ನಾವು ನೋಡದಕ್ಕೆ ಚಂದ ಕಾಣಬೇಕು ಅಂದ್ರೆ ತ್ವಚೆಯ ಬಗ್ಗೆ ಅಷ್ಟೇ ಕಾಳಜಿ ವಹಿಸಬೇಕು.ಇದಲ್ಲದರ ಜೊತೆಗೆ ನಮ್ಮ ತುಟಿ ಕೂಡ ಕೆಂಪಾಗಿ ಇದ್ರೆ ಮುಖದ ಅಂದವನ್ನ ಹೆಚ್ಚಿಸುತ್ತದೆ.. ಆದ್ರೆ ಕೆಲವರ ತುಟಿಯ ಬಣ್ಣ ಕಂದಾಗಿರುತ್ತದೆ..ಹಾಗೂ ತುಟಿಯ ಸುತ್ತಲು ಕೂಡ ಕಪ್ಪಾಗಿರುತ್ತದೆ..ಈ ಕಂದು ಬಣ್ಣವನ್ನು ಮರೆಮಾಚುವುದಕ್ಕೆ ರೆಡ್ ಲಿಪಸ್ಟಿಕ್ ನ ಹಚ್ಚುತ್ತಾರೆ..ಹಾಗೂ ಕಲೆಗಳ ಶಮನ ಮಾಡುವುದಕ್ಕೆ ಒಂದಿಷ್ಟು ಮನೆಮದ್ದುಗಳನ್ನು ಬಳಸುತ್ತೇವೆ..ಆದ್ರೆ ಇದಕ್ಕೆ ಪ್ರಮುಖ ಕಾರಣ ಏನು ಎಂಬುವುದು ಹೆಚ್ಚು ಜನಕ್ಕೆ ತಿಳಿದಿಲ್ಲ..ಆ ಬಗ್ಗೆ ಇಲ್ಲಿದೆ ಡಿಟೇಲ್ಸ್
![](https://pratidhvani.com/wp-content/uploads/2025/02/IMG_3125.jpeg)
ಹೈಪರ್ ಪಿಗ್ಮೆಂಟೇಶನ್
ದೇಹದಲ್ಲಿ ಮೆಲನಿನ್ ಶೇಖರಣೆ ಹೆಚ್ಚಾದಾಗ.ತುಟಿಗಳು ಹಾಗೂ ಅದರ ಸುತ್ತಲಿನ ಚರ್ಮ ಡಾರ್ಕ್ ಆಗುತ್ತದೆ. ನಮ್ಮ ಲೈಫ್ ಸ್ಟೈಲ್,ಹಾಗೂ ಸೇವಿಸುವ ಕೆಲವು ಆಹಾರ ಇವೆಲ್ಲವೂ ಮೆಲನಿನ್ ಶೇಖರಣೆಯನ್ನು ಹೆಚ್ಚು ಮಾಡುತ್ತದೆ.ತುಟಿಗಳು ಹಾಗೂ ಅದರ ಸುತ್ತಲಿನ ಚರ್ಮ ಡಾರ್ಕ್ ಆಗುತ್ತದೆ.
ಸೂರ್ಯನ ಕಿರಣಗಳು
ಸೂರ್ಯನ ಬೆಳಕಿಗೆ ಅತಿಯಾಗಿ ಒಡ್ಡುವುದರಿಂದ ತುಟಿಗಳ ಸುತ್ತ ಕಪ್ಪು ಕಲೆಗಳು ಹೆಚ್ಚಾಗುತ್ತದೆ.ಅದ್ರಲ್ಲೂ ಕೆಲವರು ಹೆಚ್ಚು ಹೊತ್ತು ಬಿಸಿಲಲ್ಲಿ ಕೆಲಸ ಮಾಡ್ತಾರೆ.ಫೀಲ್ಡ್ ವರ್ಕ್ ಇಂದಾಗಿ ಕೂಡ ಕಪ್ಪು ಹೆಚ್ಚಾಗುತ್ತದೆ..
ಧೂಮಪಾನ
ಸ್ಮೋಕಿಂಗ್ ಮಾಡುವುದರಿಂದ ರಕ್ತದ ಹರಿವು ಮತ್ತು ಆಮ್ಲಜನಕೀಕರಣ ಕಡಿಮೆಯಾಗುತ್ತದೆ.ಇದರಿಂದ ತುಟಿಗಳ ಸುತ್ತ ಕಪ್ಪು ಕಲೆಗಳು ಮತ್ತು ಬಣ್ಣ ಮಾಸಿ ಹೋಗುತ್ತದೆ.
![](https://pratidhvani.com/wp-content/uploads/2025/02/IMG_3127.jpeg)
ವಿಟಮಿನ್ ಕೊರತೆ
ದೇಹದಲ್ಲಿ ವಿಟಮಿನ್ ಕೊರತೆಯಾದಾಗ,ಅದರಲ್ಲೂ ವಿಟಮಿನ್ ಬಿ12, ವಿಟಮಿನ್ ಸಿ, ಅಥವಾ ವಿಟಮಿನ್ ಇ ಕಪ್ಪು ಕಲೆಗಳನ್ನು ಉಂಟುಮಾಡಬಹುದು.
ಹಾರ್ಮೋನ್ ಬದಲಾವಣೆ
ಗರ್ಭಾವಸ್ಥೆಯಲ್ಲಿ, ಋತುಬಂಧ ಅಥವಾ ಪ್ರೌಢಾವಸ್ಥೆಯಲ್ಲಿ ಹಾರ್ಮೋನುಗಳ ಏರಿಳಿತಗಳು ಹೆಚ್ಚಿರುತ್ತದೆ ಹಾಗೂ ಇದರಿಂದ ಕಪ್ಪು ಕಲೆಗಳಿಗೆ ಆಗುತ್ತದೆ..