ಕನ್ನಡ ಚಿತ್ರರಂಗದಲ್ಲಿ (Kannada film industry) ಕೇಳಿ ಬಂದ ಕಾಸ್ಟಿಂಗ್ ಕೌಚ್(casting couch) ಆರೋಪಕ್ಕೆ ಸಂಬಂಧಪಟ್ಟಂತೆ, ಕರ್ನಾಟಕ ಫಿಲ್ಡ್ ಚೇಂಬರ್ (karnataka film chamber) ನಲ್ಲಿ ಇಂದು ಫಿಲ್ಡ್ ಚೇಂಬರ್ ಅಧ್ಯಕ್ಷ ಎನ್.ಎಮ್.ಸುರೇಶ್ (N M suresh) ಮತ್ತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
ಇಂದಿನ ಈ ಸಭೆಯಲ್ಲಿ ಹಿರಿಯ ನಟಿ ತಾರಾ, ಫೈರ್ (F.I.R.E) ನಿಯೋಗದ ಅಧ್ಯಕ್ಷರಾದ ಕವಿತಾ ಲಂಕೇಶ್ ಸೇರಿದಂತೆ ಹಲವು ನಟಿಯರು ಭಾಗಿಯಾಗಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಈ ಸಭೆಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಸಂಬಂಧಪಟ್ಟಂತೆ ಜೊತೆಗೆ ಹೆಣ್ಣು ಮಕ್ಕಳಿಗೆ ಆಗ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದ್ದು,ಹೇಮಾ ಕಮಿಟಿ ವರದಿಯಂತೇ ಕನ್ನಡ ಚಿತ್ರರಂಗದಲ್ಲೂ ಒಂದು ಸಮಿತಿ ರಚಿಸಲು ಫೈರ್ ಸಂಸ್ಥೆ ಆಗ್ರಹಿಸಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.