ಗೂಗಲ್ ಕ್ರೋಮ್ ನಲ್ಲಿ ಕೆಲವು ನ್ಯೂನತೆಗಳು ಕಂಡುಬಂದಿವೆ. ಇದರಿಂದಾಗಿ ಹ್ಯಾಕರ್ ಗಳು ಅದರ ಲಾಭ ಪಡೆದು ಕಂಪ್ಯೂಟರ್ ಅನ್ನು ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ಐಟಿ ಸಚಿವಾಲಯದ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ಡೆಸ್ಕ್ ಟಾಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ಹ್ಯಾಕರ್ ಗಳು ನಿಮ್ಮ ಸಿಸ್ಟಮ್ ಗೆ ರಚಿಸಲಾದ ಕಾರ್ಪಟೆಡ್ ರಿಕ್ವೆಸ್ಟ್ ಕಳುಹಿಸುವ ಮೂಲಕ ಆರ್ಬಿಟರಿ ಕೋಡ್ ನ್ನು ಕಾರ್ಯಗತಗೊಳಿಸಬಹುದು. ಈ ಕೋಡ್ ನಿಮ್ಮ ಕಂಪ್ಯೂಟರ್ ನ ಆಯಂಟಿ ವೈರಸ್ ನ್ನು ಬೈಪಾಸ್ ಮಾಡಿ ಸಂಪೂರ್ಣವಾಗಿ ಹ್ಯಾಕ್ ಮಾಡಬಹುದಾಗಿದೆ.
ಅಪರಿಚಿತ ಲಿಂಕ್ ಕ್ಲಿಕ್ ಮಾಡಬೇಡಿ. ನಿಮಗೆ ಗೊತ್ತಿಲ್ಲದ ವೆಬ್‌ಸೈಟ್‌ಗಳಿಗೆ ಹೋಗಬೇಡಿ ಎಂದು ಸಲಹೆ ನೀಡಿದೆ. ಹೊಸ ಆವೃತ್ತಿಯ ಗೂಗಲ್ ಕ್ರೋಮ್ ಬಳಸಿದರೆ ಹ್ಯಾಕಿಂಗ್ ತಪ್ಪಿಸಬಹುದು.

ಗೂಗಲ್ ಕ್ರೋಮ್ ನಿಂದ ಅಪಾಯ ಬೇಗ ಅಪ್ಡೇಟ್ ಮಾಡಿ ಎಂದ ಗೂಗಲ್!
ಹಳೆಯ ವರ್ಷನ್ ಕ್ರೋಮ್‌ನಲ್ಲಿ ಹಲವು ಗಂಭೀರ ಸ್ವರೂಪದ ಭದ್ರತಾ ಲೋಪಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಸ್ವತಃ ಗೂಗಲ್ ಸಂಸ್ಥೆಯೇ ಎಚ್ಚರಿಕೆಯ ಕರೆಗಂಟೆ ಒತ್ತಿದೆ.
ಗೂಗಲ್ ಕ್ರೋಮ್‌ನ ಆವೃತ್ತಿ ಸಂಖ್ಯೆ 104ರಲ್ಲಿ ಹಲವು ಭದ್ರತಾ ಲೋಪಗಳು ಬೆಳಕಿಗೆ ಬಂದಿದ್ದವು. ಇತ್ತೀಚೆಗೆಗಷ್ಟೇ ಇಂಥ 27 ಬಗ್‌ಗಳನ್ನು ಸರಿ ಮಾಡಿ ಅಪ್‌ಡೇಟೆಡ್ ವರ್ಷನ್ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ 11 ಹೊಸ ಬಗ್‌ಗಳು ಬೆಳಕಿಗೆ ಬಂದಿವೆ. ಈಗ ಮತ್ತೆ ಕ್ರೋಮ್ ಬ್ರೌಸರ್ ಅನ್ನು ಅಪ್‌ಡೇಟ್ ಮಾಡುವಂತೆ ಗೂಗಲ್ ಹೇಳುತ್ತಿದೆ.