ಕಳೆದ ವಾರ ಕೇಂದ್ರ ಸರ್ಕಾರ ಗೋಧಿ ರಫ್ತಿನ ಮೇಲೆ ಹೇರಿದ್ದ ನಿರ್ಬಂಧಗಳನ್ನು ಮಂಗಳವಾರ ಸಡಿಲಿಸಿದೆ. ಮೇ19ರ ಮೊದಲು ಕಸ್ಟಮ್ಸ್ಗೆ ಹಸ್ತಾಂತರಿಸಿದ ಗೋಧಿ ರವಾನಿಸಲು ಅನುಮತಿ ನೀಡಿದೆ.
ಈಗಾಗಲೇ ಕಾಂಡ್ಲಾ ಬಂದರಿನಲ್ಲಿ ಈಜಿಪ್ಟ್ಗೆ ಲೋಡ್ ಆಗಿ ತೆರಳಲಿರುವ ಗೋಧಿಯನ್ನು ರವಾನೆ ಮಾಡಲು ಸರ್ಕಾರ ನಿರ್ಧರಿಸಿದೆ. ಕಾಂಡ್ಲಾ ಬಂದರಿನಲ್ಲಿ ಗೋಧಿಯನ್ನು ಲೋಡ್ ಮಾಡಲು ಅನುಮತಿ ನೀಡುವಂತೆ ಈಜಿಪ್ಟ್ ಸರ್ಕಾರ ಮಾಡಿದ ಮನವಿಯನ್ನು ಭಾರತ ಸರ್ಕಾರ ಪರಿಗಣಿಸಿದೆ.

ಮೇರಾ ಇಂಟರ್ನ್ಯಾಷನಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಯು ಗೋಧಿ ರಫ್ತು ಮಾಡುತ್ತಿದೆ. ಪ್ರಸ್ತುತ 61,500 ಮೆಟ್ರಿಕ್ ಟನ್ ಗೋಧಿಯಲ್ಲಿ 44,340ರಷ್ಟು ಈಗಾಗಲೇ ಲೋಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. 17,160 ಎಂಟಿ ಗೋಧಿಯನ್ನು ರಫ್ತು ಮಾಡಲು ಸಡಿಲಿಕೆ ಆದೇಶದಲ್ಲಿ ತಿಳಿಸಲಾಗಿದೆ.
ಕಳೆದ ವಾರ ಕೇಂದ್ರ ಸರ್ಕಾರವು ತಾಪಮಾನ ಏರಿಕೆ ಹಾಗು ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಬದಲಾವಣೆಯಿಂದಾಗಿ ಗೋಧಿ ಮೇಲಿನ ರಫ್ತು ನಿರ್ಬಂಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.