ಕಳೆದ ಹಲವು ದಿನಗಳಿಂದ ಮಹಿಷ ದಸರಾ ಪರ – ವಿರೋಧ ಚರ್ಚೆಗಳ ನಡುವೆ ಮೈಸೂರು ನಗರ ಪೊಲೀಸರು ಷರತ್ತುಗಳನ್ನು ಅನ್ವಯಿಸಿ ಮಹಿಷ ದರಸಾ ಆಚರಣೆಗೆ ಅವಕಾಶ ಮಾಡಿಕೊಡುತ್ತಿದ್ದಂತೆ ಮೋದಿ ಪರ ಭಾಷಣ ಮಾಡು ಚಕ್ರವರ್ತಿ ಸೂಲಿಬೆಲೆ ಅವರು ರಾಜ್ಯ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪ ಮಾಡುತ್ತಿದ್ದಾರೆ.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮೋದಿ ಪರ ಭಾಷಣ ಮಾಡುತ್ತಿರುವ ಚಕ್ರವರ್ತಿ ಸೂಲಿಬೆಲೆ ನಮೋ 2.0 ಬೈಕ್ ರ್ಯಾಲಿಯಲ್ಲಿ ತೊಡಗಿದ್ದು, ದಾವಣಿಗೆಯಲ್ಲಿ ‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ರಾಕ್ಷಸರನ್ನು ಸಮರ್ಥನೆ ಮಾಡಿಕೊಳ್ಳುತ್ತಾ ಬಂದಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಇಂಥ ಕೆಲಸಗಳು ಹೊಸದೇನಲ್ಲ. ರಾಕ್ಷಸ ಪ್ರವೃತ್ತಿ ಮಾಡಿದವರನ್ನೇ ಅವರೆಲ್ಲ ಸಮರ್ಥನೆ ಮಾಡಿಕೊಂಡು ಬಂದಿದ್ದಾರೆ. ಅದು ಯಾವಾಗಲೂ ರಾಕ್ಷಸರ ಪರ. ಇತ್ತ ಮಹಿಷ ದಸರಾ ಬೆಂಬಲಿಸುತ್ತೆ ಅತ್ತ ಇಸ್ರೇಲ್ ಹಮಾಸ್ ಯುದ್ಧದಲ್ಲಿ ಪ್ಯಾಲೆಸ್ತೇನ್ ಹಮಾಸ್ ಉಗ್ರರರನ್ನು ಬೆಂಬಲಿಸುತ್ತೆ ಎಂದು ಕಿಡಿಕಾರಿದರು.
ಮಹಿಷಾ ದಸರಾಕ್ಕೆ ಅನುಮತಿ ನೀಡಿರುವುದರಿಂದ ಸಂಸದ ಪ್ರತಾಪ್ ಸಿಂಹ ಮತ್ತವರ ಬೆಂಗಲಿಗರು ಕಿಡಿಕಾರುತ್ತಿದ್ದಾರೆ ಆದರೆ ಸೂಲಿವೆಲೆಯವರು ಮೈಸೂರು ಜನತೆ ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ ಇದು ಸರಿಯಾಗೇ ಇದೆ ಎಂದು ಹೇಳಿದ್ದಾರೆ.






