ಪಂಜಾಬ್ ಕಾಂಗ್ರೆಸ್ ಮುಖಂಡ ಹಾಗು ಗಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯಿ ಆಪ್ತ ಕೆನಡಾ ಮೂಲದ ಗ್ಯಾಂಗ್ ಸ್ಟಾರ್ ಗೋಲ್ಡಿ ಬ್ರಾರ್ ಹತ್ಯೆಯ ಹೊಣೆ ಹೊತ್ತಿಕೊಂಡಿದ್ದಾನೆ.
ಎರಡು ಕಾರಿನಲ್ಲಿ ಬಂದ ಎಂಟು ಜನರ ದುಷ್ಕರ್ಮಿಗಳ ತಂಡ ಎಕೆ-94 ರೈಫಲ್ನಲ್ಲಿ ಸಿಧು ಮೇಲೆ ಗುಂಡು ಹಾರಸಿ ಹತ್ಯೆಗೈದಿದ್ದಾರೆ.
ಏತನ್ಮಧ್ಯೆ ಗೋಲ್ಡಿ ಹಾಗು ಲಾರೆನ್ಸ್ ಜೊತೆ ಸಂಪರ್ಕ ಹೊಂದಿದ್ದ ಕೆಲವರನ್ನು ಮೂಸೇವಾಲಾ ಹತ್ಯೆ ಆರೋಪದ ಮೇಲೆ ಪೊಲೀಸರು ಬಟಿಂಡಾದಲ್ಲಿ ಬಂಧಿಸಿದ್ದಾರೆ.
ಗೋಲ್ಡಿ ಜೊತೆ ಸಂಪರ್ಕ ಹೊಂದಿದ್ದ ಹಲವರನ್ನು ಈ ಹಿಂದೆ ಪಂಜಾಬ್ ಪೊಲೀಸರು ಜೈಲಿಗಟ್ಟಿದ್ದರು.
ಶುಕ್ರವಾರವಷ್ಟೇ 424 ಮಂದಿಗೆ ನೀಡಿದ್ದ ಪೊಲೀಸ್ ಭದ್ರತೆಯನ್ನ ಪಂಜಾಬ್ ಸರ್ಕಾರ ಹಿಂಪಡೆದ ಮಾರನೇ ದಿನವೇ ಈ ಘಟನೆ ನಡೆದಿದೆ.