ವೃತ್ತಿಪರ ಕೋರ್ಸ್ ಆಯ್ಕೆ ಮಾಡಿಕೊಳ್ಳೋ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ ಸಿಇಟಿ (CET) ಪರೀಕ್ಷೆಗಳು ನಡೆಯುತ್ತಿದ್ದು, ಇದೀಗ ಈ ಅಗ್ನಿ ಪರೀಕ್ಷೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಜೀವ ಶಾಸ್ತ್ರ (Biology) ಮತ್ತು ಗಣಿತ (Mathemaics) ವಿಚಾರದಲ್ಲಿ ಪೋಷಕರು, ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 18ರಂದು ಶುರುವಾದ ಈ ಸಿಇಟಿ (CET) ಪರೀಕ್ಷೆಯನ್ನ ಈ ವರ್ಷ ದಾಖಲೆಯ ಪ್ರಮಾಣದಲ್ಲಿ ,ಅಂದ್ರೆ 3ಲಕ್ಷದ 49 ಸಾವಿರದ 637 ವಿದ್ಯಾರ್ಥಿಗಳು ನೊಂದಣಿ ಮಾಡಿಸಿಕೊಂಡು , ಭವಿಷ್ಯದ ಹಾದಿ ಗೆಲ್ಲೋದಕ್ಕೆ ಪಣತೊಟ್ಟಿದ್ದಾರೆ. ಆದ್ರೀಗ ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಲೋಪ ಆಗಿದೆ ಅಂತ ಉಪನ್ಯಾಸಕರು ಆರೋಪಿಸ್ತಿದ್ದಾರೆ.

ನಿನ್ನೆ ಜೀವ ಶಾಸ್ತ್ರ ಹಾಗೂ ಗಣಿತ ಪರೀಕ್ಷೆ ನಡೆದಿದೆ.ಆದ್ರೆ ಅದ್ರಲ್ಲಿ ಔಟ್ ಆಫ್ ಸಿಲೆಬಸ್ (out of syllabus) ಪ್ರಶ್ನೆ ಕೇಳಲಾಗಿದೆ ಅನ್ನೋದು ಇವರ ಆರೋಪ. ಜೀವ ಶಾಸ್ತ್ರದಲ್ಲಿ 60 ಪ್ರಶ್ನೆಗಳ ಪೈತಿ 10 ಡಿಲೀಟ್ ಆಗಿರುವ ಸಿಲೆಬಸ್‌ನಿಂದ ಪ್ರಶ್ನೆ ಬಂದಿದೆ. ಅಲ್ಲದೆ ಗಣಿತದಿಂದಲೂ 18 ಡಿಲೀಟ್ ಆಗಿರುವ ಪ್ರಶ್ನೆ ಬಂದಿದೆ ಅಂತ ಪೋಷಕರು ದೂರಿದ್ದಾರೆ.
ಇನ್ನು ಈ ಆರೋಪವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯ ಮಾತ್ರ ಅಲ್ಲಗಳೆದಿದ್ದಾರೆ. ಆ ರೀತಿ ಔಟ್ ಆಫ್ ಸಿಲಬಸ್ ಪ್ರಶ್ನೆಗಳು ಯಾವುದು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ, ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು CETಗೆ ನೊಂದಣಿ ಮಾಡಿದ್ದು, ಬಹುತೇಕ ಪರೀಕ್ಷಾರ್ಥಿಗಳಿಗೆ ಈ ಪ್ರಶ್ನೆ ಪತ್ರಿಕೆಯೇ ದೊಡ್ಡ ಸವಾಲಾಗಿದೆ.