ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ನಿರ್ಣಾಯಕ ಪೋಷಕಾಂಶಗಳಾಗಿದ್ದು,ತಾಯಿ ಮತ್ತು ಮಗುವಿನ ಬೆಳವಣಿಗೆ ಮತ್ತು ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಹಾಗಾಗಿ ವೈದ್ಯರು ಗರ್ಭವಸ್ಥೆಯಲ್ಲಿ ತಾಯಂದಿರಿಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಟ್ಯಾಬ್ಲೆಟ್ ಗಳನ್ನು ನೀಡುತ್ತಾರೆ.
ಕ್ಯಾಲ್ಸಿಯಂ ಇರುವಂತಹ ಡೈರಿ ಉತ್ಪನ್ನಗಳು, ಹಸಿರು ಸೊಪ್ಪು, ಹಾಲು ಸೇವಿಸಲು ಹೇಳುತ್ತಾರೆ ಮತ್ತು ಹಾಗೂ ವಿಟಮಿನ್ ಅಂಶ ಇರುವಂತಹ ಪದಾರ್ಥಗಳನ್ನ ಸೇವಿಸಲು ಕೂಡ ಸಜೆಸ್ಟ್ ಮಾಡುತ್ತಾರೆ. ಇನ್ನು ಗರ್ಭವಸ್ಥೆಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಯಾಕೆ ಮುಖ್ಯ.
ಕ್ಯಾಲ್ಸಿಯಂ
ಮಗುವಿನ ಮೂಳೆಯ ಬೆಳವಣಿಗೆಗೆ
ಕ್ಯಾಲ್ಸಿಯಂ ಮಾತ್ರೆಗಳು ಮತ್ತು ಕ್ಯಾಲ್ಸಿಯಂ ಇರುವಂತಹ ಆಹಾರವನ್ನ ಸೇವಿಸುವುದರಿಂದ ಮಗುವಿನ ಮೂಳೆಯ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ , ಸ್ನಾಯು ಹಾಗೂ ಹಲ್ಲುಗಳಿಗೂ ಕೂಡ ಉತ್ತಮ.
ಆಸ್ಟಿಯೊಪೊರೋಸಿಸ್ ತಡೆಗಟ್ಟುತ್ತದೆ
ಗರ್ಭಾವಸ್ಥೆಯಲ್ಲಿ ಹೆಚ್ಚು ಜನ ಹೆಣ್ಣು ಮಕ್ಕಳಿಗೆ ಕಾಲು ನೋವು ಮತ್ತು ಬೆನ್ನು ನೋವಿನ ಸಮಸ್ಯೆ ಎದುರಾಗುತ್ತದೆ ಇದಕ್ಕೆ ಪ್ರಮುಖ ಕಾರಣ ಕ್ಯಾಲ್ಸಿಯಂ ಕೊರತೆ ,ಕ್ಯಾಲ್ಸಿಯಂ ತಾಯಿಯ ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಹಾಗೂ ನಂತರದ ಜೀವನದಲ್ಲಿ ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.
ನರ ಮತ್ತು ಸ್ನಾಯುಗಳ ಕಾರ್ಯವನ್ನು ಬೆಂಬಲಿಸುತ್ತದೆ
ಮಕ್ಕಳಿಗೆ ಮಾತ್ರವಲ್ಲದೆ ತಾಯಿಯಲ್ಲೂ ಕೂಡ ಕೆಲವೊಂದು ಸಮಸ್ಯೆಗಳು ಎದುರಾಗುತ್ತದೆ ಅದರಲ್ಲೂ ನರ ಮತ್ತು ಸ್ನಾಯುಗಳ ಕಾರ್ಯವನ್ನು ಬೆಂಬಲಿಸುತ್ತದೆ. ಹಾಗೂ ತಾಯಿಯ ಓವರ್ ಆಲ್ ಹೆಲ್ತ್ ಅನ್ನ ಕಾಪಾಡುತ್ತದೆ.
ವಿಟಮಿನ್
ಇಮಿನಿಟಿ ಸಿಸ್ಟಮ್
ಗರ್ಭಾವಸ್ಥೆಯಲ್ಲಿ ದೇಹಕ್ಕೆ ಅಗತ್ಯವಿರುವಷ್ಟು ವಿಟಮಿನ್ ಸಿಕ್ಕಾಗ ಮಗುವಿನ ಹಾಗೂ ತಾಯಿಯ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಇಬ್ಬರಿಗು ಇಮ್ಯೂನಿಟಿ ಪವರ್ ಅನ್ನು ಬೂಸ್ಟ್ ಮಾಡುತ್ತದೆ.
ರಿಸ್ಕ್ ಕಡಿಮೆ ಮಾಡುತ್ತದೆ
ವಿಟಮಿನ್ ಡಿ ದೇಹದಲ್ಲಿ ಕಡಿಮೆಯಾದಾಗ ಪ್ರಿಕ್ಲಾಂಪ್ಸಿಯಾ ಮತ್ತು ಮಧುಮೇಹದಂತಹ ಹಾಗೂ ಗರ್ಭಧಾರಣೆಯ ರಿಸ್ಕ್ ಹೆಚ್ಚಿಸುತ್ತದೆ. ಈ ಕಾಂಪ್ಲಿಕೇಷನ್ಸ್ ನಿಂದ ಹೊರಬರಲು ವಿಟಮಿನ್ ಪದಾರ್ಥಗಳನ್ನು ಸೇವಿಸುವುದು ಉತ್ತಮ.