Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

CAA ವಿರುದ್ಧದ ಹೋರಾಟ ಹತ್ತಿಕ್ಕಲು ಮುಂದಾಗಿ ಬೆತ್ತಲಾಗುತ್ತಿರುವ BJP ನಾಯಕತ್ವ

CAA ವಿರುದ್ಧದ ಹೋರಾಟ ಹತ್ತಿಕ್ಕಲು ಮುಂದಾಗಿ ಬೆತ್ತಲಾಗುತ್ತಿರುವ BJP ನಾಯಕತ್ವ
CAA ವಿರುದ್ಧದ ಹೋರಾಟ ಹತ್ತಿಕ್ಕಲು ಮುಂದಾಗಿ ಬೆತ್ತಲಾಗುತ್ತಿರುವ BJP ನಾಯಕತ್ವ

December 30, 2019
Share on FacebookShare on Twitter

ಪೌರತ್ವ ಕಾಯ್ದೆ ವಿರುದ್ಧದ (ಸಿಎಎ) ಹೋರಾಟ ವ್ಯಾಪಕವಾಗುತ್ತಿರುವ ನಡುವೆಯೇ ಅದರಲ್ಲಿ ಭಾಗವಹಿಸುತ್ತಿರುವವರ ಧ್ವನಿಗಳಿಗೆ ನಿರ್ಬಂಧ ಹೇರುವ ಪ್ರಯತ್ನ ಮಾಡುವ ದುಸ್ಸಾಹಸಕ್ಕೆ ಕೈಹಾಕುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ‌ ಹಾಗೂ ಬಿಜೆಪಿ ಆಡಳಿತದ ಸರ್ಕಾರಗಳು ಅಪಖ್ಯಾತಿಗೆ ಗುರಿಯಾಗಿದ್ದು, ಹೋರಾಟ ಮತ್ತಷ್ಟು ತೀವ್ರಗೊಳ್ಳುವಂತೆ ಮಾಡಿವೆ. ಈ ಮೂಲಕ ವಿರೋಧ ಪಕ್ಷಗಳು ಹಾಗೂ ಬುದ್ದಿಜೀವಿಗಳ “ಸರ್ವಾಧಿಕಾರಿ” ಸರ್ಕಾರ ಎನ್ನುವ ಆರೋಪಕ್ಕೆ ಬಿಜೆಪಿ ನಾಯಕರು ಅಧಿಕೃತತೆ ತಂದುಕೊಡುತ್ತಿದ್ದಾರೆ.

ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶ-ವಿದೇಶಗಳ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು, ರಾಜಕೀಯ ನಾಯಕರು, ವಿಷಯ ತಜ್ಞರು ವಿರೋಧ ವ್ಯಕ್ತಪಡಿಸುವ ಮೂಲಕ ಕೇಂದ್ರ ಸರ್ಕಾರದ ವರ್ಚಸ್ಸಿಗೆ ತೀವ್ರತರವಾದ ಧಕ್ಕೆ ಉಂಟುಮಾಡಿರುವುದು ಸುಳ್ಳಲ್ಲ. ಇಸ್ಲಾಮಿಕ್ ಹಾಗೂ ಇಸ್ಲಾಮಿಕೇತರ ರಾಷ್ಟ್ರಗಳು ಮೋದಿ ಸರ್ಕಾರದ ವಿಭಜನಕಾರಿ ನೀತಿಯ ವಿರುದ್ಧ ಉಗ್ರವಾಗಿ ಮಾತನಾಡಲಾರಂಭಿಸಿವೆ. ಕಾಶ್ಮೀರಕ್ಕೆ‌ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ 370ನೇ ವಿಧಿ ಹಾಗೂ ಸಿಎಎಯ ಮೂಲಕ ಮುಸ್ಲಿಮ್ ಸಮುದಾಯಗಳನ್ನು ಮೋದಿ ಸರ್ಕಾರ ಗುರಿಯಾಗಿಸಿಕೊಂಡಿದೆ ಎಂಬ ಜಾಗತಿಕವಾಗಿ ಹರಳುಗಟ್ಟುತ್ತಿರುವ ಆರೋಪದ ಬಗ್ಗೆ ಚರ್ಚಿಸಲು ಇಸ್ಲಾಮಿಕ್ ಸಹಕಾರ ಒಕ್ಕೂಟ (ಐಒಸಿ) ರಾಷ್ಟ್ರಗಳ ವಿದೇಶಾಂಗ ಸಚಿವರು ಸಭೆ ನಡೆಸಲು ಮುಂದಾಗಿದ್ದಾರೆ. ಇಲ್ಲಿಂದ ರವಾನೆಯಾಗುವ ಸಂದೇಶವು ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಹಾಗೂ ಅಂತಾರಾಷ್ಟ್ರೀಯ ವ್ಯವಹಾರಕ್ಕೆ ಗಂಭೀರವಾದ ಸವಾಲುಗಳನ್ನು ಒಡ್ಡುವ ಸಾಧ್ಯತೆ ಇದೆ. ಪೆಟ್ರೋಲಿಯಂ ಉತ್ಪನ್ನಗಳಿಗೆ ಭಾರತ ಅವಲಂಬಿಸಿರುವುದು ಇದೇ ಐಒಸಿ ನೇತೃತ್ವ ವಹಿಸಿರುವ ಸೌದಿ ಅರೇಬಿಯಾವನ್ನು ಎಂಬುದು ಗಮನಾರ್ಹ ಅಂಶ.

Modi government nationally is collecting unprecedented levels of intelligence of the youth of universities, lawyers, journalists & adult protestors who hit the streets from Dec 13. Their hope: can scare them, their families, their institutions, to tide over the people’s tide.

— Vinod K. Jose (@vinodjose) December 29, 2019


‌ಸ್ಥಳೀಯವಾಗಿ ಸಿಎಎ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ಬಿಜೆಪಿ ಹಾಗೂ ಕೇಂದ್ರ ಸರ್ಕಾರವು ಪೊಲೀಸರ ದೌರ್ಜನ್ಯವನ್ನು ಸಮರ್ಥಿಸಲು ಮುಂದಾಗಿದ್ದು ಮೊದಲ ಕೆಟ್ಟ ನಡೆ.‌ ಆನಂತರ ಈ ಬೃಹತ್ ಚಳವಳಿಯನ್ನು ಸರ್ಕಾರ ನಿಭಾಯಿಸಲು ಅನುಸರಿಸಿದ ಕ್ರಮ ಹಾಗೂ ಕೈಗೊಂಡಿರುವ ನಿರ್ಧಾರಗಳು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದ್ದು, ಗಂಭೀರ ಪ್ರಶ್ನೆ ಹೇಳುವಂತೆ ಮಾಡಿದೆ.

The Editors Guild of India has issued a statement pic.twitter.com/dFrGYuTYJq

— Editors Guild of India (@IndEditorsGuild) December 28, 2019


ಪೊಲೀಸರು ಕರ್ನಾಟಕ ಹಾಗೂ ಉತ್ತರ ಪ್ರದೇಶದ ವಿವಿಧೆಡೆ ಪ್ರತಿಭಟನಾಕಾರರು, ಮುಸ್ಲಿಂ ಸಮುದಾಯದವರು ಹಾಗೂ ರಾಜಕೀಯ ನಾಯಕರ ಜೊತೆ ನಡೆದುಕೊಂಡಿರುವ ರೀತಿ ಅಸಮರ್ಥನೀಯ. ಯುವ ನಾಯಕ ಅಸ್ಸಾಂನ ರೈತ ಮುಖಂಡ ಅಖಿಲ್ ಗೊಗೊಯ್ ಅವರನ್ನು ಅತ್ಯಂತ ಕ್ರೂರವಾದ ಯುಎಪಿಎ ಕಾನೂನಿನಡಿ ರಾಷ್ಟ್ರೀಯ ಭದ್ರತಾ ದಳ (ಎನ್ ಎಸ್ಎ) ಬಂಧಿಸಿದ್ದು, ಭೀಮ್ ಆರ್ಮಿ ಮುಖಂಡ ಚಂದ್ರಶೇಖರ್ ಆಜಾದ್ ಅವರು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಸಾವಿರಾರು ಅಮಾಯಕರ ವಿರುದ್ಧ ದಮನಕಾರಿ ಕಾನೂನಿನಡಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಹಲವರನ್ನು ಜೈಲಿಗಟ್ಟಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಯುವ ಮುಖಂಡ ಕನ್ಹಯ್ಯಾ ಕುಮಾರ್ “ಮೋದಿ-ಶಾ ಅವರೇ ನಿಮ್ಮ ಜೈಲುಗಳಲ್ಲಿ ಅದೆಷ್ಟೂ ಜಾಗವಿದೆ ಎಂಬುದನ್ನು ನಾವು ನೋಡಿಯೇ ಬಿಡುತ್ತೇವೆ” ಎಂದು ಸವಾಲು ಎಸೆದಿರುವುದು ಗಮನಾರ್ಹ.

Police have detained 5 of us at the community hall outside J5 Shastri Nagar station for puting Kolam art against CAA pic.twitter.com/shhLDhmYqB

— Gayatri Khandhadai (@gayatrikl) December 29, 2019


ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ‌ ಇರುವಾಗ ಬಿಜೆಪಿಯ ಚಿಕ್ಕಮಗಳೂರು ಸಂಸದೆ ಹಾಗೂ ಮಂಗಳೂರಿಗೆ ಸಂಬಂಧಪಡದ ಶೋಭಾ ಕರಂದ್ಲಾಜೆಗೆ ಸುದ್ದಿಗೋಷ್ಠಿ ನಡೆಸಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಶ್ಯಾಡೊ‌ ಸಿಎಂ’ ಎನ್ನಲಾಗುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ಮಂಗಳೂರಿಗೆ ಭೇಟಿ ನೀಡಲು ಅವಕಾಶ ನೀಡಿರಲಿಲ್ಲ! ಇದೇ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು “ಗುಂಡು ಹಾರಿಸಿದರೂ ಯಾವುದೇ ಪ್ರತಿಭಟನಾಕಾರ ಸಾಯಲಿಲ್ಲವಲ್ಲ” ಎಂಬ ಸಹೋದ್ಯೋಗಿಯೊಂದಿಗಿನ ಸಂಭಾಷಣೆಯನ್ನೊಳಗೊಂಡ ವಿಡಿಯೋ ದೇಶಾದ್ಯಂತ ಚರ್ಚೆ ಹುಟ್ಟುಹಾಕಿತ್ತಲ್ಲದೇ ಪೊಲೀಸರ ಮೃಗೀಯ ಮನೋಭಾವದ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಬೆಂಗಳೂರು ಸೇರಿದಂತೆ ಹಲವು ಕಡೆ ಅನಾವಶ್ಯಕವಾಗಿ ನಿಷೇಧಾಜ್ಞೆ ಜಾರಿಗೊಳಿಸಿದ್ದೂ ಬಿಜೆಪಿ‌ ಸರ್ಕಾರದ ವರ್ಚಸ್ಸಿಗೆ ಮಸಿ‌ ಬಳಿದಿದೆ.

The way the Government has dealt with just the protests tell you so much about how they will deal with the implementation of NRC. Be wary. Very wary.

— Anubhav Sinha (@anubhavsinha) December 29, 2019


ಉತ್ತರ ಪ್ರದೇಶದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು ಹೊರಟಿದ್ದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ವಾಪಸ್ ಕಳುಹಿಸಿದ್ದರು. ಮೂರು ದಿನಗಳ ಹಿಂದೆ ನಿವೃತ್ತ ಐಪಿಎಸ್ ಅಧಿಕಾರಿ ಕುಟುಂಬ ಭೇಟಿ ಮಾಡಲು ತೆರಳಿದ್ದ ಪ್ರಿಯಾಂಕಾ ಅವರ ಮೇಲೆ‌ ಉತ್ತರ ಪ್ರದೇಶದ ಪೊಲೀಸರು ದೈಹಿಕ ಹಲ್ಲೆ ನಡೆಸಿದ ವಿಡಿಯೊಗಳು ಜಾಲತಾಣದಲ್ಲಿ ವೈರಲ್ ಆಗಿವೆ. ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಅಲಿಘಡ ವಿಶ್ವವಿದ್ಯಾಲಯ‌ ಹಾಗೂ ಉತ್ತರ ಪ್ರದೇಶದ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಪೊಲೀಸರ ದರ್ಪ, ಕ್ರೌರ್ಯ ಹಾಗೂ ಅಮಾನವೀಯತೆಯನ್ನು ಹಲವು ವಿಡಿಯೋಗಳು ಬಹಿರಂಗಪಡಿಸಿವೆ. ಮುಸ್ಲಿಂ ಸಮುದಾಯದವರನ್ನು “ಪಾಕಿಸ್ತಾನಕ್ಕೆ ಹೊರಡಿ” ಎಂದು ಪೊಲೀಸರೇ ಫರ್ಮಾನು ಹೊರಡಿಸುವುದು ಆರಕ್ಷಕರ ಘನತೆ ಹೆಚ್ಚಿಸುವ ನಡೆಯಲ್ಲ. ಪ್ರಜಾಪ್ರಭುತ್ವದ ಎರಡನೇ ಅಂಗವಾದ ಕಾರ್ಯಾಂಗದ ವ್ಯಾಪ್ತಿಗೆ ಬರುವ ಪೊಲೀಸರು ದೇಶದ ನಿವಾಸಿಗಳನ್ನು ಧರ್ಮದ ಆಧಾರದಲ್ಲಿ ವಿಂಗಡಿಸಿ, ಮತ್ತೊಂದು ದೇಶಕ್ಕೆ ತೆರಳುವಂತೆ ಸೂಚಿಸುವುದು ದುರಾಚಾರವಲ್ಲವೇ? ಸರ್ಕಾರಗಳು ಬದಲಾಗುತ್ತವೆ. ಪೊಲೀಸರು ತಮ್ಮ ಕರ್ತವ್ಯ ನಿಷ್ಠೆ ರೂಢಿಸಿಕೊಳ್ಳಬೇಕೆ ವಿನಾ ಅಧಿಕಾರಸ್ಥರನ್ನು ಮೆಚ್ಚಿಸಲು ಮುಂದಾಗಬಾರದು. ಇದು ವ್ಯವಸ್ಥೆಯನ್ನು ಕಲುಷಿತಗೊಳಿಸುವ ಯತ್ನವಾಗುತ್ತದೆ ಎಂಬುದನ್ನು ಪೊಲೀಸರು ಅರ್ಥಮಾಡಿಕೊಳ್ಳಬೇಕು.

As #CAAProtests spread across #India, police respond with an iron fist, brutally beating unarmed protestors. They're thrashing journalists, ordering TV channels to stop airing protest footage, shutting down the internet. Here's what they don't want you to see. #PoliceBrutality pic.twitter.com/Ji6n70fEpj

— Pieter Friedrich (@FriedrichPieter) December 28, 2019


This one is my favourite, reads …
.
.
.

“PUBLIC SERVANTS,
We the People,
Divest you of your IMAGINED right to diminish and dehumanise us or our brothers. You have grossly overstepped. “
.
.
Thanks #TanujaDabir. Couldn’t have worded this better. https://t.co/xHsRcBqGpP pic.twitter.com/ucytWRJbTC

— TheRichaChadha (@RichaChadha) December 28, 2019


ತಮಿಳುನಾಡಿನಲ್ಲಿ ಸಿಎಎ ಹಾಗೂ ಎನ್ ಆರ್ ಸಿ ವಿರೋಧಿ ರಸ್ತೆಯಲ್ಲಿ ರಂಗೋಲಿ ಹಾಕಿದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಸಿಎಎ ವಿರೋಧಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲಿನ ಪೊಲೀಸರ ದರ್ಪವನ್ನು ಟೀಕಿಸಿದ ಬಾಲಿವುಡ್ ಹಾಗೂ ಇತರ ಭಾಷೆಗಳ ಸಿನಿಮಾ ನಟ-ನಟಿಯರ ಚಿತ್ರಗಳನ್ನು ವೀಕ್ಷಿಸಿದಂತೆ ಬಿಜೆಪಿಯ ನಾಯಕರು ಬಹಿರಂಗವಾಗಿ ಹೇಳುತ್ತಿದ್ದಾರೆ. ಮೋದಿ ಸರ್ಕಾರದ ನಿರ್ಧಾರವನ್ನು ಅತ್ಯುಗ್ರವಾಗಿ ಖಂಡಿಸುತ್ತಿರುವ ಬಾಲಿವುಡ್ ನ ಪ್ರತಿಭಾವಂತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಸಿನಿಮಾ ವ್ಯವಹಾರದಲ್ಲಿ ಅಕ್ರಮ ಪತ್ತೆ ಹಚ್ಚಲು ತನಿಖೆಗೆ ಆಗ್ರಹಿಸಿ ಬಿಜೆಪಿ‌ ನಾಯಕನೊಬ್ಬ ಪ್ರಕರಣ ದಾಖಲಿಸಿದ್ದಾರೆ.

If these accounts are true… How is #UPpolice sleeping at night?! U don’t have children?! From the top most officials to the ones wielding the lathis.. u have blood on ur hands! #PoliceBrutality #UPPolice https://t.co/rDWbwXTsRT

— Kanika Dhillon (@KanikaDhillon) December 27, 2019


ಸಿಎಎ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜರ್ಮನಿ ವಿದ್ಯಾರ್ಥಿ ಜಾಕಬ್ ಲೆಂಡೆಂತಾಲ್ ಹಾಗೂ ನಾರ್ವೆ ದೇಶದ ಪ್ರವಾಸಿಗರನ್ನು ತಕ್ಷಣ ದೇಶ ತೊರೆಯುವಂತೆ ಸೂಚಿಸುವ ಮೂಲಕ ಮೋದಿ‌ ಸರ್ಕಾರವು ತನ್ನ ಅಸಹನೆಯನ್ನು ಪ್ರಚುರಪಡಿಸಿದೆ.

“We are concerned that India’s new Citizenship Amendment Act is fundamentally discriminatory in nature & hope the Supreme Court of #India will consider carefully the compatibility of the law with India’s int'l human rights obligations.”-@UNHumanRights
▶️https://t.co/hJgzNauOjY pic.twitter.com/840c2ofgI1

— UN Geneva (@UNGeneva) December 26, 2019


Wow..Waiting for tomorrow morning's pictures now. #ResistanceArt #Tamilnadu #Resistance #NoToNPR #NoToCAA

Btw how about more Rangolis? https://t.co/qTYyLT8bIO pic.twitter.com/Ust8S7hOPn

— Kannan Gopinathan (@naukarshah) December 29, 2019


ಇನ್ನೊಂದು ಆಘಾತಕಾರಿ ಬೆಳವಣಿಗೆ‌ ನಡೆದಿದೆ.‌ ಇದು ಬಿಜೆಪಿ ನಾಯಕರು ಎಷ್ಟು ಹೀನಾಯ ಮಟ್ಟಕ್ಕೆ ಇಳಿದಿದ್ದಾರೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಂತಿದೆ. “ಸಿಎಎ ಪರವಾದ ಸಮಾವೇಶಗಳಲ್ಲಿ ತ್ರಿವರ್ಣ ಧ್ವಜಗಳಿಗಿಂತ ಬಿಜೆಪಿ ಧ್ವಜಗಳು ಹೆಚ್ಚಾಗಿವೆ.‌ ಆದರೆ, ಕಾಯ್ದೆ ವಿರುದ್ಧದ ಹೋರಾಟದಲ್ಲಿ ಭಾರತದ ಧ್ವಜ ರಾರಾಜಿಸುತ್ತಿದೆ” ಎಂದು ಟ್ವೀಟ್ ಮಾಡಿದ್ದ ಹಿರಿಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಅವರನ್ನು “ಉಗ್ರ ಸಂಘಟನೆ ಐಸಿಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಆಗಲು ಲಾಯಕ್ಕಲ್ಲವೇ” ಎಂಬ ಪ್ರಶ್ನೆ ಇಟ್ಟು ಆನ್ ಲೈನ್ ಸಮೀಕ್ಷೆಗೆ ಮುಂದಾಗಿದ್ದ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ನಡೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಭಾರತೀಯ ಸಂಪಾದಕರ ಒಕ್ಕೂಟವು ಬಿಜೆಪಿ ನಾಯಕನ ಟ್ವೀಟ್ ಗೆ ಕಟುಶಬ್ದಗಳಲ್ಲಿ ತಿರುಗೇಟು ನೀಡಿದೆ. ಇದಾದ ಕೆಲವೇ ತಾಸುಗಳಲ್ಲಿ ಮತ್ತೊಂದು ಟ್ವೀಟ್ ಮಾಡಿರುವ ಮಾಳವಿಯಾ “ಸಿಎಎ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಹಾಕಲಾಗುತ್ತಿದೆ” ಎಂದು ಆರೋಪಿಸಿ ನಕಲಿ ವಿಡಿಯೋ ಹಂಚುವ ಮೂಲಕ ಮುಸ್ಲಿಂ ಸಮುದಾಯವನ್ನು ಅಪರಾಧಿಯಾಗಿಸುವ ಯತ್ನ ಮಾಡಿದ್ದಾರೆ.‌ ಆದರೆ, ಇದನ್ನು ಸತ್ಯಶೋಧಕ ಜಾಲತಾಣ ಆಲ್ಟ್ ನ್ಯೂಸ್ ಸುಳ್ಳು ಎಂದು ಸಾಬೀತುಪಡಿಸಿ ಬಿಜೆಪಿ ನಾಯಕನ ಬಂಡವಾಳ ಬಯಲು ಮಾಡಿದೆ.

#Gujarat. Pictures of protest against CAA and NRC in Ahmedabad @DeccanHerald pic.twitter.com/4iYWuM3MJ0

— satish jha. (@satishjha) December 29, 2019


ಇನ್ನು, ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿಮಾಡಿದ ಆರೋಪದಲ್ಲಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು 498 ಮಂದಿಯ ಆಸ್ತಿ ಮುಟ್ಟುಗೋಲು ಹಾಕಿ ನಷ್ಟ ಭರಿಸಲು ಮುಂದಾಗಿದೆ ಎನ್ನಲಾಗಿದೆ. ಈ ಸಂಬಂಧ ಕೆಲವರಿಗೆ ನೋಟಿಸ್ ಸಹ ನೀಡಲಾಗಿದೆ. ಇದನ್ನು ಸಮರ್ಥಿಸುವ ದಾಟಿಯಲ್ಲಿ ಮೋದಿಯೂ ಮಾತನಾಡಿದ್ದಾರೆ.‌ ಈ ಮಾದರಿಯನ್ನು ಅನುಸರಿಸಿರುವ ಕರ್ನಾಟಕದ ಬಿಜೆಪಿ ಸರ್ಕಾರವು ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಇಬ್ಬರು ಸಂತ್ರಸ್ತರ ಕುಟುಂಬಕ್ಕೆ ಘೋಷಿಸಿದ್ದ ತಲಾ ಹತ್ತು ಲಕ್ಷ ರುಪಾಯಿ ಪರಿಹಾರ ನೀಡುವುದಿಲ್ಲ ಎನ್ನುವ ಮೂಲಕ ಅಮಾನವೀಯವಾಗಿ ನಡೆದುಕೊಂಡಿದೆ.

Assam minister Himanta Biswa Sarma takes 5-km helicopter ride to attend function in Tezpur as anti-CAA protesters block NH-15 between Tezpur and Ghoramari opposing his visit

— Press Trust of India (@PTI_News) December 29, 2019


ಇಷ್ಟಕ್ಕೆ ಸುಮ್ಮನಾಗದ ಬಿಜೆಪಿ ಸಚಿವರಾದ ಆರ್ ಅಶೋಕ್ ಹಾಗೂ ಸಿ ಟಿ ರವಿಯವರು ಆದಿತ್ಯನಾಥ್ ಸರ್ಕಾರದ ಮಾದರಿಯಲ್ಲಿ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರ ಸಂಪತ್ತು ಮುಟ್ಟುಗೋಲು ಹಾಕಿಕೊಳ್ಳಲಾಗದು ಎಂದಿದ್ದಾರೆ. ಇದು ಹೋರಾಟವನ್ನು ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ನಡೆ ಎಂಬುದನ್ನು ಬಿಜೆಪಿ‌ ನಾಯಕರಿಗೆ ತಿಳಿಸಿ ಹೇಳುವವರು ಯಾರು? ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರನ್ನು ಮೆಚ್ಚಿಸಲು ಹೇಳಿಕೆ ನೀಡುತ್ತಿರುವ ಅಶೋಕ್ ಹಾಗೂ ರವಿ ಅಂಥ ಹೊಣೆಗೇಡಿ ನಾಯಕರಿಗೆ ತಾವು ಬಿಜೆಪಿ ಹಾಗೂ ಮೋದಿ ವರ್ಚಸ್ಸಿಗೆ ಮಸಿ ಬಳಿಯುತ್ತಿದ್ದೇವೆ ಎಂಬ ಕಹಿಸತ್ಯವನ್ನು ಅರ್ಥ ಮಾಡಿಸುವವರು ಯಾರು?

Scores of students from universities across the country have been protesting against the Citizenship (Amendment) Act (CAA).https://t.co/lRzkw56lgz

— The Indian Express (@IndianExpress) December 29, 2019


ಹೆಚ್ಚು ಓದಿದ ಸ್ಟೋರಿಗಳು

ಬಿರುಗಾಳಿಯಾಗಿರುವ ರಾಹುಲ್ ಗಾಂಧಿ ಸುನಾಮಿ ಆಗುಬಲ್ಲರೆ?

ಯಾರಾದರೂ ಒಳಗೆ ಬಂದರೆ ಅಟ್ಟಾಡಿಸಿ ಹೊಡಿರಿ, ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ’ : ಸಚಿವ ಮುನಿರತ್ನ ವಿವಾದಾತ್ಮಕ ಹೇಳಿಕೆ

ನಂದಿನಿ ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಣ ಆದೇಶ ಹಿಂಪಡೆದ FSSAI.. ಕನ್ನಡಿಗರು ಟೀಕೆ ಬೆನ್ನಲ್ಲೇ ನಿರ್ಧಾರ..!

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಗ್ರಾಮ ಪಂಚಾಯ್ತಿ ಅಧಿಕಾರಿಗೆ ಲಂಚ ನೀಡಲು ಹಣವಿಲ್ಲದೆ, ಎತ್ತುಗಳನ್ನೇ ನೀಡಲು ಮುಂದಾದ ರೈತ
Top Story

ಗ್ರಾಮ ಪಂಚಾಯ್ತಿ ಅಧಿಕಾರಿಗೆ ಲಂಚ ನೀಡಲು ಹಣವಿಲ್ಲದೆ, ಎತ್ತುಗಳನ್ನೇ ನೀಡಲು ಮುಂದಾದ ರೈತ

by ಪ್ರತಿಧ್ವನಿ
March 28, 2023
ತೀರ್ಥಹಳ್ಳಿ ಕಾಂಗ್ರೆಸ್​​ ಟಿಕೆಟ್​​ಗಾಗಿ ಸಿದ್ದರಾಮಯ್ಯ-ಡಿಕೆಶಿ ಆಪ್ತರ ನಡುವೆ ಟಫ್​ ಫೈಟ್​​​: ಎಐಸಿಸಿಗೆ ಬಂಡಾಯದ ಭಯ
Top Story

ತೀರ್ಥಹಳ್ಳಿ ಕಾಂಗ್ರೆಸ್​​ ಟಿಕೆಟ್​​ಗಾಗಿ ಸಿದ್ದರಾಮಯ್ಯ-ಡಿಕೆಶಿ ಆಪ್ತರ ನಡುವೆ ಟಫ್​ ಫೈಟ್​​​: ಎಐಸಿಸಿಗೆ ಬಂಡಾಯದ ಭಯ

by ಮಂಜುನಾಥ ಬಿ
March 27, 2023
10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ..!
Top Story

10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ..!

by ಪ್ರತಿಧ್ವನಿ
April 1, 2023
ಅಗಲಿದ ಹಿರಿಯ ಚೇತನ ಪ.ಮಲ್ಲೇಶ್ ನೆನಪಲ್ಲಿ‌..ತಾವು ನಂಬಿದ ಗಾಂಧಿ ತತ್ವಗಳಿಗೆ ಕೊನೆಯವರೆಗೂ ನಿಷ್ಟರಾಗಿಯೇ ಉಳಿದ ಹೋರಾಟಗಾರ..!
ಅಂಕಣ

ಅಗಲಿದ ಹಿರಿಯ ಚೇತನ ಪ.ಮಲ್ಲೇಶ್ ನೆನಪಲ್ಲಿ‌..ತಾವು ನಂಬಿದ ಗಾಂಧಿ ತತ್ವಗಳಿಗೆ ಕೊನೆಯವರೆಗೂ ನಿಷ್ಟರಾಗಿಯೇ ಉಳಿದ ಹೋರಾಟಗಾರ..!

by ನಾ ದಿವಾಕರ
March 28, 2023
SIDDARAMAIAH : ಆಪ್ತ ಸ್ನೇಹಿತ ಧ್ರುವ ನಾರಯಾಣ್‌ ಬಗ್ಗೆ ಸಿದ್ದು ಭಾವುಕ ನುಡಿ | DHRUVA NARAYAN | DARSHAN |
ಇದೀಗ

SIDDARAMAIAH : ಆಪ್ತ ಸ್ನೇಹಿತ ಧ್ರುವ ನಾರಯಾಣ್‌ ಬಗ್ಗೆ ಸಿದ್ದು ಭಾವುಕ ನುಡಿ | DHRUVA NARAYAN | DARSHAN |

by ಪ್ರತಿಧ್ವನಿ
March 29, 2023
Next Post
ಪ್ರತಿಭಟನೆ ಹತ್ತಿಕ್ಕಲು ಸರ್ಕಾರದಿಂದ ಸಾಫ್ಟ್ ವೇರ್!

ಪ್ರತಿಭಟನೆ ಹತ್ತಿಕ್ಕಲು ಸರ್ಕಾರದಿಂದ ಸಾಫ್ಟ್ ವೇರ್!

ಹೊಣೆಗೇಡಿ ಪೊಲೀಸರ ಬೆನ್ನಿಗೆ ಯುಪಿ ಸರ್ಕಾರ

ಹೊಣೆಗೇಡಿ ಪೊಲೀಸರ ಬೆನ್ನಿಗೆ ಯುಪಿ ಸರ್ಕಾರ

ಬದಲಾದ ಎಐಸಿಸಿ: ಕೆಪಿಸಿಸಿ ಆಯ್ಕೆ ತೀರ್ಪಿಗೆ ಮುನ್ನ ವಾದ ಆಲಿಸಲು ನಿರ್ಧಾರ

ಬದಲಾದ ಎಐಸಿಸಿ: ಕೆಪಿಸಿಸಿ ಆಯ್ಕೆ ತೀರ್ಪಿಗೆ ಮುನ್ನ ವಾದ ಆಲಿಸಲು ನಿರ್ಧಾರ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist