ಕನ್ನಡದ ಇತ್ತೀಚಿನ ದಿನಗಳಲ್ಲಿ ಸಿನಿ ರಸಿಕರಿಗೆ ಸಾಕಷ್ಟು ಅಭಿರುಚಿ ನೀಡುವವಂತಹ ಸಿನಿಮಾಗಳು ತೆರೆ ಮೇಲೆ ರೀಲಿಸ್ ಆಗುತ್ತಾ ಇದ್ದಾವೆ ಅದರ ಜತೆಗೆ ಸಖತ್ ಹೆಸರು ಕೂಡು ಮಾಡುತ್ತಾ ಇದ್ದೇವೆ ಕನ್ನಡದ ಸಿನಿಮಾ (Kannada movie) ಹೊಂದಿಸಿ ಬರೆಯರಿ ಸಿನಿಮಾ ಕನ್ನಡ ಸಿನಿ ರಸಿಕರು ಸಖತ್ ಖುಷಿ ಪಟ್ಟಿದ್ದರು ಈಗ ನೇ 25 ದಿನದ ಸಂಭ್ರಮದಲ್ಲಿದೆ. ಫೆಬ್ರವರಿ 10ರಂದು ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. (It was appreciated by the audience) ದಿನದಿಂದ ದಿನಕ್ಕೆ ಇನ್ನಷ್ಟು ಜನರನ್ನು ತಲುಪುತ್ತಿರುವ ಈ ಸಿನಿಮಾ ಹೌಸ್ ಫುಲ್ ಶೋಗಳೊಂದಿಗೆ (Cinema House Full Show) ಮುನ್ನುಗ್ಗುತ್ತಿದೆ. ಖುಷಿಯಲ್ಲಿ ಮಾತನಾಡುವ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್, “ಹೊಂದಿಸಿ ಬರೆಯಿರಿ’ (Hondisi bareyiri’) ಸಿನಿಮಾ ತಂಡದ ಬಾಂಧವ್ಯ ಮೂರು ವರ್ಷದ್ದು. ಇದೀಗ ಸಿನಿಮಾ ಬಿಡುಗಡೆಯಾಗಿ 25ದಿನ ಪೂರೈಸುತ್ತಿದೆ. ಫೆಬ್ರವರಿ 10ರಂದು ಸಿನಿಮಾ ಬಿಡುಗಡೆಯಾಗಿತ್ತು. ಆರಂಭದಲ್ಲಿ 70 ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ನಾಲ್ಕು ವಾರದಲ್ಲಿ 40 ಸಿನಿಮಾಗಳು ಬಿಡುಗಡೆಯಾಗಿವೆ. ಇಷ್ಟು ಸಿನಿಮಾಗಳಲ್ಲಿ ನಮ್ಮ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಎಲ್ಲಾ ಚಿತ್ರಮಂದಿರಕ್ಕೂ ಭೇಟಿ ಕೊಟ್ಟಿದ್ದೇವೆ. ಸಿನಿಮಾ ನೋಡಿ ಜನರು ಹೇಳುತ್ತಿದ್ದ ಪಾಸಿಟಿವ್ ಮಾತುಗಳು ಸಿನಿಮಾವನ್ನು ಮತ್ತಷ್ಟು ಪ್ರಮೋಟ್ ಮಾಡುವಂತೆ ಮಾಡಿತು. ಸಿನಿಮಾ 25 ದಿನಗಳನ್ನು ಪೂರೈಸುತ್ತಿರುವ ಈ ಸಮಯದಲ್ಲಿ ಕುಶಾಲ ನಗರ, ಕೆ.ಆರ್.ಪೇಟೆ, ಶಿವಮೊಗ್ಗ ಸೇರಿದಂತೆ ತಾಲೂಕು ಕೆಂದ್ರಗಳಿಗೂ ಸಿನಿಮಾವನ್ನು ತಲುಪಿಸುತ್ತಿದ್ದೇವೆ. ಚಿತ್ರಮಂದಿರದ ಸಂಖ್ಯೆಯನ್ನು ಹೆಚ್ಚು ಮಾಡುತ್ತಿದ್ದೇವೆ’ ಎಂದು ಮಾಹಿತಿ ಹಂಚಿಕೊಂಡರು. ನಟ ಪ್ರವೀಣ್ ತೇಜ್ ಮಾತನಾಡಿ, “25 ದಿನವನ್ನು ಸಂಭ್ರಮಿಸಲು ಪ್ರಮುಖ ಕಾರಣ ಮಾಧ್ಯಮ ಹಾಗೂ ಪತ್ರಿಕಾ ಮಿತ್ರರು. ನಿಮ್ಮ ಸಹಕಾರ ದೊಡ್ಡದು. ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ ಅವರು ಕೂಡ ಸಿನಿಮಾ ನೋಡಿ ಇಷ್ಟಪಟ್ಟರು. ಸಿನಿಮಾದಲ್ಲಿ ತೋರಿಸಲಾದ ಮಂತ್ರಮಾಂಗಲ್ಯದ ಬಗ್ಗೆ ಕೂಡ ಮಾತನಾಡಿದರು’ ಎಂದು ಪ್ರವೀಣ್ ತೇಜ್ ಸಿನಿಮಾ ಯಶಸ್ಸಿನ ಸಂತಸ ಹಂಚಿಕೊಂಡರು.
ನಟಿ ಭಾವನ ರಾವ್ ಮಾತನಾಡಿ, ಈ ಸಿನಿಮಾ ತುಂಬಾ ಪ್ರೀತಿಯಿಂದ ಮಾಡಿರುವ ಸಿನಿಮಾ. ಅಷ್ಟೇ ಪ್ರೀತಿಯನ್ನು ಜನರು ತೋರಿಸಿದ್ದಾರೆ. ನಾವೆಲ್ಲರು ಮೂರು ವರ್ಷದಿಂದ ಈ ಸಿನಿಮಾದ ಜೊತೆಯಾಗಿದ್ದೇವೆ’ ಎಂದರು. ಮತ್ತೂಬ್ಬ ನಾಯಕಿ ಐಶಾನಿ ಶೆಟ್ಟಿ ಮಾತನಾಡಿ, ನಿರ್ದೇಶಕ ಜಗನ್ನಾಥ್ ತುಂಬಾ ಶ್ರಮ ಹಾಕಿದ್ದಾರೆ. ಸಿನಿಮಾ ಬಿಡುಗಡೆಯಾದ ಮೇಲೂ ಅದನ್ನು ಜನರಿಗೆ ತಲುಪಿಸಲು ಅವರು ಸಖತ್ ಎಫರ್ಟ್ ಹಾಕಿದ್ದಾರೆ.
ಸಿನಿಮಾ ಬಗ್ಗೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಸಿನಿಮಾದ ಹಾಡು, ಸಂಭಾಷಣೆ, ಸಾಹಿತ್ಯ ಪ್ರತಿಯೊಂದರ ಬಗ್ಗೆ ಜನ ಮಾತನಾಡುತ್ತಿದ್ದಾರೆ. ನಿರ್ದೇಶಕರ ಮೊದಲ ಸಿನಿಮಾ ಎಂದು ಎನಿಸುವುದಿಲ್ಲ ಎಂದು ಪ್ರಶಂಸೆಯ ಮಾತುಗಳನ್ನಾಡುತ್ತಿದ್ದಾರೆ. ಇದೀಗ 25 ದಿನಗಳನ್ನು ಸಿನಿಮಾ ಪೂರೈಸುತ್ತಿದೆ ತುಂಬಾ ಖುಷಿಯಾಗುತ್ತಿದೆ ಎಂದರು. ಸಂಡೇ ಸಿನಿಮಾಸ್ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು “ಹೊಂದಿಸಿ ಬರೆಯಿರಿ’ ಸಿನಿಮಾ ನಿರ್ಮಾಣ ಮಾಡಿದ್ದು, ಜೋ ಕೋಸ್ಟ ಸಂಗೀತ ನಿರ್ದೇಶನ, ಶಾಂತಿ ಸಾಗರ್ ಛಾಯಾಗ್ರಹಣ ಚಿತ್ರಕ್ಕಿದೆ.