ಮೈಸೂರು : ಅನ್ನಭಾಗ್ಯ ಯೋಜನೆ ಅನುಷ್ಠಾನ ವಿಳಂಬ ವಿಚಾರ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮೈಸೂರಿನಲ್ಲಿ ಹೇಳಿಕೆ. ಒಂದು ತಿಂಗಳು, ಎರಡು ತಿಂಗಳು ತಡ ಆದ್ರೇ ಅಂತಹದೇನೂ ಆಗಲ್ಲ. ಉಚಿತ ಅಕ್ಕಿ ಯೋಜನೆಗೆ ಕೇಂದ್ರದಿಂದ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಣೆ ಹಿನ್ನೆಲೆ. ಇದಕ್ಕೆ ನಮಗೆ ಪರ್ಯಾಯ ಮಾರ್ಗಗಳು ಇವೆ. ಇದನ್ನು ಸರಿದೂಗಿಸುವ ಬೇರೆ ಬೇರೆ ಆಹಾರ ಪದಾರ್ಥಗಳು ಇರುವುದಾಗಿ ಆಹಾರ ಸಚಿವರು ಹೇಳಿದ್ದಾರೆ. ಅಕ್ಕಿ ಬದಲು ಬೇರೆ ಬೇರೆ ಆಹಾರ ಪದಾರ್ಥಗಳನ್ನೂ ಕೊಡಬಹುದು. ಏನು ಒಂದು ತಿಂಗಳು, ಎರಡು ತಿಂಗಳು ತಡ ಆದ್ರೇ ಅಂತಹದೇನೂ ಆಗಲ್ಲ. ಉಚಿತವಾಗಿ 5 ಕೆಜಿ ಅಕ್ಕಿ ಈಗಾಗಲೇ ಕೊಡ್ತಿದ್ದೇವೆ. ಲೇಟಾದ್ರೆ ಅಂತದೇನು ಸಮಸ್ಯೆ ಆಗಲ್ಲ. ಗ್ಯಾರಂಟಿ ಯೋಜನೆಗಳು ಹಂತ ಹಂತವಾಗಿ ಜಾರಿಯಾಗುತ್ತವೆ. ಈಗಾಗಲೇ ಉಚಿತ ವಿದ್ಯುತ್, ಶಕ್ತಿ ಯೋಜನೆಗಳು ಜಾರಿಗೆ ಬಂದಿವೆ, ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 15ರ ವರೆಗೆ ಸಮಯ ಇದೆ. ಇದುವರೆಗೆ ಮೂರು ಪ್ರಮುಖ ಗ್ಯಾರಂಟಿಗಳು ಜಾರಿಯಾಗಿವೆ, ಉಳಿದ ಯೋಜನೆ ಜಾರಿ ಬಗ್ಗೆ ಆತಂಕ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮೈಸೂರಿನಲ್ಲಿ ಹೇಳಿದ್ದಾರೆ.
ಮೈಸೂರು-ಬೆಂಗಳೂರು ಹೈವೇಯಲ್ಲಿ ನೂರಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ ಸಾವಿನ ಹೆದ್ಧಾರಿಯಾಗಿ ಮಾರ್ಪಟ್ಟಿರುವ ವಿಚಾರ.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಅಪಘಾತ ತಡೆಗಟ್ಟಲು ರಸ್ತೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಟೋಲ್ ಹೆಚ್ಚಳ ಕೂಡ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆಯೂ ಸಂಬಂಧಪಟ್ಟವರ ಜೊತೆ ಚರ್ಚಿಸಿ ಟೋಲ್ ದರ ಇಳಿಕೆಗೆ ಮನವಿ ಮಾಡಲಾಗುವುದು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ರು.