. ಈ ನಡುವೆ ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಚಂದ್ರಚೂಡ್(Chakravarthy Chandrachud )ಅವರು ಸಿ.ಜೆ. ರಾಯ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಕೆಲವು ಸ್ಫೋಟಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.

ಈ ಬಗ್ಗೆ ಚಕ್ರವರ್ತಿ ಅಖಾಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಚಕ್ರವರ್ತಿ ಚಂದ್ರಚೂಡ್, ಮೊದಲು ಅವರು ಕೇರಳದಲ್ಲಿ ಕೇಸ್‌ಗಳಾಗಿ ಇಲ್ಲಿಗೆ ಬಂದು ದೊಡ್ಡ ಕಂಪನಿಗಳನ್ನು ಶುರು ಮಾಡಿದರು ಎನ್ನುವ ವಿಚಾರ ಹೊರಗೆ ಬಂತು. ಬಳಿಕ ದೊಡ್ಡಬಳ್ಳಾಪುರದ ರೆಸಾರ್ಟ್ ಒಂದರಲ್ಲಿ ಸಿ.ಜೆ. ರಾಯ್ ಅವರು ದೊಡ್ಡ ನಟಿಯ ಜೊತೆಗಿನ ಹಗರಣ ಘಟನೆ ಬೆಳಕಿಗೆ ಬಂದಿತ್ತು. ಆದರೆ ಆ ನಟಿ ನಾನಲ್ಲ ಎಂದು ಹೇಳಿದರು. ಬಳಿಕ ಮಾಡೆಲ್‌ಗಳ ಜೊತೆ ಫೋಟೋ ಹೊರಗೆ ಬಂತು ಇದೆಲ್ಲಾ ಅವರ ವೈಯಕ್ತಿಕ. ಅದೇನು ನನಗೆ ದೊಡ್ಡ ಅಪರಾಧ ಅನಿಸಲಿಲ್ಲ ಎಂದು ಹೇಳಿದ್ದಾರೆ.

ಸಿ.ಜೆ. ರಾಯ್ ಅವರು ಭಾರತ ಬಿಟ್ಟು ಹೋಗ್ತಾರಂತೆ ಎನ್ನುವ ವಿಚಾರ ಇತ್ತೀಚಿಗೆ ಹರಿದಾಡುತ್ತಿತ್ತು. ಹಣ ಕಾಸಿನಲ್ಲಿರುವ ಅಡೆತಡೆಯಿಂದ ಭಾರತ ಬಿಟ್ಟು ಹೋಗ್ತಾರೆ ಅಂತಾ ಅವರ ಸುತ್ತಮುತ್ತ ಇರುವ ಜನ ಹೇಳುತ್ತಿದ್ದರು. ಈಗಲೇ ಅವರ ಸಾವಿನ ಬಗ್ಗೆ ಹೇಳಲು ಆಗುವುದಿಲ್ಲ. ಸತ್ಯಶೋಧಕ ತನಿಖೆಯಿಂದ ವಿಚಾರ ಹೊರಗೆ ಬರಬೇಕು. ಅವರು ತುಂಬಾ ಜನಕ್ಕೆ ಸಹಾಯ ಮಾಡಿದ್ದಾರೆ. ಆದರೆ ಅದನ್ನು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ.

ಸಿ.ಜೆ. ರಾಯ್ ಅವರ ಕಂಪನಿಯ ಮೂಲಕ ಸುಮಾರು 1,000 ಕೋಟಿ ರೂಪಾಯಿಗಳ ಹಣಕಾಸು ಹಗರಣ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಾರಿ ಐಟಿಗೆ ದೂರು ನೀಡಿದವರು ಬಲಿಷ್ಠ ಸಾಕ್ಷಿಗಳನ್ನು ಹೊಂದಿದ್ದರು. ಒಂದು ವೇಳೆ ಕಂಪನಿ ಏನಾದರೂ ಸೀಜ್ ಆಗಿದ್ದರೆ ಎಲ್ಲಾ ಕಂಪನಿಗಳು ಸೀಜ್ ಆಗುತ್ತಿದ್ದವು. ಸಿ.ಜೆ. ರಾಯ್ ಅವರು ಈ ಒತ್ತಡಕ್ಕೂ ಸಿಲುಕಿರಬಹುದು. ಅದೇನೇ ಇರಲಿ ಅವರ ಸಾವಿನ ಹಿಂದಿನ ಅಸಲಿ ಸತ್ಯಗಳು ಹೊರಬರಬೇಕು ಎಂದು ಚಕ್ರವರ್ತಿ ಚಂದ್ರಚೂಡ್ ಆಗ್ರಹಿಸಿದ್ದಾರೆ.













