
ಮೂರು ಕೈಮಗ್ಗ ಕ್ಷೇತ್ರದಲ್ಲಿ ಐವರು ಸಾಧಕರಿಗೆ ಪ್ರಶಸ್ತಿ ರೇಷ್ಮೆ, ಹತ್ತಿ, ಉಣ್ಣೆ ಕೈಮಗ್ಗ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ.
ರೇಷ್ಮೆ ಕೈಮಗ್ಗ ಕ್ಷೇತ್ರ:

- ಅಮೃತವರ್ಷಿಣಿ ರೇಷ್ಮೆ ಸೀರೆ ಉತ್ಪನ್ನ ತಯಾರಿಸಿದ ಆರ್ ಮಂಜುನಾಥ್ ಗೆ ಮೊದಲ ಬಹುಮಾನ-೨೫ ಸಾವಿರ.
- ಅಪ್ಪಟ ರೇಷ್ಮೆಯ ಕುಟ್ಟು ಮೀನಾ ಸೀರೆ ತಯಾರಿದ ರಮೇಶ್ ಗೆ ದ್ವೀತಿಯ ಬಹುಮಾನ-20 ಸಾವಿರ.
ಹತ್ತಿ ಕೈಮಗ್ಗ ಕ್ಷೇತ್ರ:

- ಕೊಂಡಿ ಡಿಸೈನ್ ಕಾಟನ್ ಬೆಡ್ ಶೀಟ್, ಟೆಬಲ್ ಕ್ಲಾತ್ ಹ್ಯಾಂಡ್ ಕರ್ಚೀಫ್ ತಯಾರಕಿ ಹನುಮಂತಮ್ಮ ಬಾಣದ ಅವರಿಗೆ ಮೊದಲ ಬಹುಮಾನ-೨೦ ಸಾವಿರ.
- ಹತ್ತಿ ಶಾಲು ಉತ್ಪಾದನೆ ಮಾಡುವ ತುಕಾರಾಮ್ ಹನುಮಂತಪ್ಪ ವದ್ಧಿಗೆ ದ್ವಿತೀಯ ಬಹುಮಾನ-15 ಸಾವಿರ.
ಉಣ್ಣೆ ಕೈಮಗ್ಗ ಕ್ಷೇತ್ರ:

ಬಣ್ಣ ಬಣ್ಣದ ಉಣ್ಣೆ ಚೆಕ್ಸ್ ಕಂಬಳಿ ಉತ್ಪಾದಕ ತಿಪ್ಪೇಸ್ವಾಮಿಗೆ ಮೊದಲ ಬಹುಮಾನ-15 ಸಾವಿರ.
10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಆಚರಣೆ, ಕೈಮಗ್ಗ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಈಗಲೇ ಪರಿಹಾರ ಕಂಡುಕೊಳ್ಳಬೇಕು ಕೆಲವರು ನೇಕಾರಿಕೆಯಿಂದ ಹೊರಹೋಗ್ತಿದ್ದಾರೆ. ಕಾಲ ಕ್ರಮೇಣ ನೇಕಾರಿಕೆ ಕುಟುಂಬ ಕ್ಷೀಣಿಸುತ್ತಿದೆ ಹೀಗಾಗಿ ಸಮ್ಮ ಸರ್ಕಾರ ಇವರಿಗೆ ಪ್ರೋತ್ಸಾಹ ನೀಡುತ್ತಿದೆ.

80 ಕೋಟಿ ಅನುದಾನ ನೇಕಾರಿಕೆಗೆ ಕೊಡುತ್ತಿದ್ದೇವೆ. ನೇಕಾರ ಗೌರವಧನ 2 ರಿಂದ 5 ಸಾವಿರಕ್ಕೆ ಹೆಚ್ಚಿಸಿದ್ದೇವೆ, ನೇಕಾರರಿಗೆ ಸ್ಮಾರ್ಟ್ ಕಾರ್ಡ್ ನೀಡುತ್ತಿದ್ದೇವೆ, ನೇಕಾರರ ಮಕ್ಕಳ ಉನ್ನತ ಶಿಕ್ಷಣಕ್ಕೆ 23ಕೋಟಿ ನೀಡಲಾಗ್ತಿದೆ, ನೇಕಾರರಿಗೆ ಸಾಲವನ್ನ ನೀಡುವ ಕೆಲಸ ಆಗ್ತಿದೆ.
ಶೇ 1 ರಿಂದ 3 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದೇವೆ.

150 ಕೋಟಿ ಹಣ ಪವರ್ ಸಬ್ಸಿಡಿಯಾಗಿ ನೀಡುತ್ತಿದ್ದೇವೆ, ಅವರಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ, ಜವಳಿ ಘಟಕ ಸ್ಥಾಪಿಸಲು ಅನುದಾನ ನೀಡುತ್ತಿದ್ದೇವೆ, ಜವಳಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತಿದ್ದೇವೆ, ಜವಳಿ ಪಾರ್ಕ್ ಸ್ಥಾಪನೆ ಯೋಜನೆ ಹಾಕಿಕೊಂಡಿದ್ದೇವೆ