
ಒಟ್ಟಾವಾ: ನಾನು ನಿನ್ನನ್ನು ಒಂದು ಕ್ಷಣವೂ ನಂಬಲ್ಲ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರನ್ನು ಮುಖಾಮುಖಿ ಭೇಟಿಯಾದ ಅಲ್ಲಿನ ಪ್ರಜೆಯೊಬ್ಬ ನಿಂದಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಉಕ್ಕಿನ ಕಾರ್ಖಾನೆಗೆ ಭೇಟಿ ನೀಡಿದ ಟ್ರುಡೋ ಅಲ್ಲಿನ ಕೆಲಸಗಾರರ ಬಳಿ ಸಂವಾದ ನಡೆಸುತ್ತಿದ್ದ ಸಂದರ್ಭ ಅಲ್ಲಿದ್ದ ಅಪರಿಚಿತ ಕೆಲಸಗಾರನೊಬ್ಬ, ಹೆಚ್ಚಿನ ತೆರಿಗೆಗಳು, ವೈದ್ಯಕೀಯ ಬಿಲ್ ಹಾಗೂ ಇತರ ವಿಚಾರಗಳ ಬಗ್ಗೆ ಟೀಕಿಸಲು ಪ್ರಾರಂಭಿಸಿದ್ದಾನೆ. ಈ ವೇಳೆ ತಮ್ಮ ನೀತಿಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ ಟ್ರುಡೋ, ನಾವು ಈಗಷ್ಟೇ ತಂದಿರುವ 25% ಸುಂಕಗಳು ನಿಮಗೆ ಸಹಾಯ ಮಾಡಲಿವೆ, ಅದು ನಿಮ್ಮ ಕೆಲಸವನ್ನು ಉಳಿಸಿಕೊಳ್ಳುತ್ತದೆ ಎಂದಿದ್ದಾರೆ.
I don't believe to you for a second, I have a job, I pay all taxes but cannot survive because of your economic policies- Canadian PM Justin Trudeau shamed and slammed by a citizen pic.twitter.com/D0uNfaUrzh
— Megh Updates™ (@MeghUpdates) September 2, 2024
ಈ ವೇಳೆ ಮಾತನಾಡಿದ ಕಾರ್ಮಿಕ, ನಾನು 40% ತೆರಿಗೆ ಕಟ್ಟುತ್ತಿದ್ದೇನೆ.ಆದರೆ ನನ್ನ ಬಳಿ ವೈದ್ಯರಿಲ್ಲ ಎಂದು ಆರೋಪಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಟ್ರೂಡೊ ಕೆನಡಾದ ಸರ್ಕಾರದಿಂದ ಬಹು ಮಿಲಿಯನ್ ಡಾಲರ್ ಹೂಡಿಕೆಯನ್ನು ಮಾಡುತ್ತಿದೆ.ಇದು ಕಾರ್ಮಿಕರ ಉದ್ಯೋಗವನ್ನು ಮುಂದಿನ ಹಲವು ವರ್ಷಗಳವರೆಗೆ ಭದ್ರಪಡಿಸುತ್ತದೆ ಎಂದು ಹೇಳಿದ್ದಾರೆ.
ಈ ವೇಳೆ ವಾಗ್ದಾಳಿ ನಡೆಸಿದ ಪ್ರಜೆ, ನಾನು ನಿನ್ನನ್ನು ಒಂದು ಕ್ಷಣವೂ ನಂಬುವುದಿಲ್ಲ, ನನಗೆ ಉದ್ಯೋಗವಿದೆ, ನಾನು ಎಲ್ಲಾ ತೆರಿಗೆಗಳನ್ನು ಪಾವತಿಸುತ್ತೇನೆ. ಆದರೆ ನಿಮ್ಮ ಆರ್ಥಿಕ ನೀತಿಗಳಿಂದ ಇಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಟ್ರುಡೋ ಇರುಸುಮುರುಸುಗೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.