I’mಸಿಎಂ ಸಿದ್ದರಾಮಯ್ಯ (am siddaramaiah) ಪತ್ನಿ ಮುಡಾದಿಂದ (Muda) ಪಡೆದ ಅಕ್ರಮ ನಿವೇಶನಗಳನ್ನ ವಾಪಸ್ ಮಾಡೋ ನಿರ್ಧಾರ ಕೈಗೊಂಡಿರೋದು ಒಂದು ಪೊಲಿಟಿಕಲ್ ಡ್ರಾಮ (Political drama) ಅಂತ ಬಿ.ವೈ ವಿಜಯೇಂದ್ರ (BY vijayendra) ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, ಸಿಎಂ ಪತ್ನಿ ನಿವೇಶನಗಳನ್ನ ವಾಪಸ್ ಕೊಡೋ ನಿರ್ಧಾರಕ್ಕೆ ಬರುವ ಮೂಲಕ ತಪ್ಪು ನಡೆದಿದೆ ಎಂಬುದನ್ನ ಒಪ್ಪಿಕೊಂಡಿದ್ದಾರೆ. ಕಾನೂನಿನ ಕುಣಿಕೆಯಿಂದ ಪಾರಾಗೋಕೆ ಹೀಗೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ತಮ್ಮ ಪತ್ನಿ ಪಾರ್ವತಿ (Parvathi) ಹೆಸರಿನಲ್ಲಿ 14 ನಿವೇಶನ ಖರೀದಿಸಿರುವುದು ಒಂದು ಕಡೆಯಾದ್ರೆ,ರಾಜ್ಯದ ಮುಖ್ಯಮಂತ್ರಿ ಆದ್ಮಲೆ, ಅವರ ಹಿಂಬಾಲಕರಿಗೆ ಸುಮಾರು 5 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ ನಿವೇಶನವನ್ನು ಹಂಚಿಕೆ ಮಾಡಿದ್ದಾರೆ ಅಂತ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.