

ಮೈಸೂರು ಪ್ರವಾಸದಲ್ಲಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ತೆರಿಗೆ ಹಂಚಿಕೆ ವಿಚಾರ ಕುರಿತು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು. ʼತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಮೇಲಿಂದ ಮೇಲೆ ಅನ್ಯಾಯ ಮಾಡುತ್ತಲೇ ಬಂದಿದೆ. ಹೀಗಾಗಿ, ಕಳೆದ ಬಾರಿಯಂತೆ, ಈ ಸಲವೂ ಅಗತ್ಯ ಎನಿಸಿದರೆ ನ್ಯಾಯಾಲಯದ ಮೆಟ್ಟಿಲನ್ನು ಏರುತ್ತೇವೆ, ಈ ಮೂಲಕ ನ್ಯಾಯಾಲಯದ ನೆರವಿನಲ್ಲೇ ನಮ್ಮ ಪಾಲನ್ನು ಪಡೆದುಕೊಳ್ಳುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ʼ15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಅನುದಾನವನ್ನು ಕೇಂದ್ರದ ಹಣಕಾಸು ಸಚಿವರು ರದ್ದು ಪಡಿಸಿದರು. ಆಯೋಗದ ಶಿಫಾರಸಿನಂತೆ ರೂ 5,490 ಕೋಟಿ ಹಾಗೂ ಕೆರೆಗಳ ಅಭಿವೃದ್ಧಿಗೆ ರೂ 3 ಸಾವಿರ ಕೋಟಿ, ರಸ್ತೆ ನಿರ್ಮಾಣಕ್ಕೆ
ರೂ 3 ಸಾವಿರ ಕೋಟಿ, ಭದ್ರಾ ಮೇಲ್ದಂಡೆ ರೂ 5 ಸಾವಿರ ಕೋಟಿಯನ್ನು ನಮಗೆ ಕೊಟ್ಟೆ ಇಲ್ಲ ನಮಗೆ ಸಿಗಬೇಕಿದ್ದ ರೂ 17 ಸಾವಿರ ಕೋಟಿ ಖೋತ ಆಗಿದೆʼ ಎಂದು ಹೇಳಿದರು.
ತಮ್ಮ ಬೆನನ್ನು ತಟ್ಟಿಕೊಳ್ಳುತ್ತಿರುವ ಮೋದಿ ಸರ್ಕಾರ !

ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದ ಸಿದ್ದರಾಮಯ್ಯ ರವರು ಜಿ ಎಸ್ ಟಿ ಉತ್ಸವವನ್ನು ಆಚರಿಸುವಂತೆ ಕೇಂದ್ರ ಸರ್ಕಾರ ಕರೆ ನೀಡುರುವುದ ವಿಚಾರದ ಬಗ್ಗೆ ಪ್ರತಿಕ್ರಿಯೆಸಿದ ಅವರು ʼ2017 ರಲ್ಲಿ ಕೇಂದ್ರ ಸರ್ಕಾರವೇ ಜಿಎಸ್‌ಟಿ ಜಾರಿಗೆ ತಂದು ದರ ನಿಗದಿಪಡಿಸಿತ್ತು.
ಕಳೆದ 8 ವರ್ಷಗಳಲ್ಲಿ ಹೆಚ್ಚಿನ ತೆರಿಗೆ ಪಡೆದಿರುವ ಕೇಂದ್ರ ಆ ಹಣವನ್ನು ಮರುಳಿಸುವುದೇ? ತಾನೇ ಹೆಚ್ಚಿಸಿದ ದರವನ್ನುಈಗ ಕಡಿಮೆ ಮಾಡಿ ಬೆನ್ನು ತಟ್ಟಿಕೊಳ್ಳುತ್ತಿದೆʼಎಂದು ಟೀಕಿಸಿದರು.
ʼಕೇಂದ್ರವು ನೀಡುತ್ತಿರುವ ಕಡಿಮೆ ಅನುದಾನದ ನಡುವೆ ಗ್ಯಾರಂಟಿ ಯೋಜನೆಗಳ ವೆಚ್ಚ ಭರಿಸುವುದು ಸರ್ಕಾರಕ್ಕೆ ಸವಲಾಗಿದ್ದರೂ, ಅದನ್ನು ದಿಟ್ಟತನದಿಂದ ಎದುರಿಸಲಾಗುವುದು. ಜಿಎಸ್‌ಟಿ ಸರಳೀಕರಣದಿಂದ ರಾಜ್ಯ ಸರ್ಕಾರಗಳು ಹೆಚ್ಚಿನ ನಷ್ಟ ಎದುರಿಸಲಾಗುತ್ತಿದೆ.
ಆದರೆ, ಕರ್ನಾಟಕದ ಬಿಜೆಪಿ ಸಂಸದರಿಗೆ ನರೇಂದ್ರ ಮೋದಿ ಅವರನ್ನು ಹೊಗಳುವುದೇ ಕೆಲಸವಾಗಿದ್ದು, ನಾಡಿನ ಹಿತಚಂತನೆ ಮಾಡುತ್ತಿಲ್ಲʼ ಎಂದು ದೂರಿದರು.