ಚೀನಾ ಪ್ರಜೆಗಳಿಗೆ ಅಕ್ರಮ ವೀಸಾ ಒದಗಿಸಿಕೊಟ್ಟ ಅರೋಪ ಎದುರಿಸುತ್ತಿರುವ ಸಂಸದ ಕಾರ್ತಿ ಚಿದಂಬರಂ ಸತತ ಮೂರನೇ ದಿನ ಸಿಬಿಐ ವಿಚಾರಣೆಗೆ ಹಾಜರಾಗಿದ್ದಾರೆ.
ವಿಚಾರಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ತಿ ತಮ್ಮ ಬಳಿಯಿದ್ದ ಗೌಪ್ಯ ಮಾಹಿತಿಯಿರುವ ದಾಖಲೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ ಈ ಕುರಿತು ಲೋಕಸಭೆ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದು ಉತ್ತರಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಮುಂದುವರೆದು, ಸಿಬಿಐ ನನ್ನ ಜೊತೆ ಟೆಸ್ಟ್ ಪಂದ್ಯವಾಡುತ್ತಿದೆ ಇದು ದ್ವೇಷ ರಾಜಕಾರಣದ ಪರಮಾವಧಿ ಎಂದು ವಿಚಾರಣೆ ವಿಳಂಬವಾಗುತ್ತಿರುವ ಕುರಿತು ಕಿಡಿಕಾರಿದ್ದಾರೆ.
ಘಟನೆ ಸಂಬಂದ ಸಿಬಿಐ ಇಲ್ಲಿಯಬರೆಗು 65 ಸಾವಿರಕ್ಕು ಹೆಚ್ಚು ಇಮೇಲ್ಗಳನ್ನು ರಿಟ್ರೈವ್ ಮಾಡಿದೆ.