ಇಂದು ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದೆ.ಈ ಪ್ರಕರಣದಲ್ಲಿ ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವಿಚಾರಣೆ ನಡೆಸಲಾಗಿದೆ.ಈ ವೇಳೆ ದೂರುದಾರ ಸ್ನೇಹಮಹಿ ಕೃಷ್ಣ ಪರ ಮಣಿಂದರ್ ಸಿಂಗ್ ವಾದ ಮಾಡಿದ್ದಾರೆ.ಲೋಕಾಯುಕ್ತ ತನಿಖೆಯ ಬದಲು ಸಿಬಿಐ ತನಿಖೆಗೆ ಮಾಡುವಂತೆ ಮನವಿ ಮಾಡಿದ್ದಾರೆ.ಈ ವೇಳೆ ಎರಡು ಕಡೆ ವಕೀಲರಿಗೆ ಹೈಕೋರ್ಟ್ ಸೂಚನೆ ಕೊಟ್ಟಿದ್ದು,ತನಿಖೆ ನಿಶಪಕ್ಷಪಾತವಾಗಿರವೇಕು, ಜನರಲ್ಲಿ ಅದು ವಿಶ್ವಾಸ ಮೂಡಬೇಕು.ಸಿಬಿಐ ತನಿಖೆ ಬೇಕಾ ಬೇಡ ಎಂಬ ಬಗ್ಗೆ ವಾದ ಸೀಮಿತಗೊಳಿಸಿ ಎಂದು ಹೇಳಿದ್ದಾರೆ.

ಇದೇ ವೇಳೆ ಲೋಕಾಯುಕ್ತ ತನಿಖೆಯ ವರದಿಯನ್ನ ಸಲ್ಲಿಕೆ ಮಾಡಬೇಕಿತ್ತು ಎಂದು ಕೋರ್ಟ್ ಹೇಳಿದ್ದು,ಯಾಕೆ ಇದುವರೆಗೆ ವರದಿ ಸಲ್ಲಿಕೆ ಮಾಡಿಲ್ಲ.ನಾಳೆಯ ಒಳಗೆ ಇಲ್ಲಿಯ ವರಗಿನ ತನಿಖಾ ವರದಿ ಸಲ್ಲಿಕೆ ಮಾಡಿ ಎಂದು ತನಿಖಾಧಿಕಾರಿಗಳಿಗೆ ಸೂಚಿಸಿದ್ದಾರೆ.ಈ ವೇಳೆ ಮಣಿಂದರ್ ಸಿಂಗ್ ವಾದ ಮಂಡನೆ ಮಾಡಿದ್ದು,ಮೂವರು ಸದಸ್ಯ ಕಮಿಟಿ ತನಿಖೆಯನ್ನ ವಹಿಸಿಕೊಂಡಿದೆ.ಈ ಮೂವರು ಸರ್ಕಾರದ ಮೂಲಕ ನೇಮಕ ಅಗ್ತಾರೆ.ಲೋಕಾಯುಕ್ತ ಪೊಲೀಸರು ನಿಯೋಜನೆ ಮೇಲೆ ಬಂದಿರುತ್ತಾರೆ.ಹಾಗಾಗಿ ಅವರು ಮಾಡುವ ತನಿಖೆ ಬದಲು ಸ್ವತಂತ್ರ ವಾಗಿ ತನಿಖೆ ಆಗಬೇಕು ಎಂದು ವಾದಿಸಿದ್ದಾರೆ.

ಇಲ್ಲಿ ಕೋಟಿ ಮೊತ್ತದ ಸೈಟ್ ಗಳನ್ನ ಅಕ್ರಮವಾಗಿ ಪಡೆದುಕೊಂಡಿದ್ದಾರೆ.ಸಿಎಂ ಅವರ ಪತ್ನಿ ಇದೀಗ ಅವುಗಳನ್ನ ವಾಪಸ್ ಮಾಡಿದ್ದಾರೆ.ಅದೇ ದಿನ ಸರ್ಕಾರ ಕೂಡ ಸೈಟ್ ಹಿಂಪಡೆಯಲು ಒಪ್ಪಿಗೆ ನೀಡಿದೆ.ರಾಜ್ಯ ಸರ್ಕಾರ ಈ ಕೇಸ್ ನ ಆರೋಪಿಗಳನ್ನ ರಕ್ಷಣೆ ಮಾಡಲು ಯತ್ನಿಸುತ್ತಿದೆ ಎಂದು ವಾದಿಸಿದ್ದಾರೆ.ಒಟ್ಟು 14 ಸೈಟ್ ಗಳನ್ನ ವಾಪಸ್ ಮಾಡಲಾಗಿದೆ.ಸ್ವಯಂ ಪ್ರೇರಿತವಾಗಿ ಮೂಡ ಪ್ರಕರಣ ತನಿಖೆ ಮಾಡುತ್ತಿದೆ.ನಗರಾಭಿವೃದ್ಧಿ ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಇ ಡಿ ಕೂಡ ಮೂಡ ಪ್ರಕರಣದ ತನಿಖೆ ನಡೆಸುತ್ತಿದೆ. ಈ ವೇಳೆ 14 ಸೈಟ್ ಹಂಚಿಕೆಗು ನಗರಾಭಿವೃದ್ಧಿ ಪ್ರಕರಣ ಕ್ಕು ಸಂಬಂಧ ಇದ್ಯಾ ಎಂದು ಜೆಜೆ ಪ್ರಶ್ನೆ ಮಾಡಿದ್ದಾರೆ.
145 ಫೈಲ್ಸ್ ಗಳನ್ನ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ತೆಗೆದುಕೊಳ್ಳಲು ಹೋಗಿದ್ದಾರೆ.ಈ ಬಗ್ಗೆ ಡಿ ವೈ ಎಸ್ ಪಿ ಪತ್ರ ಬರೆದಿದ್ದಾರೆ.145 ಫೈಲ್ ಗ ಳು ಏನಾಗಿದೆ ಎಂಬುದು ಗೊತ್ತಿಲ್ಲ.ಲೋಕಾಯುಕ್ತ ಕಚೇರಿ ಕೂಡ ಕಡತ ವಾಪಸ್ ಪಡೆಯುವ ಯತ್ನ ಮಾಡಿಲ್ಲ ಎಂದು ಉತ್ತರಿಸಿದ್ದಾರೆ.ಇದಕ್ಕೆಸಿ ಎಂ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದು,ಸಂಬಂಧ ಇಲ್ಲದ ವಿಷಯದ ಬಗ್ಗೆ ವಾದ ಮಾಡಲಾಗುತ್ತಿದೆ ಎಂದಿದ್ದಾರೆ.145 ಕಡತಗಳಲ್ಲಿ ಸಿ ಎಂ ಅವರ ಕಡತ ಕೂಡ ಇರಬಹುದು.ಆ 145 ಕಡತಗಳು ಯಾವುದು ಎಂದು ಡಿವೈಎಸ್ ಪಿ ಕೂಡ ಹೇಳಿಲ್ಲ.19-12-2024 ಇಂದ ಇಲ್ಲಿಯ ವರಗಿನ ತನಿಖೆಯ ವರದಿಯ ಸಲ್ಲಿಕೆ ಮಾಡಲು ಸೂಚನೆ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಇಂದಿನ ವಾದ ಪ್ರತಿವಾದ ಆಲಿಸಿದ ಪ್ರಕರಣದ ವಿಚಾರಣೆ ಜನವರಿ 23ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ. ಈ ವೇಳೆ ಅರ್ಜ ವಿಚಾರಣೆಯ ಮೊದಲ ದಿನವೇ ವರದಿ ಸಲ್ಲಿಕೆ ಮಾಡಲು ಕೋರ್ಟ್ ಸೂಚನೆ ನೀಡಿದೆ.