ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅಭಿನಯದ ʻಗುರುದೇವ್ ಹೊಯ್ಸಳʼ ಸಿನಿಮಾ, ನೆನ್ನೆಯಷ್ಟೇ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಪ್ರೇಕ್ಷಕರಿಂದ ʻಗುರುದೇವ್ ಹೊಯ್ಸಳʼ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರಮಂದಿರಗಳಲ್ಲಿ ಈ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ.

ʻಗುರುದೇವ್ ಹೊಯ್ಸಳʼ ಡಾಲಿ ಧನಂಜಯ್ ನಟನೆಯ 25ನೇ ಸಿನಿಮಾ ಆಗಿದ್ದು, ಈ ಚಿತ್ರದಲ್ಲಿ ಧನಂಜಯ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದಾರೆ. ʻಗುರುದೇವ್ ಹೊಯ್ಸಳʼ ಸಿನಿಮಾ ಬಾಕ್ಸ್‌ಆಪೀಸ್‌ನಲ್ಲಿ ಸಖತ್ ಕಲೆಕ್ಷನ್ ಮಾಡ್ತಿದ್ದು, ಕೆಆರ್‌ಜಿ ಸ್ಟೂಡಿಯೋಸ್‌ನ ಯೋಗಿ ರಾಜ್ ಹಾಗೂ ಕಾರ್ತಿಕ್ ಗೌಡ ಲಾಭ ಕಂಡಿದ್ದಾರೆ.

ಇದೇ ಖುಷಿಯಲ್ಲಿ ನಟ ಧನಂಜಯ್‌ಗೆ 1 ಕೋಟಿ ರೂಪಾಯಿ ಬೆಲೆ ಬಾಳುವ ಕಾರೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ಯೋಗಿ ಹಾಗೂ ಕಾರ್ತಿಕ್ ಜೊತೆ, ಕಾರಿನ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು, ಧನಂಜಯ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
