ಈ ವರ್ಷ ಮೇ ತಿಂಗಳಲ್ಲಿ ಗೋಧಿ ರಫ್ತಿನ ಮೇಲೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ ನಿಯಮಗಳಲ್ಲಿ ರಫ್ತು ನಿಯಮಗಳನ್ನು ಮಾರ್ಪಾಡು ಮಾಡಲು ಯೋಜಿಸಿದೆ ಎಂದು ತಿಳಿದು ಬಂದಿದೆ.
ಗೋಧಿ ರಫ್ತಿಗೆ ಅನುಮೋದನೆ ನೀಡುವಂತೆ ಸಚಿವಾಲಯ ನೇಮಿಸಿರುವ ಸಮಿತಿ ವತಿಯಿಂದ ಅನುಮೋದನೆ ದೊರೆಯಬೇಕಾಗಿದೆ. ಹೊಸ ನಿಯಮಗಳಯು ಜುಲೈ 12ರಿಂದ ಅನ್ವಯವಾಗಲಿದೆ ಎಂದು ತಿಳಿದು ಬಂದಿದೆ.

ಗೋಧಿ ಹಿಟ್ಟಿನ ರಫ್ತು ನೀತಿಯು ಮುಕ್ತವಾಗಿಯೇ ಉಳಿದಿದೆ ಆದರೆ, ಗೋಧಿ ರಫ್ತಿಗೆ ಸಮಿತಿಯ ಶಿಫಾರಸ್ಸಿನ ಮೇಲೆ ನಿಂತಿರುತ್ತದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ(DGFT) ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಹೊಸ ಅನುಮೋದನೆಯಲ್ಲಿ ಗೋಧಿ, ಮೈದಾ, ರವೆ ಪದಾರ್ಥಗಳಿಗೆ ನಿಯಮ ಅನ್ವಯಿಸಿಲಿದೆ. ಗೋಧಿ ಹಿಟ್ಟಿನ ಗುಣಮಟ್ಟಕ್ಕೆ ತಕ್ಕಂತೆ ಅಗತ್ಯ ವಿಧಾನಗಳನ್ನು ನಂತರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ.