ಕೆನಡಾ ಮತ್ತು ಭಾರತದ (Canada & India) ನಡುವಿನ ದ್ವಿಪಕ್ಷೀಯ ಸಂಬಂಧ ದಿನದಿಂದ ದಿನಕ್ಕೆ ಇನ್ನಷ್ಟು ಹದಗೆಡುತ್ತಿದ್ದು, ಈ ಮಧ್ಯೆ ಈಗರೆಗೂ ಭಾರತದ ವಿರುದ್ಧ ಇಲ್ಲ ಸಲ್ಲದ ನಿರಾಧಾರ ಆರೋಪಗಳನ್ನು ಮಾಡುತ್ತ ಬಂದಿದ್ದ ಕೆನಡಾ, ಈಗ ಮತ್ತೊಂದು ಉದ್ಧಟತನ ಮೆರೆಯುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿದೆ.

ಈ ಬಾರಿ ಭಾರತದ ವಿರುದ್ಧ ಕೆನಡಾ ಮತ್ತೆ ಕಿರಿಕ್ ತೆಗೆದಿದೆ. ಇದೇ ಮೊದಲ ಬಾರಿಗೆ ಭಾರತವನ್ನು ಸೈಬರ್ ಅಪರಾಧ (Cyber crime) ಪಟ್ಟಿಗೆ ಸೇರಿಸುವ ಮೂಲಕ ಕೆನಡಾ ಉದ್ದಟತನ ಮೆರೆದಿದೆ. ತನ್ನ ವಿರುದ್ಧ ಭಾರತ ಸರ್ಕಾರ ಪ್ರಾಯೋಜಿತ ಬೇಹುಗಾರಿಕೆ ನಡೆಸಬಹುದು ಅಂತ ಗಂಭೀರ ಆರೋಪ ಮಾಡಿದೆ.
ಸದ್ಯ ಈಗಾಗಲೇ ಉಭಯ ದೇಶಗಳ ನಡುವೆ ಬಾಂಧವ್ಯ ಹಳಸಿರುವುದರ ನಡುವೆ ಕೆನಡಾ ರಾಷ್ಟ್ರೀಯ ಸೈಬರ್ ಬೆದರಿಕೆ ಮೌಲ್ಯಮಾಪನ 2025-26ರನ್ನ ಬಿಡುಗಡೆ ಮಾಡಿದೆ, ಚೀನಾ, ರಷ್ಯಾ, ಇರಾನ್ ಹಾಗೂ ಉತ್ತರ ಕೊರಿಯಾವನ್ನೂ ಕೂಡ ಪಟ್ಟಿಗೆ ಸೇರಿಸಿದೆ.












