ಅಬಕಾರಿ ನೀತಿಯಲ್ಲಿನ ಅವ್ಯವಹಾರದ ತನಿಖೆ ನಡೆಸುತ್ತಿರುವ ಕೇಂದ್ರಿಯಾ ತನಿಖಾ ದಳ (CBI) ಅಕ್ಟೋಬರ್ 17ರಂದು ಬೆಳ್ಳಗ್ಗೆ 11 ಘಂಟೆಗೆ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾಗೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಸಿಬಿಐ ನನ್ನ ಮೇಲೆ ದಾಳಿ ಮಾಡಿ 14 ಘಂಟೆಗೂ ಹೆಚ್ಚು ಕಾಲ ಶೋಧ ಕಾರ್ಯಾಚರಣೆ ನಡೆಸಿತ್ತು. ನನ್ನಗೆ ಸಂಬಂಧಿಸಿ ಬ್ಯಾಂಕ್ ಲಾಕರ್ ಹಾಗೂ ನನ್ನ ಸ್ವಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದರೂ ಆದರು ಸಹ ಅವರಿಗೆ ಏನು ಸಿಕ್ಕಿಲ್ಲ.
ಈಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ ನಾನು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ ಸತ್ಯಮೇವ ಜಯತೇ ಎಂದು ಟ್ವೀಟ್ ಮಾಡಿದ್ದಾರೆ.
ಅಬಕಾರಿ ನೀತಿಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಂಡೋ ಸ್ಪರಿಟ್ಸ್ ಮಾಲೀಕರಾದ ಸಮೀರ್ ಮಹೇಂದ್ರು, ಬಡ್ಡಿ ರಿಟೇಲ್ ಪ್ರೈವೇಟ್ ಕಂಪನಿ ನಿರ್ದೇಶಕರಾದ ಅಮಿತ್ ಅರೋರಾ, ಇಂಡಿಯಾ ಅಹೆಡ್ ನ್ಯೂಸ್ ಎಂಡಿ ಮೂತಾ ಗೌತಮ್ರನ್ನು ಸಿಬಿಐ ಈಗಾಗಲೇ ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ.












