ರಾಷ್ಟ್ರೀಯ ಷೇರುಪೇಟೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ NSE ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣನ್ಗೆ ದೆಹಲಿ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಿದೆ.
ಚಿತ್ರಾ ಜಾಮೀನು ಅರ್ಜಿ ವಿಚಾರಣೆ ನಡಸಿದ ನ್ಯಾಯಮೂರ್ತಿ ಸುನೇನಾ ಶರ್ಮಾ ಚಿತ್ರಾ ಅವರ ಪ್ರಕರಣ NSE ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಮಾಲಯ ಮೂಲದ ಸಂತರೊಬ್ಬರ ಆದೇಶಗಳನ್ನು ಪಾಲಿಸುತ್ತಿದ್ದ ಚಿತ್ರಾ ಹಾಗೂ NSEಯ ಅಧಿಕಾರಿಗಳು ಖಾಸಗಿ ಕಂಪನಿಯೊಂದಕ್ಕೆ ಅತಿಸೂಕ್ಷ್ಮ ಮಾಹಿತಿಗಳನ್ನು ರವಾನಿಸುತ್ತಿದ್ದರು ಮತ್ತು 2009-17ರ ನಡುವೆ ಇತರೆ ಅಧಿಕಾರಿಗಳ ಫೋನ್ ಟ್ಯಾಪಿಂಗ್ ಮಾಡಿಸಿದ ಆರೋಪ ಎದುರಿಸುತ್ತಿದ್ದಾರೆ.
ಪ್ರಕರಣದ ವಿಚಾರನೆ ನಡೆಸುತ್ತಿರುವ ಸಿಬಿಐ ಮಾರ್ಚ್ 6ರಂದು ಚಿತ್ರಾರನ್ನು ಬಂಧಿಸಿತ್ತು. ಮೊದಲಿಗೆ NSEಯ ಮಾಜಿ ಸಿಇಒ ಆನಂದ್ ಸುಬ್ರಮಣಿಯನ್ರನ್ನು ಬಂಧಿಸಿತ್ತು.






