ಇಂಧನ ಸಚಿವ ಕೆ.ಜೆ ಜಾರ್ಜ್ ಪುತ್ರ ರಾಣಾ ಜಾರ್ಜ್ ಅವರನ್ನು ಪ್ರಚಾರ ಸಮಿತಿ ಸಂಯೋಜಕರಾಗಿ (Co-ordinator) ಆಗಿ ನೇಮಕ ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆದೇಶ ಹೊರಡಿಸಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿಕೊಂಡಿರುವ ರಾಣಾ ಜಾರ್ಜ್, ಬೂತ್ ಮಟ್ಟದ ಕಾರ್ಯಕರ್ತರ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಸರ್ವಜ್ಞ ನಗರದಲ್ಲಿ ಭಾರೀ ಖ್ಯಾತಿ ಗಳಿಸಿರುವ ರಾಣಾ ಜಾರ್ಜ್ ಅವರನ್ನು ಗುರುತಿಸುವ ಕೆಲಸ ಮಾಡಿದೆ ಕಾಂಗ್ರೆಸ್.
ರಾಣಾ ಜಾರ್ಜ್ ನೇಮಕ ಮಾಡಿರುವ ಕಾಂಗ್ರೆಸ್ ಪಕ್ಷವನ್ನು ರಾಣಾ ಜಾರ್ಜ್ ಬೆಂಬಲಿಗರು ಸ್ವಾಗತ ಮಾಡಿದ್ದು, ನಿಮ್ಮ ನಾಯಕತ್ವದಲ್ಲಿ ಸಾಕಷ್ಟು ಕೆಲಸ ಮಾಡೋಣ ಎಂದು ಆಶಯ ವ್ಯಕ್ತಪಡಿಸಿದ್ದಾರೆ.