ಸುಪ್ರೀಂ ಕೋರ್ಟ್‌ನ ಎಲ್ಲಾ ಟೀಕೆಗಳು, ವಿರೋಧ ಪಕ್ಷ ಮತ್ತು ಜನಸಾಮಾನ್ಯರ ಚೀಮಾರಿಗಳ ನಂತರ, ಕೇಂದ್ರ ಸರ್ಕಾರ ತನ್ನ ವ್ಯಾಕ್ಸಿನೇಷನ್ ನೀತಿಯನ್ನು ಬದಲಾಯಿದೆ. ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಕೇಂದ್ರ ಘೋಷಿಸಿದೆ. ಇದರೊಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿನ ಲಸಿಕೆಗಳ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದ್ದು ಈಗ ಕೋವಿಶೀಲ್ಡ್, ಸ್ಪುಟ್ನಿಕ್ ಮತ್ತು ಕೊವಾಕ್ಸಿನ್ ಎಂಬ ಮೂರು ಲಸಿಕೆಗಳ ದರವನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
ಖಾಸಗಿ ಆಸ್ಪತ್ರೆಗಳಿಗೆ ನಿಗದಿಪಡಿಸಿದ ಪ್ರತಿ ಲಸಿಕೆಯ ದರ
ಈಗ ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್ ಪ್ರತಿ ಡೋಸ್ಗೆ 780 ರೂಪಾಯಿಯಾದರೆ ಕೋವಾಕ್ಸಿನ್ ಡೋಸ್ಗೆ 1410 ರೂಪಾಯಿ ಮತ್ತು ಸ್ಪುಟ್ನಿಕ್ ಪ್ರತಿ ಲಸಿಕೆಗೆ 1145 ರೂ. ಅಂದು ನಿಗದಿ ಮಾಡಲಾಗಿದೆ. ಈ ನಿಗದಿತ ಬೆಲೆಗಳಿಗಿಂತ ಯಾವುದೇ ಆಸ್ಪತ್ರೆಯು ಲಸಿಕೆಗಾಗಿ ಹೆಚ್ಚು ಹಣವನ್ನು ಪಡೆಯುವಂತಿಲ್ಲ ಎಂದಿದೆ.
ಸರ್ಕಾರ ಹೊರಡಿಸಿರುವ ಆದೇಶದಲ್ಲಿ, ಯಾವುದೇ ಖಾಸಗಿ ಆಸ್ಪತ್ರೆಯು ಜನಗೆ ಸೇವಾ ಶುಲ್ಕವಾಗಿ ಗರಿಷ್ಠ 150 ರೂ.ಗಳನ್ನು ವಿಧಿಸಬಹುದು ಎಂದು ಹೇಳಲಾಗಿದೆ. ಈವರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗಾಗಿ ಎಷ್ಟು ಶುಲ್ಕ ವಿಧಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರಗಳು ಮೇಲ್ವಿಚಾರಣೆ ಮಾಡಲಿವೆ. ಅದೇ ಸಮಯದಲ್ಲಿ, ಲಸಿಕೆ ಕಂಪೆನಿಗಳು ತಮ್ಮ ದರಗಳಲ್ಲಿ ಏನಾದರೂ ಬದಲಾವಣೆಗಳಿದ್ದರೆ, ಆ ಮಾಹಿತಿಯನ್ನು ಸರ್ಕಾರಕ್ಕೆ ಮುಂಚಿತವಾಗಿ ನೀಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಮೇ 1 ರಿಂದ ಸರ್ಕಾರವು ಖಾಸಗಿ ವಲಯ ಮತ್ತು ರಾಜ್ಯಗಳಿಗೆ ಲಸಿಕೆ ನೀತಿಯನ್ನು ಮುಕ್ತವಾಗಿ ತೆರೆದಿತ್ತು. ಅಂದಿನಿಂದ, ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಷನ್ ಪ್ರಾರಂಭವಾಯಿತು. ಆದರೆ ಈ ಮಧ್ಯೆ, ಖಾಸಗಿ ಆಸ್ಪತ್ರೆಗಳು ಲಸಿಕೆಗಾಗಿ ಅನಿಯಂತ್ರಿತವಾಗಿ ಹಣವನ್ನು ವಿಧಿಸುತ್ತಿವೆ ಎಂಬ ಅನೇಕ ವರದಿಗಳು ಬೆಳಕಿಗೆ ಬಂದಿವೆ. ಇದರೊಂದಿಗೆ, ಅನೇಕ ದೊಡ್ಡ ಹೋಟೆಲ್‌ಗಳು ಲಸಿಕೆ ಪ್ಯಾಕೇಜ್‌ಗಳನ್ನು ಸಹ ಪ್ರಾರಂಭಿಸಿದ್ದವು. ಇದರ ದೃಷ್ಟಿಯಿಂದ, ಈಗ ಬೆಲೆಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.
ವ್ಯಾಕ್ಸಿನೇಷನ್ ನೀತಿಯನ್ನೇ ಸರ್ಕಾರ ಬದಲಾಯಿಸಬೇಕಾಗಿ ಬಂತು
ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಲಸಿಕೆಗಾಗಿ ರಾಜ್ಯಗಳು ಇನ್ನು ಮುಂದೆ ಏನನ್ನೂ ಖರ್ಚು ಮಾಡಬೇಕಾಗಿಲ್ಲ. ಇನ್ನೂ ಮುಂದೆ ಕೇಂದ್ರ ಸರ್ಕಾರವೇ ಎಲ್ಲಾ ರಾಜ್ಯಗಳಿಗೂ ಉಚಿತ ಲಸಿಕೆ ನೀಡಲಿದೆ ಎಂದಿದ್ದಾರೆ. ಆದರೆ ಇದು ಮೊದಲೇ ಆಗಬೇಕಾದ ಕೆಲಸವಾಗಿತ್ತು. ಈ ಹಿಂದೆ ಕೇಂದ್ರದಿಂದಲೇ ಲಸಿಕೆ ಖರೀದಿಸಿ ರಾಜ್ಯಗಳಿಗೆ ನೀಡಬೇಕು ಎಂದು ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ನಿರಂತರವಾಗಿ ಒತ್ತಾಯಿಸುತ್ತಿದ್ದವು. ಏಕೆಂದರೆ ವ್ಯಾಕ್ಸಿನೇಷನ್ ಜವಾಬ್ದಾರಿಯು ರಾಜ್ಯಗಳ ಹೆಗಲ ಮೇಲೆ ಬಿದ್ದಾಗ, ಸಾಕಷ್ಟು ಪ್ರಮಾಣದಲ್ಲಿ ಖರೀದಿಸಲು ಲಸಿಕೆಗಳೆ ಇರಲಿಲ್ಲ. ನಂತರ ರಾಜ್ಯಗಳು ಜಾಗತಿಕ ಟೆಂಡರ್‌ಗಳನ್ನು ಸಹ ತೆಗೆದುಕೊಂಡರು ಸಹ ಯಾವುದೇ ಕಂಪನಿಯು ಈ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಇದೆಲ್ಲದರ ನಂತರ, ಸುಪ್ರೀಂ ಕೋರ್ಟ್ ಕೇಂದ್ರದ ವ್ಯಾಕ್ಸಿನೇಷನ್ ನೀತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ ಮತ್ತು ಅದರ ಸಂಪೂರ್ಣ ವಿವರಗಳನ್ನು ಕೇಳಿದಾಗ, ಕೇಂದ್ರವು ಈಗ ತನ್ನ ಲಸಿಕೆ ನೀತಿಯನ್ನೇ ಬದಲಾಯಿಸಲು ನಿರ್ಧರಿಸಿತು.










