ಈಗಾಗಲೇ ರಾಜ್ಯ ಸರ್ಕಾರ ಎನ್‌ಇಪಿ ರದ್ದುಗೊಳಿಸಿ ರಾಜ್ಯಕ್ಕೆ ಬೇಕಾದ ಹೊಸ ಶಿಕ್ಷಣ ನೀತಿಯನ್ನ ರೂಪಿಸುವ ಬಗ್ಗೆ ಚಿಂತನೆಯನ್ನು ನಡೆಸುತ್ತಿದೆ ಇದಕ್ಕೆ ಸಂಬಂಧಪಟ್ಟ ಹಾಗೆ ಈಗಾಗಲೇ ಹಲವು ತಯಾರಿಗಳನ್ನ ರಾಜ್ಯ ಸರ್ಕಾರ ಮಾಡಿಕೊಳ್ಳುತ್ತಿದೆ ಇನ್ನು ಈ ಬಾರಿ ಪಠ್ಯಪುಸ್ತಕ ಪರಿಷ್ಕರಣೆ ಆಗುತ್ತದೆ ಎಂದು ಹೇಳಲಾಗುತ್ತಿತ್ತು ಅದಕ್ಕೆ ಪೂರಕವಾಗಿ ಈಗಾಗಲೇ ಹಲವು ಪಟ್ಟಿಗಳನ್ನ ಪರಿಷ್ಕರಣೆ
ಇನ್ನು ಇದೇ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ಒಂದನ್ನು ನೀಡಿದ್ದು ಇದು ವಿವಾದವನ್ನು ಸೃಷ್ಟಿಸುವ ಎಲ್ಲಾ ಸಾಧ್ಯತೆಗಳು ಇವೆ.

ಹಿಂದೂ ಪಠ್ಯಪುಸ್ತಕ ಪರಿಷ್ಕರಣೆಯ ಬಗ್ಗೆ ಮಾತನಾಡಿದ ಅವರು ಚಕ್ರವರ್ತಿ ಸೂಲಿಬೆಲೆ ಸಾವರ್ಕರ್ ಪಠ್ಯವನ್ನ ತೆಗೆದು ಹಾಕಿಲ್ಲ ಕಿತ್ತು ಬಿಸಾಕಿದ್ದೇವೆ ಎಂಬ ಹೇಳಿಕೆಯನ್ನು ನೀಡಿದ್ದಾರೆ ಇನ್ನೊಂದುಷ್ಟು ಪಟ್ಟಿಗಳ ಪರಿಷ್ಕಣೆ ಆಗಬೇಕಾಗಿದೆ ಅವುಗಳನ್ನು ಮುಂದಿನ ವರ್ಷ ಮಾಡಲಾಗುತ್ತದೆ ಎಂದು ಸ್ಪಷ್ಟನೆಯನ್ನು ಕೂಡ ನೀಡಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಶೇಕಡ 100ರಷ್ಟು ನಾವು ಮಾಡಿಯೇ ತೀರುತ್ತೇವೆ ಪಠ್ಯಪುಸ್ತಕ ಪರಿಷ್ಕರಣೆಗಾಗಿ ಹೊಸ ಸಮಿತಿಯನ್ನು ಕೂಡ ರಚನೆ ಮಾಡಲಾಗುತ್ತದೆ, ಈ ಹೊಸ ಕಮಿಟಿಗೆ ಎಲ್ಲಾ ವಿಷಯಗಳ ಪರಿಣಿತರನ್ನು ನೇಮಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು, ಶಿಕ್ಷಕರ ನೇಮಕಾತಿ ವಿಚಾರದ ಕುರಿತು ಮಾತನಾಡಿದ ಶಿಕ್ಷಣ ಸಚಿವರು ಶಿಕ್ಷಕರ ನೇಮಕಾತಿ ವಿಚಾರವೂ ಕೋರ್ಟ್ ನಲ್ಲಿದೆ ಈ ಕಾರಣಕ್ಕೆ ಅಡ್ವಕೇಟ್ ಜನರಲ್ ಜೊತೆ ಚರ್ಚಿಸಿ ಶೀಘ್ರವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು, ಎಂದು ಸ್ಪಷ್ಟಪಡಿಸಿದ್ದಾರೆ